ಮೌಲ್ಯ ಮಾಪನ ಪರಿಷ್ಕೃತ ದರ ಪಟ್ಟಿ
ಹಾಸನ: ಕೇಂದ್ರ ಮೌಲ್ಯಮಾಪನ ಸಮಿತಿಯ ಸೂಚನೆ ಮೇರೆಗೆ 2014-15ನೇ ಸಾಲಿಗೆ ಹಾಸನ ತಾಲ್ಲೂಕು ಹಿರಿಯ ಉಪನೋಂದಣಿ ಕಚೇರಿ ವ್ಯಾಪ್ತಿಯ ಮಾರ್ಗಸೂಚಿ ಬೆಲೆಗಳನ್ನು ತಾಲೂಕು ಮೌಲ್ಯ ಮಾಪನ ಸಮಿತಿಯು ಪರಿಷ್ಕರಿಸಿ, ಪರಿಷ್ಕೃತ ದರಪಟ್ಟಿಯನ್ನು ತಯಾರಿಸಿದ್ದು, ಹಿರಿಯ ಉಪನೋಂದಣಾಧಿಕಾರಿ ಕಚೇರಿ, ಹಾಸನ ಹಾಗೂ ತಾಲ್ಲೂಕು ದಂಡಾಧಿಕಾರಿ ಕಚೇರಿಯ ಸೂಚನಾ ಫಲಕದಲ್ಲಿ ಈಗಾಗಲೇ ಪ್ರಕಟಿಸಲಾಗಿದೆ. ಸಾರ್ವಜನಿಕರಿಂದ ಸಲಹೆ ಸೂಚನೆಗಳಿದ್ದರೆ ಪ್ರಕಟಣೆಯ ದಿನಾಂಕದಿಂದ 15 ದಿನದೊಳಗಾಗಿ ಕಚೇರಿಗೆ ಸಲ್ಲಿಸುವಂತೆ ಕೋರಿದೆ.
ಹೆಚ್ಚಿನ ಮಾಹಿತಿಗಾಗಿ ತಾಲೂಕು ದಂಡಾಧಿಕಾರಿ, ಮೌಲ್ಯ ಮಾಪನ ಉಪ ಸಮಿತಿಯ ಅಧ್ಯಕ್ಷರು ಹಾಗೂ ಹಾಗೂ ಕಾರ್ಯದರ್ಶಿ, ಉಪನೋಂದಣಾಧಿಕಾರಿ, ಹಾಸನ ತಾಲೂಕು ಅವರನ್ನು ಸಂಪರ್ಕಿಸಲು ಕೋರಿದೆ.