ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಪರಿಸರ ರಕ್ಷಣೆ ಎಲ್ಲರ ಹೊಣೆ: ನ್ಯಾ.ಶೀನಪ್ಪ

Rashmi Kasaragodu
Updated On : 8 Jul 2014, 1:50 am

ಅರಕಲಗೂಡು: ಪರಿಸರವನ್ನು ಸಂರಕ್ಷಣೆ ಮಾಡಿಕೊಳ್ಳವುದು ನಮ್ಮೆಲ್ಲರ ಕರ್ತವ್ಯ ಎಂದು ಅರಿತು ಸಾಗುವ ಅವಶ್ಯಕತೆ ಇದೆ ಎಂದು ಇಲ್ಲಿನ ನ್ಯಾಯಾಲಯದ ನ್ಯಾಯಾಧೀಶ ಶೀನಪ್ಪ ತಿಳಿಸಿದ್ದಾರೆ. ವನಮಹೋತ್ಸವದ ಅಂಗವಾಗಿ ಇಲ್ಲಿನ ನ್ಯಾಯಾಲಯದ ಆವರಣದಲ್ಲಿ ಸಸಿಗಳನ್ನು ನೆಟ್ಟು ಮಾತನಾಡಿದ ಅವರು ಉತ್ತಮ ಪರಿಸರವನ್ನು ಕಾಯ್ದುಕೊಂಡರೆ ನಮ್ಮೆಲ್ಲರ ಬದುಕು ಹಸನಾಗುತ್ತದೆ.ಪ್ರತಿಯೊಬ್ಬರೂ ಉತ್ತಮ ಪರಿಸರ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಚಿಂತನೆ ನಡೆಸಬೇಕೆಂದರು. ನ್ಯಾ. ಗಿರೀಶ್, ನ್ಯಾ. ಕೂರ್ಣಿಕಾಂತ್ ಢಾಕು, ವಕೀಲರ ಸಂಘದ ಅಧ್ಯಕ್ಷ ಚಂದ್ರಪ್ಪ, ಕಾರ್ಯದರ್ಶಿ ಚಂದ್ರಶೇಖರ್, ವಲಯ ಅರಣ್ಯಾಧಿಕಾರಿ ಇತರರು ಇದ್ದರು.
ಮಳೆಗಾಗಿ ವರುಣ ಜಪ
ಚನ್ನರಾಯಪಟ್ಟಣ:  ರಾಜ್ಯದಲ್ಲಿ ಮಳೆ ಕ್ಷೀಣಿಸುತ್ತಿದ್ದು, ಉತ್ತಮ ಮಳೆಗಾಗಿ ವರುಣ ಜಪ ನಡೆಸಿದ ಪಟ್ಟಣದ ಹೊರಭಾಗದಲ್ಲಿರುವ ಗದ್ದೆ ರಾಮೇಶ್ವರ ದೇವಾಲಯದಲ್ಲಿ ಸೋಮವಾರ ಪರ್ಜನ್ಯ ಜಪ ನಡೆಯಿತು.
 ಪಟ್ಟಣದ ಬ್ರಾಹ್ಮಣ ಯುವವೇದಿಕೆ, ಬ್ರಾಹ್ಮಣ ಮಹಾಸಭಾ,ಋತ್ವಿಕ್ ಸಭಾ, ಬ್ರಾಹ್ಮಣ ಯುವ ವೇದಿಕೆ ಹಾಗೂ ಬ್ರಾಹ್ಮಣ ಮಹಿಳಾ ವೇದಿಕೆ ಸದಸ್ಯರುಗಳು ಪಟ್ಟಣದ ಹೊರ ಭಾಗದಲ್ಲಿರುವ ಗದ್ದೆ ರಾಮೇಶ್ವರ ದೇವಾಲಯದಲ್ಲಿ ವಿವಿಧ ಪೂಜೆ ಹಾಗೂ ಅಭಿಷೇಕ ನಡೆಸಿದರು.  ಸೋಮವಾರ ಪ್ರಾತಕಾಲದಿಂದ ರಾಮೇಶ್ವರನಿಗೆ ರುದ್ರಾಭೀಷೇಕ, ಪಂಚಾಮೃತಾಭಿಷೇಕ, ಶತಾವರ ರುದ್ರಾಭಿಷೇಕದ ನಂತರ ಗರ್ಭಗುಡಿಯಲ್ಲಿನ ರಾಮೇಶ್ವರ ಲಿಂಗದೆತ್ತರಕ್ಕೆ ಜಲವನ್ನು ತುಂಬಿಸಿ ಪೂಜೆ ಸಲ್ಲಿಸಿದರು.  25ಕ್ಕೂ ಹೆಚ್ಚು ಋತ್ವಿಕರು ವಿವಿದ ಮಂತ್ರಪಠನೆಗಳನ್ನು ಸಲ್ಲಿಸಿ ವರುಣದೇವ ಬರಗಾಲವನ್ನು ನೀಗಿಸುವಂತೆ  ಶಿವನಲ್ಲಿ ಪ್ರಾರ್ಥಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement