ಪತ್ರಿಕಾ ದಿನಚರಣೆ
ಬೇಲೂರು: ಸ್ವಾತಂತ್ರ್ಯ ಪೂರ್ವದಲ್ಲಿ ಪತ್ರಿಕೆಗಳು ದೇಶದಲ್ಲಿ ನೀಡಿದ ಸಂದೇಶ ಹಾಗೂ ಸ್ವಾತಂತ್ರ್ಯ ತರುವಲ್ಲಿ ವಹಿಸಿದ ಪಾತ್ರ ಸ್ಮರಣೀಯ. ಇಂದೂ ಸಹ ಪತ್ರಿಕೆಗಳು ಭ್ರಷ್ಟಾಚಾರ ಇಂತಹ ಹಲವು ಸಮಾಜ ಘಾತಕರನ್ನು ಬಯಲು ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ ಎಂದು ನಿವೃತ್ತ ತಹಸೀಲ್ದಾರ್ ಅಣ್ಣೇಗೌಡ ಹೇಳಿದರು. ವೇಲಾಪುರಿ ಸಾಹಿತ್ಯ ವೇದಿಕೆ ಮನೆ-ಮನೆ ಸಾಹಿತ್ಯ ಗೋಷ್ಠಿ ಹಾಗೂ ಪತ್ರಿಕಾ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಹಿರಿಯ ಪತ್ರಕರ್ತರಾದ ಶಿವಾನಂದ ತಗಡೂರು, ತೊ.ಚ.ಅನಂತಸುಬ್ಬರಾಯ, ವೇಲಾಪುರಿ ಸಾಹಿತ್ಯ ವೇದಿಕೆ ಅಧ್ಯಕ್ಷ ಎಚ್.ಎಂ.ದಯಾನಂದ ಮತ್ತು ಸರ್ಕಾರಿ ನಿವೃತ್ತ ನೌಕರರ ಸಂಘದರಾಜೇಗೌಡ ಮಾತನಾಡಿದರು. ಇದೇ ಸಂದರ್ಭದಲ್ಲಿ ಕುಮಾರಸ್ವಾಮಿ ವಿರಚಿತ ಕೊಡಗು ಜಿಲ್ಲಾ ದರ್ಶನ ಕೃತಿಯನ್ನು ಬಿಡುಗಡೆ ಮಾಡಲಾಯಿತು.