ಆರಾಧನಾ ಸಮಿತಿಗೆ ನಾಮ ನಿರ್ದೇಶನ
ಹಾಸನ: ಹಾಸನ ವಿಧಾನಸಭಾ ಕ್ಷೇತ್ರದ ಆರಾಧನಾ ಸಮಿತಿಗೆ ಹಾಸನದ ಅನ್ನದಾನಿ ಗೌಡ (ಸಾಮಾನ್ಯ)-ಸದಸ್ಯರು, ಹಾಸನದ ಸೋಮಣ್ಣ (ಪರಿಶಿಷ್ಟ ಜಾತಿ)-ಸದಸ್ಯರು, ಸಾಲಗಾಮೆ ಹೋಬಳಿ ನಿಟ್ಟೂರಿನ ವನಮಾಲ (ಮಹಿಳೆ)-ಸದಸ್ಯರು, ಮತ್ತು ಶಿವಣ್ಣ (ಪರಿಶಿಷ್ಟ ಪಂಗಡ)-ಸದಸ್ಯರು ಬೊಮ್ಮೇನಹಳ್ಳಿ, ನಿಟ್ಟೂರು ಅಂಚೆ, ಸಾಲಗಾಮೆ ಹೋಬಳಿ ಅಧಿಕಾರೇತರ ಸದಸ್ಯರನ್ನು ನಾಮನಿರ್ದೇಶನ ಮಾಡಲಾಗಿದೆ. ಸಮಿತಿ ಸದಸ್ಯರು ಸಂಬಂಧಪಟ್ಟ ಭತ್ಯೆ ಪಡೆಯಲು ಅರ್ಹರಿರುತ್ತಾರೆ. ಐದು ವರ್ಷ ಅಥವಾ ಮುಂದಿನ ಆದೇಶ ಹೊರಡಿಸುವವರೆಗೆ ಅಸ್ತಿತ್ವದಲ್ಲಿರುತ್ತದೆ ಎಂದು ಕಂದಾಯ ಇಲಾಖೆಅಧೀನ ಕಾರ್ಯದರ್ಶಿ ಸಿ.ಟಿ. ಜಯರಾಮೇಗೌಡ ತಿಳಿಸಿದ್ದಾರೆ.