ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ವೃದ್ಧಾಶ್ರಮ ಸಂಸ್ಕೃತಿ ಹೆಚ್ಚಳ: ವಿಷಾದ

Rashmi Kasaragodu
Updated On : 9 Jul 2014, 1:45 am

ಬೇಲೂರು: ದೇಶದಲ್ಲಿ  ವಿದ್ಯಾವಂತವರ ಪ್ರಮಾಣ ಹೆಚ್ಚಳವಾಗುತ್ತಿದ್ದು, ಅಂತೆಯೇ ವೃದ್ಧಾಶ್ರಮಗಳು ಹೆಚ್ಚುತ್ತಿವೆ ಎಂದು ಲಯನ್ಸ್ ಜಿಲ್ಲಾ ಸಂಚಾಲಕ ಹರೀಶ್ ವಿಷಾದಿಸಿದರು.
 ಪಟ್ಟಣದಲ್ಲಿ ನಡೆದ ಬೇಲೂರು ಲಯನ್ಸ್ ಸಂಸ್ಥೆಯ ನೂತನ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಂದಿನ ಶಿಕ್ಷಣ ಸಂಸ್ಕಾರವಿಲ್ಲದ ಶಿಕ್ಷಣವಾಗಿದ್ದು, ಮಕ್ಕಳು ಸಹಜವಾಗಿ ಅವಿಭಕ್ತ ಕುಟುಂಬದಿಂದ ವಿಭಕ್ತ ಕುಟುಂಬದತ್ತ ವಾಲುತ್ತಿದ್ದಾರೆ. ಅದರೆ ನಮ್ಮನ್ನು ಸಾಕಿ ವಿದ್ಯಾವಂತರನ್ನು ಮಾಡಿದ ಹಿರಿಯರ ಮೇಲೆ ಕನಿಷ್ಟ ಆಸಕ್ತಿ ಇಲ್ಲದೆ ವೃದ್ಧಾಶ್ರಮಕ್ಕೆ ಕಳಿಸುವ ಪರಿಪಾಠ ಸಮಾಜಕ್ಕೆ ಮಾರಕವಾಗಲಿದೆ ಎಂದರು.
ಉತ್ತಮ ಶಿಕ್ಷಣ: ನೂತನ ಅಧ್ಯಕ್ಷ ರಮೇಶಕುಮಾರ್ ಮಾತನಾಡಿ,  ಹಿರಿಯ ನಾಗಾರಿಕರಿಗೆ ಗೌರವ ನೀಡುವ ಸಂಸ್ಕೃತಿಯನ್ನು ಬೆಳೆಸುವ ವ್ಯವಸ್ಥೆ ಶಿಕ್ಷಣ ಮತ್ತು ಮನೆಯಿಂದ ಆರಂಭವಾಗಬೇಕು. ಆಗ ಮಾತ್ರ ಉತ್ತಮ ಸಮಾಜದ ನೀರೀಕ್ಷೆ ಎಂದರು.  ನಿಕಟ ಪೂರ್ವ ಅಧ್ಯಕ್ಷ ಪೂವಯ್ಯ ಮಾತನಾಡಿ, ಲಯನ್ಸ್ ಸಂಸ್ಥೆಯಲ್ಲಿ ಕೆಲಸ ಮಾಡುವ ಎಲ್ಲರೂ ತಮ್ಮ ಬದುಕಿನಲ್ಲಿ ಶ್ರೇಷ್ಠತೆಯನ್ನು ಪಡೆದಿದ್ದಾರೆ, ಈ ನಿಟ್ಟಿನಲ್ಲಿ ಅವರ ಸೇವೆ ಅಮೂಲ್ಯವಾಗಿದೆ ಎಂದರು. ಕಾರ್ಯಕ್ರಮದಲ್ಲಿ  ವಲಯ ಅಧ್ಯಕ್ಷ ಎನ್.ಆರ್.ಗಿರೀಶ್,  ಕಾರ್ಯದರ್ಶಿ ಕೆ.ಎಲ್.ಸುರೇಶ್, ಖಜಾಂಚಿ ಡಾ.ಸಂತೋಷ್, ಉಮೇಶ್, ಶ್ರೀಧರ್, ಶ್ರೀನಿವಾಸ್, ಡಾ.ಚಂದ್ರಮೌಳಿ, ವಸಂತಕುಮಾರ್, ಸೇಬಿಸ್ಟಿನ್, ಸತ್ಯನಾರಾಯಣ್ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement