ಜಿಲ್ಲಾ ಮಟ್ಟದ ಈಜು ಸ್ಪರ್ಧೆಗೆ ಚಾಲನೆ
ಹಾಸನ: ನಗರದ ಮಹಾರಾಜ ಪಾರ್ಕ್ನ ಈಜು ಕೊಳದ ಆವರಣದಲ್ಲಿ ಜಿಲ್ಲಾ ಪಂಚಾಯ್ತಿ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಸಂತ ಜೋಸೆಫರ ಶಾಲೆ ಆಶ್ರಯದಲ್ಲಿ 14 ಮತ್ತು 17ರ ವಯೋವುತಿಯ ಬಾಲಕ ಬಾಲಕಿಯರ ನೇರ ಜಿಲ್ಲಾ ಮಟ್ಟದ ಈಜು ಮತ್ತು ಡ್ರೈವಿಂಗ್ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ನಗರಸಭೆ ಆಯುಕ್ತ ಕೃಷ್ಣಮೂರ್ತಿ ಜ್ಯೋತಿ ಬೆಳಗುವುದರ ಮೂಲಕ ಚಾಲನೆ ನೀಡಿದರು. ನಂತರ ಮಾತನಾಡಿ, ಇಂತಹ ಸ್ಪರ್ಧೆಯಲ್ಲಿ ಮಕ್ಕಳು ಭಾಗವಹಿಸುವುದರಿಂದ ಅವರ ವ್ಯಕ್ತಿ ವಿಕಸನ ಗೊಳ್ಳುತ್ತದೆ. ದೈಹಿಕವಾಗಿ ಆರೋಗ್ಯ ಉತ್ತಮವಾಗಿರುತ್ತದೆ ಎಂದರು. ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಕೆ. ಈಶ್ವರಪ್ಪ ಮಾತನಾಡಿ, ಈ ವರ್ಷ ಮಕ್ಕಳಿಗೆ ಸ್ಪರ್ಧೆ ಏರ್ಪಡಿಸಲಾಗಿದೆ. ಈಗಾಗಲೇ ಜಿಲ್ಲಾ ಮಟ್ಟದಲ್ಲಿ ಭಾಗವಹಿಸಿ ವಿಜೇತರಾದವರು ರಾಷ್ಟ್ರಮಟ್ಟದಲ್ಲಿ ಮಕ್ಕಳು ಭಾಗವಹಿಸಿರುವುದಕ್ಕೆ ಸಂತೋಷ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಡಿಡಿಪಿಐ ಬಸವರಾಜ್, ಈಜು ತರಬೇತುದಾರರು ಲಕ್ಷ್ಮೀಕಾಂತ್ ಇತರರು ಇದ್ದರು
ಐಎಎಸ್, ಐಪಿಎಸ್ ಪರೀಕ್ಷೆಗೆ ಪೂರ್ವಭಾವಿ ತರಬೇತಿ
ಹಾಸನ: ಸಮಾಜ ಕಲ್ಯಾಣ ಇಲಾಖೆಯಿಂದ ಪ.ಜಾತಿ ಮತ್ತು ಪ.ಪಂಗಡದ ಅಭ್ಯರ್ಥಿಗಳನ್ನು ಐಎಎಸ್, ಐಪಿಎಸ್ ಮತ್ತು ಇತರೆ ಪರೀಕ್ಷೆಗಳಿಗೆ ಉಚಿತವಾಗಿ ಪೂರ್ವಭಾವಿ ತರಬೇತಿಗೆ ಆಯ್ಕೆ ಮಾಡಲು ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಪದವಿ ಅಥವಾ ಸ್ನಾತಕೋತ್ತರ ಪದವಿಯಲ್ಲಿ ಉತ್ತೀರ್ಣರಾಗಿರಬೇಕು. ವಾರ್ಷಿಕ ಆದಾಯ 2.50 ಲಕ್ಷ ಮೀರಿರಬಾರದು. ಅಭ್ಯರ್ಥಿ ಕರ್ನಾಟಕದವರಾಗಿರಬೇಕು. ಕೇಂದ್ರ ಲೋಕಸೇವಾ ಆಯೋಗ ವಿಧಿಸುವ ಎಲ್ಲಾ ನಿಬಂಧನೆ ಪೂರೈಸತಕ್ಕದ್ದು. ಜುಲೈ 25ರ ಸಂಜೆ 5.30 ರವರೆಗೆ ಅರ್ಜಿ ಸ್ವೀಕರಿಸಲಾಗುವುದು ಎಂದು ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ತಿಳಿಸಿದ್ದಾರೆ.
ಟ್ಯೂಷನ್ ಕೇಂದ್ರಗಳ
ನಿಯಂತ್ರಣಕ್ಕೆ ಕ್ರಮ
ಹಾಸನ: ರಾಜ್ಯದಲ್ಲಿ 1983ರ ಕಾಯ್ದೆ ಪ್ರಕಾರ 34 ಟ್ಯೂಷನ್ ಕೇಂದ್ರಗಳು ನೋಂದಣಿಯಾಗಿವೆ. ಇವುಗಳಿಂದ ವಸೂಲಾಗಿರುವ ಶುಲ್ಕ 8.50 ಲಕ್ಷ. ಸರ್ಕಾರಿ ಉಪನ್ಯಾಸಕರು ಟ್ಯೂಷನ್ ನಡೆಸುತ್ತಿರುವ ಬಗ್ಗೆ ಮೂರು ದೂರುಗಳು ದಾಖಲಾಗಿವೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಹೇಳಿದರು.ವಿಧಾನ ಪರಿಷತ್ ಸದಸ್ಯ ಪಟೇಲ್ ಶಿವರಾಂ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕರ್ನಾಟಕ ಶಿಕ್ಷಣ ಕಾಯ್ದೆ 1983 ನಿಯಮ(35)ರಡಿ ಖಾಸಗಿ ಟ್ಯೂಟೋರಿಯಲ್ಗಳನ್ನು ನೋಂದಣಿ ಕಡ್ಡಾಯ ಎಂದರು.
ಸಾಗುವಳಿ ಭೂಮಿ ವಶ ಮಾಡಿಕೊಳ್ಳುವುದಿಲ್ಲ
ಹಾಸನ: ತಾಲೂಕಿನ ಸಾಲಗಾಮೆ ಹೋಬಳಿ ವ್ಯಾಪ್ತಿಯಲ್ಲಿ ಒಟ್ಟು 3,616 ರೈತರಿಗೆ 4,536-37 ಎಕರೆ ಜಮೀನಿಗೆ ಸಾಗುವಳಿ ಪತ್ರ ನೀಡಲಾಗಿದೆ. ಕೃಷಿ ಉದ್ದೇಶಕ್ಕೆ ಜಮೀನು ಮಂಜೂರು ಮಾಡುವುದರಿಂದ, ಸರ್ಕಾರ ವಶಪಡಿಸಿಕೊಳ್ಳುವ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಕಂದಾಯ ಸಚಿವ ವಿ. ಶ್ರೀನಿವಾಸ ಪ್ರಸಾದ್ತಿಳಿಸಿದ್ದಾರೆ.ವಿಧಾನ ಪರಿಷತ್ನಲ್ಲಿ ಪಟೇಲ್ ಶಿವರಾಂ ಈ ಕುರಿತು ಕೇಳಿದಾಗ, ಒಂದು ವೇಳೆ ಮಂಜೂರಿದಾರರಿಗೆ ಪರಭಾರೆ ಅವಧಿಯ ಷರತ್ತನ್ನು ವಿಧಿಸಿದ್ದು, ಪರಭಾರೆ ಷರತ್ತು ಪೂರೈಸುವ ಮೊದಲೇ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದವರು ಸರ್ಕಾರದ ಪೂರ್ವಾನುಮೋದನೆ ಪಡೆಯದೇ ಪರಭಾರೆ ಮಾಡಿದಲ್ಲಿ ಅಂತಹ ಜಮೀನುಗಳನ್ನು ಮೂಲ ಮಂಜೂರಿದಾರರಿಗೆ ಪುನರ್ ಸ್ಥಾಪಿಸಲಾಗುವುದು ಎಂದು ಹೇಳಿದರು.