ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಪಶು ಚಿಕಿತ್ಸಾ ಕೇಂದ್ರ; ರು. 24.80 ಲಕ್ಷ

Rashmi Kasaragodu
Updated On : 8 Jul 2014, 1:48 am

ಜಾವಗಲ್: ಜಾವಗಲ್ ಹೋಬಳಿಯ ನೇರ್ಲಿಗೆ ಹಾಗೂ ಕೋಳಗುಂದ ಗ್ರಾಮಗಳಲ್ಲಿ ಪ್ರಾಥಮಿಕ ಪಶುಚಿಕಿತ್ಸಾ ಕೇಂದ್ರಗಳ ಕಟ್ಟಡ ನಿರ್ಮಿಸಲು ತಲಾ 24.80 ಲಕ್ಷ ಮಂಜೂರಾಗಿದೆ ಎಂದು ಜಾವಗಲ್ ಪಶುಚಿಕಿತ್ಸಾಲಯದ ಸಹಾಯಕ ನಿರ್ದೇಶಕ ಡಾ.ಶ್ರೀರಂಗನಾಥ್ ತಿಳಿಸಿದರು. ಆರ್ಐಡಿಎಫ್ನಿಂದ ಎರಡು ಕಟ್ಟಡಗಳ ನಿರ್ಮಾಣಕ್ಕೆ 49.60 ಲಕ್ಷ ಬಿಡುಗಡೆಯಾಗಿದ್ದು ಸದ್ಯದಲ್ಲೇ ಕಾಮಗಾರಿ ಪ್ರಾರಂಭಿಸಲಾಗುವುದೆಂದರು. ಆಗಸ್ಟ್ನಲ್ಲಿ ಹೋಬಳಿಯಾದ್ಯಂತ ಕಾಲುಬಾಯಿ ಜ್ವರ ಲಸಿಕೆ ಹಾಕುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ರೈತರು ತಮ್ಮಜಾನುವಾರುಗಳಿಗೆ ತಪ್ಪದೇ ಲಸಿಕೆ ಹಾಕಿಸುವಂತೆ ಮನವಿ ಮಾಡಿದರು.
 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement