ಕ್ರೀಡೆ ಮಾನಸಿಕ ಸಾಮರ್ಥ್ಯಕ್ಕೆ ಪೂರಕ
ಬೇಲೂರು: ಮಾನಸಿಕ ಹಾಗೂ ದೈಹಿಕ ಸದೃಢತೆಗೆ ಕ್ರೀಡೆ ಅವಶ್ಯವಾಗಿದ್ದು, ಪರಿಪೂರ್ಣ ಆರೋಗ್ಯಕ್ಕಾಗಿ ಕ್ರೀಡೆಯಲ್ಲಿ ಭಾಗವಸಿ ಎಂದು ಬೇಲೂರು ತಹಸೀಲ್ದಾರ್ ಬಿ.ಎ. ಜಗದೀಶ್ ಕರೆ ನೀಡಿದರು.
ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಅವರಣದಲ್ಲಿ ತಾಲೂಕು ಕಾರ್ಯನಿತರ ಪತ್ರಕರ್ತರ ಸಂಘದ ಪತ್ರಿಕಾ ದಿನಾಚರಣೆ ಅಂಗವಾಗಿ ಭಾನುವಾರ ಏರ್ಪಡಿಸಿದ್ದ ಕ್ರಿಕೆಟ್ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿ, ಶಾಲಾ-ಕಾಲೇಜು ಶಿಕ್ಷಣ ವ್ಯವಸ್ಥೆಯಲ್ಲಿ ಕ್ರೀಡಾ ಮಹತ್ವವನ್ನು ತಿಳಿಸಿಬೇಕು, ಕ್ರೀಡೆಯಲ್ಲಿ ಭಾಗವಹಿಸಿದಾಗ ರಾಷ್ಟ್ರ ರಾಜ್ಯ ಮಟ್ಟಕ್ಕೆ ಹೋಗಬೇಕು ಎಂಬ ನಿಲುವು ತಾಳದೆ, ಕ್ರೀಡೆಯಿಂದ ಆರೋಗ್ಯ ಕಾಪಾಡುವ ಗುಟ್ಟು ಅರಿಯಬೇಕು ಎಂದು ತಿಳಿಸಿದರು.ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಎನ್. ಅನಂತು ಮಾತನಾಡಿದರು. ಪಂದ್ಯಾವಳಿಯಲ್ಲಿ ವೃತ್ತ ನೀರೀಕ್ಷ ಕೆ.ಎಲ್. ಗಣೇಶ್, ಪುರಸಭೆ ಮುಖ್ಯಾಧಿಕಾರಿ ಬಸವರಾಜು, ಡಾ. ನರಸೇಗೌಡ, ವಕೀಲ ಸಂಘದ ಅಧ್ಯಕ್ಷ ಲಿಂಗೇಶ್, ಎಚ್.ಬಿ. ಮದನಗೌಡ, ಡಿ.ಬಿ. ಮೋಹನ್ ಕುಮಾರ್, ಬಿ.ಎಂ. ರವೀಶ್, ರಾಘವೇಂದ್ರ ಹೊಳ್ಳ, ತೊ.ಚ.ಅನಂತಸುಬ್ಬರಾಯ ಇದ್ದರು.