ಗ್ರಾಪಂಗೊಂದು ಗ್ರಂಥಾಲಯ
ಬೇಲೂರು: ತಮ್ಮ ಶಾಸಕರ ಅವಧಿಯಲ್ಲಿ ಗ್ರಾಮೀಣ ಪ್ರದೇಶಗಳ ಅಭಿವೃದ್ದಿಗೆ ಹೆಚ್ಚಿನ ಒತ್ತು ನೀಡುತ್ತಿದ್ದು, ಪ್ರತಿ ಗ್ರಾಮದ ರಸ್ತೆಯು ಸಿಮೆಂಟ್ ರಸ್ತೆ ನಿರ್ಮಾಣಕ್ಕೆ ಒತ್ತು ನೀಡಲಾಗುತ್ತಿದೆ.
ಪ್ರತಿ ಗ್ರಾಮ ಪಂಚಾಯ್ತಿಯಲ್ಲೂ ಒಂದೊಂದು ಹೊಸ ಗ್ರಂಥಾಲಯ ಸ್ಥಾಪಿಸಿ ಪ್ರತಿದಿನ ಸುದ್ದಿ ಪತ್ರಿಕೆ, ಉತ್ತಮ ರೀತಿಯ ಪುಸ್ತಕಗಳನ್ನು ಇಟ್ಟರೆ ಜನತೆಗೆ ಅನುಕೂಲ ಮಾಡಿಕೊಟ್ಟಂತಾಗುತ್ತದೆ ಎಂದು ತಿಳಿಸಿದರು.
ತಾಲೂಕು ಪಂಚಾಯ್ತಿ ಅಧ್ಯಕ್ಷ ಪರ್ವತಯ್ಯ ಮಾತನಾಡಿ, ಜನ ಸಾಮಾನ್ಯರ ಸೇವೆ ಮಾಡಲು ರಾಜಕೀಯ ಒಂದು ಮಾರ್ಗವಾಗಿದೆ. ಅಧಿಕಾರ ವಿಕೇಂದ್ರೀಕರಣದಲ್ಲಿ ಗ್ರಾಮ ಪಂಚಾಯ್ತಿಗೆ ಸರ್ಕಾರ ಸಂಪೂರ್ಣ ಕೊಟ್ಟಿದೆ. ಅಧಿಕಾರವನ್ನು ಸದಸ್ಯರು ಹಾಗೂ ಅಧಿಕಾರಿಗಳು ದುರ್ಬಳಕೆ ಮಾಡಿಕೊಳ್ಳಬಾರದು. ಸರ್ಕಾರ ಕೊಡುವ ಮೂಲಭೂತ ಸೌಕರ್ಯಗಳನ್ನು ಸಮಾಜದ ಕಟ್ಟಕಡೆಯ ವ್ಯಕ್ತಿಗೆ ದೊರಕುವಂತಾಗಬೇಕು. ಇದು ಮುಂದಿನ ಪೀಳಿಗೆಗೆ ಮಾದರಿಯಾಗಬೇಕು. ಇದರಿಂದಷ್ಟೇ ಉತ್ತಮ ಸಮಾಜ ನಿರ್ಮಾಣ ಸಾಧ್ಯ. ಎಂದರು.
ಮರಳು ದಂಧೆ ತಡೆಗಟ್ಟಿ: ತಾಲೂಕಿನಲ್ಲಿ ನಡೆಯುತ್ತಿರುವ ಮರಳು ದಂಧೆಯನ್ನು ನಿಯಂತ್ರಿಸುವಲ್ಲಿ ತಾಲೂಕು ಹಾಗೂ ಜಿಲ್ಲಾಡಳಿತ ಸಂಪೂರ್ಣವಾಗಿ ವಿಫಲವಾಗಿದೆ.
ಕೂಡಲೆ ಮರಳು ದಂಧೆಗೆ ಕಡಿವಾಣ ಹಾಕದಿದ್ದ ಮುಂದೆ ತಾಲೂಕಿನ ಜನತೆ ಕಷ್ಟದ ದಿನಗಳನ್ನು ಎದುರಿಸಬೇಕಾಗುತ್ತದೆ. ಈ ಕುರಿತಂತೆ ಗಮನ ಹರಿಸಬೇಕಾದದ್ದು ಅಗತ್ಯ ಎಂದು ಎಚ್ಚರಿಸಿದರು. ಜಿಪಂ ಸದಸ್ಯ ಅಮಿತ್ ಶೆಟ್ಟಿ ಮಾತನಾಡಿದರು.