ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಜೋತುಬಿದ್ದ ವಿದ್ಯುತ್ ತಂತಿ: ಅಪಾಯಕ್ಕೆ ಆಹ್ವಾನ

Rashmi Kasaragodu
Updated On : 7 Jul 2014, 1:40 am

ಹಾಸನ ನಗರದ ಬಿ.ಎಂ.ರಸ್ತೆಯ ಉಡಿಸಲಮ್ಮ ದೇವಾಲಯಕ್ಕೆ ಹೊಂದಿ ಕೊಂಡಂತಿರುವ ದೇವಾಲಯದ ಪಕ್ಕದ ರಸ್ತೆಯಲ್ಲಿ ಕೆ.ಇ.ಬಿ. ಅಧಿಕಾರಿಗಳ ನಿರ್ಲಕ್ಷ್ಯದಿಂದಲೋ ಅಥವಾ ಮನೆ  ಮಾಲಿಕರುಗಳ ಬೇಜವಾಬ್ದಾರಿ ಯಿಂದಲೋ ವಿದ್ಯುತ್ ಕಂಬದಿಂದ ಹೊರ ಬಂದಿರುವ ವಿದ್ಯುತ್ ತಂತಿಗಳು ರಸ್ತೆಗೆ ಜೋತುಬಿದ್ದಿದ್ದು ಸುಲಭವಾಗಿ ಜನ ಸಾಮಾನ್ಯರ ಕೈಗೆಟುಕುವಂತಿದ್ದು ಅಪಾಯಕ್ಕೆ ಆಹ್ವಾನ ನೀಡಿದೆ. ದಿನವೂ ಸಾವಿರಾರು ಜನರು ಈ  ರಸ್ತೆಯಲ್ಲಿ ಸಂಚರಿಸುತ್ತಾರೆ. ಇದು ಜನರಲ್ಲಿ ವಿದ್ಯುತ್ ಅವಘಡದ ಭೀತಿಯನ್ನು ತಂದೊಡ್ಡಿದೆ. ಈ ಬಗ್ಗೆ ಈಗಾ ಗಲೇ ಕೆಇಬಿ ಅಧಿಕಾರಿಗಳಿಗೆ ದುರಸ್ತಿ ಬಗ್ಗೆ  ಮನವಿ ಮಾಡಿದ್ದರೂ  ಅಧಿಕಾರಿಗಳು ಯಾವ ಕ್ರಮವನ್ನು ಕೈ ಗೊಂಡಿಲ್ಲ ಎನ್ನುತ್ತಾರೆ ಸ್ಥಳೀಯರು. ಭಕ್ತರು ದೇವಾಲಯಕ್ಕೆ ಇಲ್ಲಿ ಸಂಚರಿಸುತ್ತಿದ್ದು ಯಾವ ಕ್ಷಣದಲ್ಲಾದರೂ ವಿದ್ಯುತ್ ತಂತಿ ಬೀಳುವ ಸಾಧ್ಯತೆ ಹೆಚ್ಚಾಗಿ ಎದ್ದು ಕಾಣುತ್ತಿದೆ. ವಿದ್ಯುತ್ ತಂತಿ ಬಿದ್ದು ಏನಾದರೂ ವಿದ್ಯುತ್ ಅವಘಡ ಸಂಭವಿಸುವ ಮುನ್ಸೂಚನೆ ಕಂಡು ಬರುತ್ತಿದೆ. ಅಧಿಕಾರಿಗಳು ಎಚ್ಚೆತ್ತು ಈ ಬಗ್ಗೆ ಕ್ರಮ ತೆಗೆದು ಕೊಳ್ಳಬೇಕಿದೆ.
