ಯಗಚಿ ಯೋಜನೆ ಜಾರಿಗೆ ಆಗ್ರಹ
ಸಚಿವ ಎಂ.ಬಿ. ಪಾಟೀಲ್ಗೆ ನಿಯೋಗದಿಂದ ಮನವಿ ಸಲ್ಲಿಕೆ
ಜಾವಗಲ್ ಹೋಬಳಿ ಕೆರೆಗಳಿಗೆ ನೀರು ಪೂರೈಸುವ ಯೋಜನೆ
ಕನ್ನಡಪ್ರಭ ವಾರ್ತೆ ಜಾವಗಲ್ ಜು. 6
ಹೋಬಳಿಯ ಕೆರೆ ಕಟ್ಟೆಗಳಿಗೆ ಯಗಚಿ ಜಲಾಶಯದ ನೆರೆ ನೀರನ್ನು ತುಂಬಿಸುವ 79 ಕೋಟಿ ರು. ವೆಚ್ಚದ ಯೋಜನೆಯನ್ನು ಕೂಡಲೆ ಜಾರಿಗೊಳಿಸುವತೆ ನಿಯೋಗವೊಂದು ಬೆಂಗಳೂರಿಗೆ ತೆರಳಿ ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ್, ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಜಯಪ್ರಕಾಶ್ ಅವರಿಗೆ ಎಸ್ಟಿಮೇಟ್ ಹಾಗೂ ಮನವಿಪತ್ರವನ್ನು ನೀಡಿತು.
ಮಾಜಿ ಪ್ರಧಾನ ಮಲ್ಲೇಶಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಾಜಿ ಎಪಿಎಂಸಿ ಅಧ್ಯಕ್ಷ ಮಹದೇವಪ್ಪ, ಕಲ್ಲಳ್ಳಿ ನಾಗರಾಜು ಮಾಜಿ ಜಿಪಂ ಸದಸ್ಯ ಯಶೋಧರ ಕುಮಾರ್ ನೇತೃತ್ವದ ನಿಯೋಗದಲ್ಲಿ 50 ಜನರು ಪಾಲ್ಗೊಂಡಿದ್ದರು.
ನೀರಿನ ಸಮಸ್ಯೆ: ಶಾಸಕ ವೈ.ಎನ್. ರುದ್ರೇಶ್ ಗೌಡ, ಎ.ಮಂಜು ಅವರೊಂದಿಗೆ ಸಚಿವರನ್ನು ಭೇಟಿ ಮಾಡಿ ಹೋಬಳಿಯ ಬರಗಾಲ ಪರಿಸ್ಥಿತಿ, ಅಂತರ್ಜಲ ಕುಸಿತ, ಕುಡಿಯುವ ನೀರಿನ ಬವಣೆ ಬಗ್ಗೆ ವಸ್ತುಸ್ಥಿತಿಯನ್ನು ವಿವರಿಸಿ ಯೋಜನೆಯನ್ನು ತ್ವರಿತವಾಗಿ ಮಾಡಿಸಿ ಜನಜಾನುವಾರುಗಳಿಗೆ ಅನುಕೂಲ ಮಾಡಿಕೊಡುವಂತೆ ಮನವರಿಕೆ ಮಾಡಿಕೊಡಲಾಯಿತು.
ಸಚಿವರು ಉತ್ತರಿಸಿ, ನೀರಿನ ಸಾಮರ್ಥ್ಯ ಹಾಗೂ ನೀರಿನ ಹರಿವಿನ ಸಾಧ್ಯತೆ ಬಗ್ಗೆ ವರದಿ ತರಿಸಿಕೊಂಡು ಅನುಕೂಲ ಮಾಡಿಸಿಕೊಡುವುದಾಗಿ ಭರವಸೆ ನೀಡಿದರು. ನಿಯೋಗದಲ್ಲಿ ಅಪ್ಪಿಹಳ್ಳಿ ವಿರುಪಾಕ್ಷಪ್ಪ, ಹಚಿದ್ರಾಳು ಪಹಣಿ ರಾಜಣ್ಣ ಸದಾಶಿವಪ್ಪ ಬಸವರಾಜು, ಹಳೇಬೀಡು ಜೀಪ್ ಚಂದ್ರು, ಟಿಎಂ ವಿಜಯಕುಮಾರ್, ಶಾಂತಕುಮಾರ್, ಮಹದೇವ್, ಪರಮೇಶ್, ಸಿದ್ದಣ್ಣ ಮತ್ತಿತರರು ಇದ್ದರು.