ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

'ಸ್ವಾರ್ಥಮನೋಭಾವ ಸಮಾಜಕ್ಕೆ ಮಾರಕ'

Rashmi Kasaragodu
Updated On : 9 Jul 2014, 1:46 am

ಬೇಲೂರು: ಇತ್ತೀಚಿನ ದಿನಗಳಲ್ಲಿ ಸೇವಾ- ಮನೋಭಾವನೆ ಸ್ವಾರ್ಥದಿಂದ ಕೂಡಿದ್ದು, ಸಮಾಜಕ್ಕೆ ಮಾರಕ ಬೆಳವಣಿಗೆಯಾಗಿದೆ. ಈ ದಿಸೆಯಲ್ಲಿ ಸದೃಢ ಸಮಾಜಕ್ಕೆ ಮೌಲ್ಯಾಧಾರಿತ ವ್ಯಕ್ತಿಗಳ ಅವಶ್ಯವಿದೆ ಎಂದು  ರೋಟರಿ ಸಂಸ್ಥೆ  ಅಸಿಸ್ಟೆಂಟ್ ಗೌರ್ನರ್ ಡಾ. ಕಿಶೋರ್ ತಿಳಿಸಿದರು.
ಪಟ್ಟಣದ ಪುಟ್ಟಮ್ಮ ಚನ್ನಕೇಶವೇಗೌಡರ ಕಲ್ಯಾಣ ಮಂಟಪದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಬೇಲೂರು ರೋಟರಿ ಸಂಸ್ಥೆಯ ನೂತನ ಅಧ್ಯಕ್ಷರ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿ, ಕತ್ತಲಿನಲ್ಲಿ ಇರುವ ದೀನ-ದಲಿತರನ್ನು ಸಮಾಜ ಮುಖ್ಯ ವಾಹಿನಿಗೆ ತರುವ ಹೊಣೆ ಸರ್ವ ಸದಸ್ಯರ ಮೇಲಿದೆ ಎಂದು ತಿಳಿಸಿದರು. ನಿಕಟಪೂರ್ವ ಅಧ್ಯಕ್ಷ ತಿಮ್ಮೇಗೌಡ ಮಾತನಾಡಿ, ರೋಟರಿ ಸಂಸ್ಥೆ ಕಳೆದ ವರ್ಷದಲ್ಲಿ ಶೈಕ್ಷಣಿಕ ಕಾರ್ಯಕ್ಕೆ ಹಾಗೂ ವಿಕಲಚೇತನರಿಗೆ ಅಧಾರವಾಗಿದೆ ಎಂದರು. ನೂತನ ಅಧ್ಯಕ್ಷ ಸಿ.ಪಿ.ಚಂದ್ರೇಗೌಡ ಮಾತನಾಡಿ 2014-15ರ ಸಂಸ್ಥೆ ಹತ್ತುಹಲವು ಯೋಜನೆಗಳನ್ನು ಪ್ರಮುಖವಾಗಿ ಅಯೋಜಿಸಿದೆ ಎಂದರು.ನಿಕಟಪೂರ್ವ ಕಾರ್ಯದರ್ಶಿ ಅಜಿಂ ಉಲ್ಲಾಶರೀಫ್, ವಿಕ್ರಂ ಕೌರಿ,  ಜೋನಲ್ ಲೆಫ್ಟಿನೆಂಟ್ ಶರತ್ ಇತರರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement