ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಅನಿರ್ದಿಷ್ಟಾವಧಿ ಮುಷ್ಕರ

Rashmi Kasaragodu
Updated On : 9 Jul 2014, 1:45 am

ಕನ್ನಡಪ್ರಭ ವಾರ್ತೆ  ಹಾಸನ  ಜು. 8
ನಾನಾ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಪ್ರಿಕಾಟ್ ಮೆರಿಡೆನ್ ಕಾರ್ಮಿಕರು ಮಂಗಳವಾರದಿಂದ ಅನಿರ್ದಿಷ್ಟಾವಧಿ ಮುಷ್ಕರ ಪ್ರಾರಂಭಿಸಿದ್ದಾರೆ.
 ನಗರದ ಹೊರವಲಯದ ಕೈಗಾರಿಕಾ ಪ್ರದೇಶದಲ್ಲಿ ಇರುವ ಪ್ರಿಕಾಟ್ ಮೆರಿಡೆನ್ ಮೆಡಿಕಲ್ ಪ್ರಾಡೆಕ್ಟ್ ಕಾರ್ಖಾನೆಯ ಕಾರ್ಮಿಕರು ಕೆಲಸ ಬಹಿಷ್ಕರಿಸಿ ಕಾರ್ಖಾನೆಯ ಮುಂದೆ ಧರಣಿ  ನಡೆಸಿದರು.
ಸಂಬಳ ನೀಡಿಲ್ಲ: ಕಳೆದ ಎರಡು ವರ್ಷಗಳ ಹಿಂದೆ ಕಾಲೇಜ್ಗಳಲ್ಲಿ ಕ್ಯಾಂಪಸ್ ಇಂಟರ್ವ್ಯೂ ಮೂಲಕ ನಮ್ಮನ್ನೆಲ್ಲಾ ಟ್ರೈನಿ ಆಪರೇಟರ್ ಕೆಲಸಕ್ಕೆ ಆಯ್ಕೆ ಮಾಡಿಕೊಂಡಿದ್ದರು. ಕೆಲಸಕ್ಕೆ ಸೇರಿದ ಮೊದಲ ವರ್ಷ ವೇತನ ನೀಡದೆ ಟ್ರೈನಿಯಾಗಿ ದುಡಿಸಿಕೊಂಡಿದ್ದರು. ನಂತರ ತಿಂಗಳಿಗೆ 7 ಸಾವಿರ ರು.ನಂತೆ ವೇತನವನ್ನು ನೀಡುತ್ತಿದ್ದಾರೆ. ಆದರೇ ಈವರೆಗೂ ನಮ್ಮನ್ನು ಗಣನೆಗೆ ತೆಗೆದುಕೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
 ಕಾರ್ಖಾನೆಯ ಆಡಳಿತ ಮಂಡಳಿಯು 20 ಜನ ಸ್ಥಳಿಯ ಕೆಲಸಗಾರರನ್ನು ಕೆಲಸದಿಂದ ತೆಗೆದು ಹಾಕಿದೆ. ಅದನ್ನು ಕೇಳಲು ಹೋದರೆ ಇಲ್ಲ ಸಲ್ಲದ ಕಾರಣಗಳನ್ನು ನೀಡುತ್ತಿದ್ದಾರೆ.
 ಹೊರ ರಾಜ್ಯಗಳಿಂದ ಸಿಬ್ಬಂದಿಯನ್ನು ತೆಗೆದುಕೊಳ್ಳುವ ಉದ್ದೇಶದಿಂದ ಸ್ಥಳಿಯರನ್ನು ಕಡೆಗಣಿಸಿ ಹೊರಗಿನಿಂದ ಬರುವವರಿಗೆ ಆದ್ಯತೆ ನೀಡುತ್ತಿದ್ದಾರೆ. ಕಳೆದ ಎರಡು ವರ್ಷಗಳಿಂದ ಇಲ್ಲಿ ಸೇವೆ ಸಲ್ಲಿಸಿದ್ದರೂ ಅದನ್ನು ಪರಿಗಣಿಸದೇ ಏಕಾಏಕಿ ಕೆಲಸದಿಂದ ತೆಗೆದು ಹಾಕಿದ್ದಾರೆ ಎಂದು ಆರೋಪಿಸಿದರು.
ಸೌಲಭ್ಯದ ಕೊರತೆ: ಅಷ್ಟೇ ಅಲ್ಲದೆ ಕಾರ್ಖಾನೆಯಲ್ಲಿ ಸರಿಯಾದ ಕ್ಯಾಂಟೀನ್ ಸೌಲಭ್ಯವಿಲ್ಲ. ಜೊತೆಗೆ ಕೆಲಸಗಾರರಿಗೆ ಭದ್ರತೆ ಕೂಡ ಇಲ್ಲ.
 ಕಾರ್ಮಿಕರನ್ನು ನಡೆಸಿಕೊಳ್ಳುವ ರೀತಿ ಸರಿಯಾಗಿಲ್ಲ. ಕಾರ್ಮಿಕರಿಗೆ  ಗೌರವ ನೀಡವುದಿಲ್ಲ ಇದರಿಂದ ಕಾರ್ಖಾನೆಯಲ್ಲಿ ಸಿಬ್ಬಂದಿ ಕೆಲಸ ಮಾಡಲು  ಸಾಧ್ಯವಾಗುತ್ತಿಲ್ಲ ಎಂದು ದೂರಿದರು.    ಆದ್ದರಿಂದ ಕೂಡಲೇ ಕೆಲಸದಿಂದ ತೆಗೆದು ಹಾಕಿರುವ 20 ಜನ ಕಾರ್ಮಿಕರನ್ನು ತಕ್ಷಣ ವಾಪಸ್ ತೆಗೆದುಕೊಳ್ಳಬೇಕು. ಎಲ್ಲಾ ಕಾರ್ಮಿಕರಿಗೆ ಸಿಗುವ ಸೌಲಭ್ಯವನ್ನು ನೀಡಬೇಕು ಹಾಗೂ ಸ್ಥಳೀಯರಿಗೆ ಆಧ್ಯತೆ ನೀಡಬೇಕು ಎಂದು ಒತ್ತಾಯಿಸಿದರು.
ಬೇಡಿಕೆಗಳು ಈಡೇರುವವರೆಗೂ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು.  
 ಮುಷ್ಕರದಲ್ಲಿ ಕಾರ್ಮಿಕರಾದ ಪುನೀತ್, ಪ್ರದೀಪ್, ದಿಲೀಪ್ ಕುಮಾರ್, ಅಶ್ವತ್, ಮಧು, ಮಿಥುನ್, ಪ್ರಕಾಶ್, ಮಧುಸೂದನ್ ಹಾಗೂ ಇತರರು ಇದ್ದರು.
ಬೇಡಿಕೆಗಳು: ಕೆಲಸದಿಂದ ತೆಗೆದು ಹಾಕಿರುವ 20 ಕಾರ್ಮಿಕರನ್ನು ಕೆಲಸಕ್ಕೆ ತೆಗೆದುಕೊಳ್ಳಬೇಕು, ಸ್ಥಳೀಯ ಕಾರ್ಮಿಕರಿಗೆ ಹೆಚ್ಚಿನ ಆಧ್ಯತೆ ನೀಡಬೇಕು ಹಾಗೂ ಸೌಲಭ್ಯಗಳನ್ನು ಕಲ್ಪಿಸಬೇಕು. ಕಾರ್ಮಿಕರಿಗೆ ಭದ್ರತೆಯನ್ನು ಒದಗಿಸಬೇಕು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement