ಕುಡಿತದ ಚಟ ಬಿಟ್ಟುಬಿಡಿ
ನುಗ್ಗೇಹಳ್ಳಿ; ಕುಡಿತ ಹಾಗೂ ಸಿಗರೇಟ್ ಬಿಟ್ಟು, ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಿ ಎಂದು ಒಕ್ಕಲಿಗರ ಸಂಘದ ಕಾರ್ಯಾಧ್ಯಕ್ಷ ಬಿ.ಪಿ ಮಂಜೇಗೌಡ ಹೇಳಿದರು.
ಗಂಗನಘಟ್ಟದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಕಾರೇಹಳ್ಳಿ ಬಜಗೂರು ವಲಯ ಪ್ರಗತಿ ಬಂದು ಸ್ಚಸಹಾಯ ಸಂಘಗಳ ಒಕ್ಕೂಟಗಳ ವತಿಯಿಂದ ನಡೆದ 702ನೇ ಮದ್ಯವರ್ಜನ ಶಿಬಿರದ ಕಾರ್ಯಕ್ರಮವನ್ನು ಉದ್ಗಾಟಿಸಿ ಮಾತನಾಡಿದರು. ಮದ್ಯ ಕುಡಿಯುವುದನ್ನು ಬಿಟ್ಟಾಗ ಮರ್ಯಾದೆ ಇರುತ್ತದೆ. ಜೀವನ ಮುಖ್ಯವಾದದ್ದು. ಮನುಷ್ಯನ ಜನ್ಮ ಅಪರೂಪವಾದದದ್ದು ಕುಡಿದು ಜೀವನ ಹಾಳು ಮಾಡಿಕೊಳ್ಳಬೇಡಿ ಎಂದರು.
ಒಳ್ಳೆಯ ಆಹಾರ ಸೇವಿಸಿ, ಏನಾದರೂ ಉದ್ಯೋಗ ಮಾಡಿ. ಯಾವುದೇ ಚಟಕ್ಕೆ ಬಲಿಯಾಗಬೇಡಿ. ರೈತರು, ರೈತರ ಮಕ್ಕಳು ಯಾವುದೇ ಕಾರಣಕ್ಕೂ ಕುಡಿಯಬಾರದು ಎಂದರು. ಈ ಸಂದರ್ಭದಲ್ಲಿ ಯೋಜನಾಧಿಕಾರಿ ಪಿ. ಶ್ರೀನಿವಾಸ್, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಜಗದೀಶ್, ಮದ್ಯವರ್ಜನ ಶಿಬಿರದ ಅಧ್ಯಕ್ಷ ನಟೇಶ್, ಜಗದೀಶ್, ಮಂಜುನಾಥ್, ಮೇಲ್ವಚಾರಕ ಚಂದ್ರಹಾಸ್, ಶಿವಣ್ಣ, ರವೀಶ್ ಮತ್ತಿತರರು ಇದ್ದರು.