ಅನಕೃ ಒಂದು ನೆನಪು ಕಾರ್ಯಕ್ರಮ ಇಂದು
ಅರಕಲಗೂಡು: ಇಲ್ಲಿನ ವಿದ್ವಾನ್ ಆರ್.ಕೆ. ಪದ್ಮನಾಭ ಅಭಿಮಾನಿಗಳ ಸಂಘ, ವಿಷ್ಣುವರ್ಧನ್ ಅಭಿಮಾನಿಗಳ ಸಂಘ, ನಿವೇದಿತಾ ವಿದ್ಯಾಶಾಲೆ ಮತ್ತು ಹಾಸನ ಪಿಯು ಕಾಲೇಜು ಇವುಗಳ ಸಂಯುಕ್ತಾಶ್ರಯದಲ್ಲಿ ಕಾದಂಬರಿ ಸಾರ್ವಭೌಮ ಅನಕೃ ಒಂದು ನೆನಪು ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಮಂಗಳವಾರ ಮಧ್ಯಾಹ್ನ 4 ಗಂಟೆಗೆ ಪಟ್ಟಣದ ಶಿಕ್ಷಕರ ಭವನದಲ್ಲಿ ನಡೆಯಲಿರುವ ಕಾರ್ಯಕ್ರಮದ ಉದ್ಘಾಟನೆಯನ್ನು ಶಾಸಕ ಎ.ಮಂಜು ಅವರು ನೆರವೇರಿಸುವರು. ಅಧ್ಯಕ್ಷತೆಯನ್ನು ವಿದ್ವಾನ್ ಆರ್.ಕೆ. ಪದ್ಮನಾಭ ವಹಿಸಲಿದ್ದು, ರಂಗಕರ್ಮಿ ಮಾಸ್ಟರ್ ಹಿರಣ್ಣಯ್ಯ, ರಾಜ್ಯ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ.ಬಂಜೆಕೆರೆ ಜಯಪ್ರಕಾಶ್, ಜಿಲ್ಲಾ ಪಂಚಾಯಿತಿ ಸದಸ್ಯ ವಿ.ಎ. ನಂಜುಂಡಸ್ವಾಮಿ, ಪಪಂ ಅಧ್ಯಕ್ಷೆ ಮಂಜುಳಾ ಯೋಗೇಶ್, ಪ್ರಗತಿ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಡಾ.ಕೆ.ಎಂ. ಸತೀಶ್, ಡಾ.ವಿಷ್ಣುವರ್ಧನ್ ಸಾಂಸ್ಕೃತಿಕ ಪರಿಷತ್ತಿನ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ್, ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ರೇವಣ್ಣ, ಹಾಸನ ಪಿಯು ಕಲೇಜು ಪ್ರಾಂಶುಪಾಲ ನವೀನ್ ಇತರರು ಉಪಸ್ಥಿತರಿರುವರು.