ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ವಿಜಯನಗರ ಬಡಾವಣೆಗೆ ಮೂಲಸೌಲಭ್ಯ ಕಲ್ಪಿಸಿ

Rashmi Kasaragodu
Updated On : 8 Jul 2014, 1:48 am

ಕನ್ನಡಪ್ರಭ ವಾರ್ತೆ, ಹಾಸನ, ಜು. 7
ನಗರದ ಬಡಾವಣೆಗಳಲ್ಲಿ ಬೆಳವಣಿಗೆ ಆಗುತ್ತಿರುವುದರಲ್ಲಿ ನಗರದ  ಹೊರವಲಯದ ವಿಜಯನಗರ ಬಡಾವಣೆಯೂ ಒಂದು. ಇಲ್ಲಿ ಮೂಲಭೂತ ಸೌಲಭ್ಯಗಳದ್ದೇ ದೊಡ್ಡ ಕೊರತೆ.
 ಇಲ್ಲಿಯ ನಿವಾಸಿಗಳೆಲ್ಲಾ ಸೇರಿ ವಿಜಯನಗರ ಬಡಾವಣೆ ಕ್ಷೇಮಾಭಿವೃದ್ಧಿ ಸಂಘವನ್ನು ರಚಿಸಿ ಇಲ್ಲಿಯ ಸೌಲಭ್ಯಗಳ ಕುರಿತು ಪ್ರತಿಭಟಿಸಿದ್ದರ ಫಲವಾಗಿ ಅರ್ಧ ಭಾಗ ಒಳಚರಂಡಿ ಕೆಲಸವಾಗಿದೆ. ಇನ್ನೂ ಅರ್ಧ ಭಾಗ ಒಳಚರಂಡಿ ಕೆಲಸ ಆಗಬೇಕಾಗಿದೆ.
ಈ ಬಡಾವಣೆಯ ಸ್ವಚ್ಛತೆ ಬಗ್ಗೆ ಪ್ರಾಧಿಕಾರಕ್ಕೆ ಎಷ್ಟು ಬಾರಿ ಮನವಿ ಸಲ್ಲಿಸಿದರೂ ಗಮನ ಹರಿಸುತ್ತಿಲ್ಲ. ಬೀದಿ ದೀಪಗಳ ನಿರ್ವಹಣೆ ಆಗುತ್ತಿಲ್ಲ, ಚರಂಡಿ ಮತ್ತು ರಸ್ತೆಗಳ ದುರಸ್ತಿಯಾಗದೇ ನೀರು ಅಲ್ಲಲ್ಲಿ ನಿಂತು ಸೊಳ್ಳೆಗಳ ಕಾಟ ಜಾಸ್ತಿಯಾಗಿದೆ.
 ಈ ಬಡಾವಣೆಯಲ್ಲಿ 2 ಪಾರ್ಕ್ಗಳಿದ್ದು, ಇವುಗಳ ನಿರ್ವಹಣೆ ಬಗ್ಗೆ ಪ್ರಾಧಿಕಾರ ಗಮನ ಹರಿಸುತ್ತಿಲ್ಲ. ಸಾರ್ವಜನಿಕರೇ ಅರಣ್ಯ ಇಲಾಖೆ ಮತ್ತು  ಬಿಸಿಆರ್ಟಿ ಸಹಕಾರದಿಂದ ಪಾರ್ಕ್ಗಳಲ್ಲಿ ಗಿಡಗಳನ್ನು  ನೆಟ್ಟು ಕಾಪಾಡುತ್ತಿದ್ದಾರೆ.
ಇನ್ನಾದರೂ ಅಭಿವೃದ್ಧಿ ಪ್ರಾಧಿಕಾರ ಬಡಾವಣೆಗೆ ಬೇಕಾದ ಸೌಲಭ್ಯಗಳನ್ನು ಕಲ್ಪಿಸುವಂತೆ ಅಲ್ಲಿಯ ನಾಗರಿಕರು ಆಗ್ರಹಿಸಿದ್ದಾರೆ.  


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement