ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಆರ್ಟಿಇ ಅವ್ಯವಹಾರ ತನಿಖೆ ಕಣ್ಣೊರೆಸುವ ತಂತ್ರ

Rashmi Kasaragodu
Updated On : 8 Jul 2014, 1:47 am

ಹಾಸನ:  ಆರ್ಟಿಇ ಕಾಯ್ದೆ ಅಡಿ ಶಾಲೆಗಳು ಗರಿಷ್ಠ ಹಣ ಪಡೆಯುವ ದುರುದ್ದೇಶದಿಂದ ಸುಳ್ಳು ಆಡಿಟ್ ವರದಿ ನೀಡಿರುವ ಬಗ್ಗೆ ತನಿಖಾ ತಂಡದಲ್ಲಿ ಶಿಕ್ಷಣ ಇಲಾಖೆಯವರೇ ಇರುವುದನ್ನು ಜಿಲ್ಲೆಯ ಶಿಕ್ಷಣ ಹಕ್ಕು ಸಮಿತಿಯ ಅಧ್ಯಕ್ಷ ಬಿ.ಜಿ. ಗೋಪಾಲಕೃಷ್ಣ ಆತಂಕ ವ್ಯಕ್ತ ಪಡಿಸಿದ್ದಾರೆ.
 ಪತ್ರಿಕಾ ಹೇಳಿಕೆ ನೀಡಿರುವ ಅವರು, ಉಚಿತ ಮತ್ತು ಕಡ್ಡಾಯ ಶಿಕ್ಷಣ (ಆರ್ಟಿಇ) ಕಾಯ್ದೆಯ ಅನ್ವಯ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗಾಗಿ ಶೇ 25 ರಷ್ಟು ಮೀಸಲಾತಿ ಇರುವ ಅಡ್ಡಿ ಖಾಸಗಿ ಶಾಲೆಗಳಲ್ಲಿ ದಾಖಲಾದ ಮಕ್ಕಳ ಶುಲ್ಕದ ಬಾಪ್ತು ಇಲಾಖೆಯು ಪ್ರತಿ ಮಗುವಿಗೆ ವಾರ್ಷಿಕ ಗರಿಷ್ಠ 11,848 ರು.ಗಳನ್ನು ಮರುಪಾತಿ ಮಾಡುತ್ತೆ. ಈ ಹಣವನ್ನು ಸಂಪೂರ್ಣವಾಗಿ ಪಡೆಯುವ ದುರುದ್ದೇಶದಿಂದ ಶಾಲೆಗಳು ರಾಮನ ಲೆಕ್ಕ, ಕೃಷ್ಣನ ಲೆಕ್ಕ ನೀಡಿರುವ ಬಗ್ಗೆ ಸಾರ್ವಜನಿಕರಿಂದ ವ್ಯಾಪಕ ದೂರುಗಳು ಬಂದಿವೆ.
ಕಾಟಾಚಾರಕ್ಕೆ ತನಿಖೆ: ಈ ಹಿನ್ನೆಲೆಯಲ್ಲಿ ಎಚ್ಚೆತ್ತ ಇಲಾಖೆ, ತಮ್ಮ ಇಲಾಖಾ ಸಿಬ್ಬಂದಿಯಿಂದಲೇ  ಶುಲ್ಕ ಮರು ಪಾವತಿಯ ಆಂತರಿಕ ಲೆಕ್ಕ ಪರಿಶೋಧನೆ ನಡೆಸಲು ಮುಂದಾಗಿರುವುದರಿಂದ ಸತ್ಯ ಹೊರಬರುವುದಿಲ್ಲ. ಸಾರ್ವಜನಿಕರ ಕಣ್ಣೊರೆಸಲು ಕಾಟಾಚಾರಕ್ಕೆ ತನಿಖೆ ನಡೆಸಲಾಗುತ್ತಿದೆ ಎಂದಿದ್ದಾರೆ.
 ಆದ್ದರಿಂದ ಶಿಕ್ಷಣ ಇಲಾಖೆಯ ಸಿಬ್ಬಂದಿಯನ್ನು ಹೊರತುಪಡಿಸಿದ ತಂಡಗಳನ್ನು ರಚಿಸಿ, ತನಿಖೆ ನಡೆಸಬೇಕು. ತನಿಖೆಯ ಸಮಯದಲ್ಲಿ ಕಳೆದ ಸಾಲಿನ ಮತ್ತು ಪ್ರಸಕ್ತ ಸಾಲಿನ ಆಡಿಟ್ ವರದಿಗಳನ್ನು  ಕೂಲಂಕಶವಾಗಿ  ತುಲನೆ ಮಾಡಬೇಕು. ಶಿಕ್ಷಣ ಸಂಸ್ಥೆಗಳು ತಪ್ಪೆಸಗಿದ್ದಾವೆಂದು ಕಂಡುಬಂದಲ್ಲಿ ಕಠಿಣ ಕ್ರಮಕ್ಕೆ ಶಿಫಾರಸು ಮಾಡಬೇಕೆಂದು ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement