ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಕರಗಡ ಕಾಮಗಾರಿ ಪರಿಶೀಲನೆ

Rashmi Kasaragodu
Updated On : 8 Jul 2014, 1:50 am

ಬೇಲೂರು: ತಾಲೂಕಿನ ಮಾಳೇನಹಳ್ಳಿ ಗ್ರಾಮದಲ್ಲಿ ನಡೆಯುತ್ತಿರುವ ಕಾಮಗಾರಿಯನ್ನು ಪರಿಶೀಲಿಸಲು ಲಕ್ಯಾ  ಹೋಬಳಿಯಿಂದ ಸಾವಿರಾರು ಜನರು ಬಂದ ಸಂದರ್ಭದಲ್ಲಿ ಪೊಲೀಸರು ಅನುವು ಮಾಡಿಕೊಡದ ಕಾರಣ ಕೆಲಕಾಲ ಉದ್ವಿಗ್ನ ಪರಿಸ್ಥಿತಿ ಉಂಟಾಗಿತ್ತು.
 ತಾಲೂಕಿನ ಮಾಳೇನಹಳ್ಳಿ ಗ್ರಾಮದ ಬಳಿ ನಡೆಯುತ್ತಿರುವ ಕರಗಡ ಕುಡಿಯುವ ನೀರಿನ ಏತ ನೀರಾವರಿ ಕಾಮಗಾರಿಯನ್ನು ಪರಿಶೀಲಿಸಲು ಚಿಕ್ಕಮಗಳೂರು ಜಿಲ್ಲೆಯ ಲಕ್ಯಾ ಹಾಗೂ ಸುತ್ತಮುತ್ತಲಿನ ಗ್ರಾಮದಿಂದ 2 ಸಾವಿರಕ್ಕೂ ಹೆಚ್ಚು ಗ್ರಾಮಸ್ಥರು ನೂರಾರು ವಾಹನಗಳಲ್ಲಿ ಸೋಮವಾರ ಬಂದಿದ್ದರು.   
ಸ್ಥಳೀಯರಲ್ಲಿ ಭೀತಿ: ನೀರು ಹರಿಸುವ ಕಾಮಗಾರಿಗೆ ಸಂಬಂಧಿಸಿದಂತೆ ಶುಕ್ರವಾರ ನಡೆದ ಮಾರಾಮಾರಿ ಪ್ರಕರಣದಿಂದ ಇನ್ನೂ ಚೇತರಿಸಿಕೊಳ್ಳದ ಮಾಳೆನಹಳ್ಳಿ ಗ್ರಾಮಸ್ಥರು ಮತ್ತೆ ಸಾವಿರಾರು ಜನರು ಬಂದಿರುವುದನ್ನು ಕಂಡು ಕಂಗಾಲಾಗಿದ್ದರು.
 ಕಡಿದಾದ ಹಾಗೂ ಇಕ್ಕಟ್ಟಿನ ಇಳಿಜಾರು ಪ್ರದೇಶದಲ್ಲಿ  ಬಂಡೆ ಒಡೆಯವ ಕಾಮಗಾರಿ  ನಡೆಯುತ್ತಿರುವ ಕಾರಣ ಒಮ್ಮೆಗೆ ಸಾವಿರಾರು ಜನರು ನುಗ್ಗಿದರೆ ಸಾವು ನೋವು ಸಂಭವಿಸುತ್ತದೆ ಎಂದು ಪೊಲೀಸರು ಮುಂಜಾಗ್ರತೆಯ ಕ್ರಮವಾಗಿ ಜನರನ್ನು ತಡೆದರು.
ಪೊಲೀಸರ ಜತೆ ಆಕ್ರೋಶ: ಬಂಡೆ ಇರುವ ಸ್ಥದಲ್ಲಿ ಹಿಟಾಚಿಯಿಂದ ನಡೆಯುತ್ತಿರುವ ಕಾಮಗಾರಿಯನ್ನು ಪರಿಶೀಲಿಸಲು ಪೊಲೀಸರು ತಮಗೆ ಬೇಕಂತಲೇ ಅವಕಾಶ ನೀಡುತ್ತಿಲ್ಲ ಎಂದು ಆಕ್ರೋಶಗೊಂಡ ಚಿಕ್ಕಮಗಳೂರು ಜಿಲ್ಲೆಯ ಗ್ರಾಮಸ್ಥರು ಪೊಲೀಸರ ಮೇಲೆ ಹರಿಹಾಯ್ದರು.
 ಕೆಲಸ ಮಾಡುತ್ತಿರುವ ಸ್ಥಳಕ್ಕೆ ಜನರು ನುಗ್ಗಿದರೆ ಹೆಚ್ಚಿನ ಅನಾಹುತವಾಗುತ್ತದೆ ಎಂದು ವೃತ್ತ ನಿರೀಕ್ಷಕ ಗಣೇಶ್ ಪರಿಪರಿಯಾಗಿ ಮನವಿ ಮಾಡಿದರೂ ಜನರು ಕಿವಿಗೊಡದೆ ಪೊಲೀಸರ ವಿರುದ್ಧ ದಿಕ್ಕಾರ ಕೂಗಿದರರು.
ಮುಖಂಡರಿಂದ ಪರಿಶೀಲನೆ: ಆಗ ಅರಸಿಕೆರೆ ಡಿವೈಎಸ್ಪಿ ಸಜಿತ್ ಆಗಮಿಸಿ ಮೊನ್ನೆ ಗಲಾಟೆಯಾಗಿದೆ, ನಂತರ ಕೆಲಸ ನಡೆಯುತ್ತಿದೆ. ಕಾಮಗಾರಿ ನಡೆಯುತ್ತಿರುವ ಜಾಗಕ್ಕೆ ಮತ್ತೆ ಮತ್ತೆ ನೀವು ಬಂದು ತಂದರೆ ಕೊಟ್ಟರೆ ಹೇಗೆ ಎಂದು ಪ್ರಶ್ನಿಸಿದರಲ್ಲದೆ, ನಿಮ್ಮಲ್ಲೇ 10 ಮಂದಿ ಮುಖ್ಯಸ್ಥರು ಬಂದು ಕಾಮಗಾರಿ ಕೆಲಸವನ್ನು ಪರಿಶೀಲಿಸುವಂತೆ ಸೂಚಿಸಿದರು.
 ನಂತರ 10 ಮಂದಿ ಮಖ್ಯಸ್ಥರು ಕಾಮಗಾರಿಯನ್ನು ಪರಿಶೀಲಿಸಿ ತೃಪ್ತಿ ವ್ಯಕ್ತಪಡಿಸಿದ ನಂತರ ಜನರು ಹಿಂತಿರುಗಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement