ಹಲಸು ಮಾರಾಟ ಬಿರುಸು
ಜಾವಗಲ್: ಏಕಾದಶಿ ಹಬ್ಬದ ಪ್ರಯುಕ್ತ ಸಂತೆಯಲ್ಲಿ ಹಲಸಿನ ಹಣ್ಣಿನ ವ್ಯಾಪಾರ ಬಲು ಜೋರಾಗಿತ್ತು. ಎಲ್ಲರೂ ಫಲಹಾರಕ್ಕಾಗಿ ಬಳಸುವ ಕಾರಣದಿಂದ ಗ್ರಾಹಕರು ಇತ್ತ ಹೆಚ್ಚಿನ ಒಲವು ತೋರಿದ್ದದ್ದು ಕಂಡು ಬಂದಿತು ಉಳಿದಂತೆ ಜಾವಗಲ್ನಲ್ಲಿ ನಡೆದ ಭಾನುವಾರದ ಸಂತೆಯಲ್ಲಿ ಕೊಬ್ಬರಿ ಬೆಲೆಯಲ್ಲಿ ಸ್ವಲ್ಪ ಪ್ರಮಾಣದ ಏರಿಕೆ ಕಂಡಿತು. ಕ್ವಿಂಟಾಲ್ಗೆ 13,500- 13,700 ಆಗಿತ್ತು. ತೆಂಗಿನಕಾಯಿ 1,000ಕ್ಕೆ 10ಸಾವಿರದಿಂದ16 ಸಾವಿರ ರು.ಗಳಾಗಿತ್ತು.
ಈರುಳ್ಳಿ ಬೆಲೆ ಕಿಲೋಗೆ ರು. 25- 30 ಆಗಿತ್ತು. ತೆಂಗಿನಕಾಯಿ ಹಾಗೂ ಈರುಳ್ಳಿ ಬೆಲೆಯಲ್ಲಿ ಏರಿಕೆ ಕಂಡಿದ್ದು, ಪ್ರತಿನಿತ್ಯ ಬಳಸುವ ಆಹಾರ ಪದಾರ್ಥಗಳಾಗಿವೆ. ಅವುಗಳನ್ನು ಜನಸಾಮಾನ್ಯರು ಉಪಯೋಗಿಸುವುದೇ ದುಸ್ತರವಾಗಿದೆ ಎಂದು ಗ್ರಾಹಕರೊಬ್ಬರು ತಿಳಿಸಿದರು. ಉಳಿದಂತೆ ತರಕಾರಿಗಳ ಬೆಲೆಯಲ್ಲೂ ಏರಿಕೆ ಕಂಡಿದೆ. ಬೀನ್ಸ್, ಕ್ಯಾರೆಟ್, ಜವಳಿಕಾಯಿ, ಬೆಂಡೆಕಾಯಿ ಕಿಲೋಗೆ ರು. 40, ಆಲೂಗೆಡ್ಡೆ, ಬದನೆಕಾಯಿ, ಹೀರೆಕಾಯಿ ಕಿಲೋಗೆ ರು. 30 ಆಗಿತ್ತು.