ಟಿ  ವಸಂತ, ಶಾರದ, ಗುರುಪಾದಪ್ಪ, ಮಹೇಶ, ಪ್ರಸನ್ನ, ಹರೀಶ
ಟಿ ಗುಂಡಿ ಬಿದ್ದ ರಸ್ತೆಗಳು
ಆಲೂರು ಪಟ್ಟಣದ ಮುಖ್ಯರಸ್ತೆ ಕಾಮಗಾರಿ ಪ್ರಾರಂಭವಾಗಿದೆ. ರಸ್ತೆಯಲ್ಲಿ ಮಾರುದ್ದದ ಗುಂಡಿಗಳು ಬಿದ್ದಿವೆ. ಈ ಗುಂಡಿಗಳಿಗೆ ಡಾಂಬರೀಕರಣಗೊಳಸಿ ಮುಚ್ಚುವ ಕೆಲಸ ಮಾಡದ ಪಟ್ಟಣ ಪಂಚಾಯ್ತಿಯವರು ಕಲ್ಲು ಮಣ್ಣು ತಂದು ಸುರಿದಿದ್ದಾರೆ. ಇದರಿಂದಾಗಿ ಪಟ್ಟಣದದ ತುಂಬೆಲ್ಲಾ ಧೂಳುಮಯ  ವಾತಾವರಣ ನಿರ್ಮಾಣವಾಗಿದೆ.
ಅಲ್ಲದೆ ರಸ್ತೆಗೆ ಸುರಿದಿರುವ ಜೆಲ್ಲಿ ಕಲ್ಲುಗಳು ದಾರಿ ಹೋಕರಿಗೆ ಹಾಗೂ ಅಂಗಡಿ ಮುಂಗಟ್ಟುಗಳಿಗೆ (ವಾಹನಗಳ ಚಕ್ರಕ್ಕೆ ಸಿಲುಕಿ ಹಾರಿ) ಬಡಿದು ಅಲವರಿಗೆ ಗಾಯಗಳಾಗಿದ್ದು,  ಈ ಬಗ್ಗೆ ಹಲವಾರು ಬಾರಿ  ಪಟ್ಟಣ ಪಂಚಾಯ್ತಿ ಅಧ್ಯಕ್ಷರಿಗೆ ಮನವಿ ಮಾಡಿದ್ದು ಅದ್ಯಕ್ಷರ ಮಾತಿಗೆ ಎಂಜಿನಿಯರಾಗಲಿ ಸಂಬಂಧಪಟ್ಟ ಅಧಿಕಾರಿಗಳಾಗಲಿ ಬೆಲೆ ನೀಡುತ್ತಿಲ್ಲ.
ಪಟ್ಟಣದ ರಸ್ತೆಯ ಸ್ಥಿತಿ ಹೇಗಿದೆ ಎಂಬುದಕ್ಕೆ ಗುಂಡಿಗಿಳಿದ ಸಕ್ಕಿಂಗ ಮಷಿನ್ ಟ್ರ್ಯಾಕ್ಟರ್ ತುಂಡಾಗಿ ರಸ್ತೆ ಮಧ್ಯದಲ್ಲೆ ನಿಂತಿರುವುದು ಇದಕ್ಕೊಂದು ನಿದರ್ಶನ. ಈಗಲಾದರೂ ಸಂಬಂಧಪಟ್ಟವರು ರಸ್ತೆ ದುರಸ್ತಿಗೆ ಮುಂದಾಗಲಿ.
ಟಿ  ರಂಗೇಗೌಡ,  ದಯಾನಂದ,  ತಿರಮಲ, ವೆಂಕಟೇಶ, ರಮೇಶ, ಯೋಗೇಶ
ಟಿ ರಸ್ತೆ ಸರಿಪಡಿಸಲು ಆಗ್ರಹ
ಬೇಲೂರು ತಾಲೂಕು ಕೆಸಗೋಡು, ನೀಲನಹಳ್ಳಿ, ಮಲ್ಲೇಶನಗರ ಕಾಲೋನಿಯ ರಸ್ತೆಗಳು ತೀವ್ರ ಹದೆಗೆಟ್ಟಿದ್ದು, ಜನ-ಜಾನುವಾರುಗಳು ತಿರುಗಾಡಲು ಯೋಗ್ಯವಾಗಿಲ್ಲ.
ಇಂಟಿಯತೊಳಲಿನಿಂದ ಮೂಲೇವಳ್ಳಿವರೆಗೂ ಸಹ ರಸ್ತೆ ತೀವ್ರ ಹದಗೆಟ್ಟಿದೆ.  ಈ ರಸ್ತೆಯಲ್ಲಿ  ವಾಹನಗಳ  ಸಂಚಾರಕ್ಕೆ  ತೀವ್ರ ತೊಂದರೆಯಾಗಿದೆ. ಈ ಬಗ್ಗೆ  ಹಲವು ಬಾರಿ ಸಂಬಂಧಪಟ್ಟ ಅಧಿಕಾರಿಗಳ  ಗಮನನಕ್ಕೆ  ತಂದರೂ  ಪ್ರಯೋಜನವಾಗಿಲ್ಲ. ನಿರ್ಲಕ್ಷ್ಯ ಧೋರಣೆ ತಾಳಲಾಗುತ್ತಿದೆ. ಇದು ಹೀಗೇ ಮುಂದುವರಿದರೆ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಬೇಕಾಗುತ್ತದೆ. ರಸ್ತೆಯಲ್ಲಿ ಮಳೆ ಗಾಲ ಬಂದರೆ ಸಾಕು ಗುಂಡಿಗೊಟರುಗಳಿಗೆ ನೀರು  ತುಂಬಿ  ರಸ್ತೆ ಎಲ್ಲಿದೆ ಎಂಬುದೇ ಗೊತ್ತಾಗುವುದಿಲ್ಲ. ಮಳೆಗಾಲ ಹತ್ತಿರವಾಗುತ್ತಿದ್ದು, ಇದಕ್ಕೂ ಮೊದಲು ರಸ್ತೆಯಲ್ಲಿ ಉಂಟಾಗಿರುವ ದೈತ್ಯ ಗುಂಡಿಗಳನ್ನು  ಮುಚ್ಚಿಸಿ,  ಡಾಂಬರೀಕರಣ ಕೈಗೊಳ್ಳಬೇಕು.
ಬೇಲೂರು ತಾಲೂಕು ಬಿಕ್ಕೋಡು ಹೋಬಳಿಯ  ಅಂಕಿಹಳ್ಳಿ  ಸೊಸೈಟಿ, ಕೆಸಗೋಡಿನಿಂದ  ಅಂಕೀಹಳ್ಳಿಯವರೆಗೂ ಹಿರುವಾಟೆಯ ರೈತರಿಗೆ ಅನುಕೂಲವಾಗುವಂತೆ ಎಚ್ಡಿಸಿಸಿ ಬ್ಯಾಂಕಿನ ಶಾಖಾ ಕಚೇರಿಯನ್ನು  ತೆರೆಯಬೇಕು.ಪ್ರಸ್ತುತ ಶಾಖಾ ಕಚೇರಿಯು ತುಂಬಾ ದೂರವಿದೆ. ಮಳೆಗಾಲದಲ್ಲಿ  ಮೈಲುಗಟ್ಟಲೆ ರೈತರು ನಡೆದುಕೊಂಡು ಹೋಗಬೇಕಿದೆ. ಸರಿಯಾದ ಸಮಯಕ್ಕೆ  ಬಸ್ಸು ಬಾರದ ಕಾರಣ ನಡೆದೇ ಹೋಗಬೇಕಾಗುತ್ತದೆ. ಆದ್ದರಿಂದ ಬ್ಯಾಂಕಿನ ವ್ಯವಸ್ಥಾಪಕರು ಈ ಕೂಡಲೇ ಶಾಖಾ ಕಚೇರಿಯನ್ನು  ಕೆಸಗೋಡಿನಲ್ಲಿ  ಪ್ರಾರಂಭಿಸಬೇಕು.
ಟಿ   ಕೆ.ಎಸ್. ತೀರ್ಥಪ್ಪ,  ಸಮಾಜ ಸೇವಕ,ಬೇಲೂರು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement