ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ವಸತಿ ಯೋಜನೆ ಶ್ರೀಮಂತರ ಪಾಲು: ದೂರು

Rashmi Kasaragodu
Updated On : 9 Jul 2014, 1:44 am

ಸಕಲೇಶಪುರ: ಕಡು ಬಡವರಿಗೆ ಮೀಸಲಾಗಿರುವ ಇಂದಿರಾ ಆವಾಸ್ ಯೋಜನೆಗಳ ಮನೆಗಳನ್ನು ಗ್ರಾಮ ಪಂಚಾಯ್ತಿ ಅಧ್ಯಕ್ಷರು ಸೇರಿದಂತೆ ಅನೇಕ ಶ್ರೀಮಂತರು ಕಬಳಿಸಿರುವುದನ್ನು ಕುನಿಗನಹಳ್ಳಿ ಗ್ರಾಮಸ್ಥರೆ ಪತ್ತೆ ಹಚ್ಚಿ ಸರ್ಕಾರಕ್ಕೆ ದೂರು ನೀಡಿ ಬಹಿರಂಗಗೊಳಿಸಿದ್ದಾರೆ.
ಸಾರ್ವಜನಿಕರ ದೂರಿನ ಅನ್ವಯ ಗ್ರಾಮಕ್ಕೆ ಭೇಟಿ ನೀಡಿದ್ದ, ಜಿಲ್ಲಾ ಯೋಜನಾಧಿಕಾರಿ ಸಿದ್ದರಾಜು, ಪತ್ರಿಕೆಯೊಂದಿಗೆ ಮಾತನಾಡಿ,  ಇಂದಿರಾ ಆವಾಸ್ ಯೋಜನೆಯಲ್ಲಿ ಅವ್ಯವಹಾರ ನಡೆದಿರುವ ಬಗ್ಗೆ ಗ್ರಾಮದ ಪ್ರಶಾಂತ್ ಎಂಬವರು ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಪರಿಶೀಲಿಸಲು ಬಂದಿದ್ದೇನೆ. ಮಾಹಿತಿಯನ್ನು ಪಡೆದಿದ್ದೇನೆ. ದಾಖಲೆ ಪರಿಶೀಲಿಸುವ ಸಂಬಂಧಪಟ್ಟವರಿಗೆ ವರದಿಸಲ್ಲಿಸುವುದಾಗಿ ತಿಳಿಸಿದರು.
ಸೌಲಭ್ಯ ಶ್ರೀಮಂತರ ಪಾಲು: ಜಿಲ್ಲಾ ಪಂಚಾಯ್ತಿ, ಲೋಕಾಯುಕ್ತ ಸೇರಿದಂತೆ ಹಲವೆಡೆ ದೂರು ಸಲ್ಲಿಸಿರುವ ಗ್ರಾಮಸ್ಥ ಪ್ರಶಾಂತ್ ಪತ್ರಿಕೆಯೊಂದಿಗೆ ಮಾತನಾಡಿ, ಬಡವರ ಸೌಲಭ್ಯವು ಶ್ರೀಮಂತರ ಪಾಲಾಗುತ್ತಿದೆ. ಯಾವ ಯೋಜನೆಯು ಸಮರ್ಪಕವಾಗಿ ಬಳಕೆಯಾಗದಿರಲು ಭ್ರಷ್ಟಾಚಾರವೇ ಕಾರಣವಾಗಿದೆ. ಗ್ರಾಮದಲ್ಲಿ ಅರ್ಹ ಫಲಾನುಭವಿಗಳು ಗುಡಿಸಲಿನಲ್ಲಿ ವಾಸಿಸುತ್ತಿದ್ದಾರೆ. ಬಂಗಲೆಗಳಲ್ಲಿ ವಾಸಿಸುತ್ತಿರುವ ಕಾಫಿ ತೋಟದ ಮಾಲೀಕರಿಗೆ ಇಂದಿರಾ ಆವಾಸ್ ಮನೆಗಳು ಮಂಜೂರಾಗಿವೆ. ನಾನು ಎಲ್ಲರಿಗೂ ದೂರು ನೀಡಿದ್ದೇನೆ ನ್ಯಾಯ ಸಿಗುವ ಭರವಸೆ ನನಗಿದೆ ಎಂದರು.  


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement