ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಪ್ರತಿಷ್ಠೆ ಕಣವಾದ ಕರಗಡ ಏತ ನೀರಾವರಿ

Rashmi Kasaragodu
Updated On : 8 Jul 2014, 1:49 am

 ಎ. ರಾಘವೇಂದ್ರ ಹೊಳ್ಳ
ಕನ್ನಡಪ್ರಭ ವಾರ್ತೆ  ಬೇಲೂರು  ಜು. 7
ಕರಗಡ ಏತ ನೀರಾವರಿ ಕಾಮಗಾರಿ ವಿಳಂಬಕ್ಕೆ ಸಂಬಂಧಿಸಿದಂತೆ ಕಳೆದ ಶುಕ್ರವಾರ ನಡೆದ ದಾಂದಲೆ, ಹಲ್ಲೆ ಪ್ರಕರಣದಿಂದ ಮಾಳೆನಹಳ್ಳಿ ಗ್ರಾಮಸ್ಥರು ಭಯಭೀತರಾಗಿದ್ದು ತಮ್ಮ ನೋವಿಗೆ ತಾಲೂಕು, ಜಿಲ್ಲಾ ಆಡಳಿತ ಮತ್ತು ಜನಪ್ರತಿನಿಧಿಗಳು ಸ್ಪಂದಿಸುತ್ತಿಲ್ಲ ಎಂಬುದು ಇವರ ಅಳಲಾಗಿದೆ.
 ಕರಗಡ ಏತ ನೀರಾವರಿ ಕಾಮಗಾರಿ ವಿಳಂಬಕ್ಕೆ ಸಂಬಂದಿಸಿದಂತೆ  ಮಾಳೆನಹಳ್ಳಿ  ಗ್ರಾಮಕ್ಕೆ ಶುಕ್ರವಾರ ಚಿಕ್ಕಮಗಳೂರು ಜಿಲ್ಲೆಯಿಂದ ಸಾವಿರಾರು ಜನರು ಬಂದ ಸಂದರ್ಭದಲ್ಲಿ ಮಾತಿಗೆ ಮಾತು ಬೆಳೆದು ಮಾರಾಮಾರಿಯ ಹಂತಕ್ಕೆ ತಿರುಗಿತ್ತು.
ಬಿಜೆಪಿ ನೇತೃತ್ವ; ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷೆ ರೇಖಾಹುಲಿಯಪ್ಪಗೌಡ, ಜಿಲ್ಲಾ ಪಂಚಾಯತ್ ಸದಸ್ಯರಾದ ಕಲ್ಮರುಡಪ್ಪ, ನಿರಂಜನ್, ಚಿಕ್ಕದೇವನೂರು ರವಿ ಇನ್ನೂ ಮುಂತಾದ ಬಿಜೆಪಿ ಮುಖಂಡರ ನೇತೃತ್ವ ವಹಿಸಿದ್ದು ವಿವಾದಾತ್ಮಕ ವಿಷಯದ ಅರಿವಿದ್ದರೂ ಮುಂಜಾಗ್ರತಾ ಕ್ರಮವನ್ನು ಕೈಗೊಳ್ಳದೆ ಹೇಗೆ ಜನರನ್ನು ಕರೆತಂದರು ಎಂಬ ಗೊಂದಲ ಗ್ರಾಮಸ್ಥರನ್ನು ಕಾಡುತ್ತಿದೆ.
 ನೂರಾರು ಜನರಿರುವ ಗುಂಪನ್ನು ಹದ್ದುಬಸ್ತಿನಲ್ಲಿಡುವುದೇ ಕಷ್ಟವಾಗಿರುವಾಗ ಸಾವಿರಾರು ಜನರನ್ನು ಬೆರಳೆಣಿಕೆಯ ಬಿಜೆಪಿ ನಾಯಕರು ನಿಯಂತ್ರಣದಲ್ಲಿಡಲು ಸಾಧ್ಯವೇ, ಚಿಕ್ಕಮಗಳೂರಿನ ಪೊಲೀಸರಿಗೋ, ಬೇಲೂರು ಪೊಲೀಸರಿಗೋ ಮಾಹಿತಿ ನೀಡಿ ಕರೆ ತರಬಹುದಿತ್ತು ಅಥವಾ ಸಾವಿರಾರು ಜನ ನೂರಾರು ವಾಹನಗಳಲ್ಲಿ ಬರುತ್ತಿರುವ ವಿಚಾರ ತಿಳಿಯದಷ್ಟು ಪೊಲೀಸ್ ಗುಪ್ತಚರ ಇಲಾಖೆ ವಿಫಲವಾಗಿದೆಯೇ ಎಂಬದು ಮೂಳೇನಹಳ್ಳಿ ಗ್ರಾಮಸ್ಥರ ಪ್ರಶ್ನೆ.
ಮುಗುಳವಳ್ಳಿ ಪಿಕಪ್ನಿಂದ ಚಿಕ್ಕಮಗಳೂರು  ತಾಲೂಕು ದೇವಿಕೆರೆಗೆ ನೀರು ಹರಿಸಿದಲ್ಲಿ ಈ ಭಾಗದ ಸುಮಾರು 41 ಗ್ರಾಮಗಳಿಗೆ ಕುಡಿಯುವ ನೀರಿನ ಅನುಕೂಲವಾಗಲಿದೆ ಎಂಬ ನಿಟ್ಟಿನಲ್ಲಿ ಲಕ್ಯಾ ಹೋಬಳಿಯ ಸಾವಿರಾರು ಗ್ರಾಮಸ್ಥರು 3  ಜೆಸಿಬಿ ಯಂತ್ರಗಳನ್ನು ಬಳಸಿ ತಾತ್ಕಾಲಿಕ ರಸ್ತೆಯನ್ನು ಒಡೆದು ಹಾಕಿದ12 ಪೈಪ್ಗಳನ್ನು  ಅಳವಡಿಸಿ, ನಾಲೆಯಲ್ಲಿ ನೀರು ಸರಾಗವಾಗಿಹರಿಯಲು ಅನುಕೂಲವಾಗುವಂತೆ ಟ್ರಂಚ್ ತೋಡಿದ್ದರು. ಪೈಪ್ ಅಳವಡಿಸಿದ ನಂತರ ಗ್ರಾಮಕ್ಕೆ ತೆರಳಲು ತಾತ್ಕಾಲಿಕ ರಸ್ತೆಯನ್ನು ಸಹ ನಿರ್ಮಿಸಿರುವ ಬಗ್ಗೆ ಮೂಳೇನಹಳ್ಳಿ ಗ್ರಾಮಸ್ಥರು ಯಾವುದೇ ತಕರಾರಿಲ್ಲ.
   2010ರಲ್ಲಿ ತಾಲೂಕಿನ ಕರಗಡ ದುಮ್ಮಿಕೆರೆಯಿಂದ ಬೆಳೆವಾಡಿ ದೊಡ್ಡಕೆರೆಗೆ ಯಗಚಿ ಜಲಾಶಯದಿಂದ ನೀರು ಹರಿಸುವ ಯೋಜನೆಯನ್ನು ರೂಪಿಸಿದ್ದು, ಈ ಯೋಜನೆ ಆರಂಭಗೊಂಡಿದ್ದು ಅಲ್ಲಿಂದ ಇಲ್ಲಿಯವರೆಗೆ ಗ್ರಾಮದ ಜನರಿಗೆ ನೆಮ್ಮದಿಯಿಲ್ಲ.   ಪ್ರತಿ ದಿನ ಬಂಡೆ ಸಿಡಿಸುತ್ತಿದ್ದು, ಕಲ್ಲುಗಳು ಮನೆಗಳ ಮೇಲೆ ಬೀಳುತ್ತಿವೆ. ಹಲವಾರು ಮನೆಗಳು ಕುಸಿದು ಬಿದ್ದಿವೆ, ಪರಿಹಾರ ಮಾತ್ರ ನೀಡಿಲ್ಲ. ಇದರಿಂದ ಬೆಳೆ ಹಾಳಾಗುತ್ತಿದ್ದು, ಗ್ರಾಮದಲ್ಲಿ ಜನರ ಜೀವನ ದುಸ್ತರವಾಗಿದೆ. ಆದರೂ ಯಾವುದೇ ಅಧಿಕಾರಿ ಗಮನ ಹರಿಸುತ್ತಿಲ್ಲ ಎಂಬುದು ಗ್ರಾಮಸ್ಥರ ಅಳಲು.


ಕುಡಿವ ನೀರಿಗಾಗಿ ಬಡಿದಾಟ


ಕುಡಿಯವ ನೀರಿಗಾಗಿ ರೈತರು, ಗ್ರಾಮಸ್ಥರು ಬಹುತೇಕ ಕಡೆ ನ್ಯಾಯಯುತವಾಗಿ  ಹೋರಾಟ ಪ್ರತಿಭಟನೆ ನಡೆಸುತ್ತಿರುವುದರಲ್ಲಿ ತಪ್ಪೆನಿಲ್ಲ. ಆದರೆ ಆದೇ ಹೋರಾಟ ದಾಂದಲೆ ರೂಪಕ್ಕೆ ತಿರುಗಿ ಮಾರಾಮಾರಿ, ಹಲ್ಲೆ, ದೌರ್ಜನ್ಯದ ದಾರಿ ಹಿಡಿದು 20 ಕ್ಕೂ ಹೆಚ್ಚು ಮಂದಿಗೆ ತೀವ್ರ ಸ್ವರೂಪದ ಗಾಯವಾಗಿ ಆಸ್ಪತ್ರೆಗೆ ಸೇರಿದ್ದಾರೆ.  ಒಂದು ವೇಳೆ ಗಲಾಟೆಯಲ್ಲಿ ಯಾರಾದರೂ ಸಾವನ್ನಪ್ಪಿದ್ದರೆ ಇದರ ಹೋಣೆಯನ್ನು ಯಾರು  ಹೊರುತ್ತಿದ್ದರು ಎಂಬುದು  ಮಾಳೇನಹಳ್ಳಿ ಗ್ರಾಮಸ್ಥರ ಪ್ರಶ್ನೆಯಾಗಿದೆ.
 ಚಿಕ್ಕಮಗಳೂರು ಜಿಲ್ಲೆಯ ಲಕ್ಯಾ ಹೋಬಳಿ ಹಾಗು ಸುತ್ತಮುತ್ತಲಿನ  25 ಹಳ್ಳಿಗಳಿಂದ ಸಾವಿರಾರು ಜನರನ್ನು ಬಿಜೆಪಿ ನಾಯಕರು ನೂರಾರು ವಾಹನಗಳಲ್ಲಿ ಕರೆತಂದಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement