ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಬಯಲು ಬಾರ್ ಆದ ಹೇಮಾವತಿ ಕ್ರೀಡಾಂಗಣ

Rashmi Kasaragodu
Updated On : 11 Jul 2014, 1:11 am

ಹೊಳೆನರಸೀಪುರ: ಕ್ರೀಡೆ ಮತ್ತಿತರ ಆಟೋಟ ಚಟುವಟಿಕೆಗಳಿಗೆ ಸುದುದ್ದೇಶದಿಂದ ಬಳಕೆಯಾಗಬೇಕಿದ್ದ ಪಟ್ಟಣದಲ್ಲಿನ ಹೇಮಾವತಿ ಕ್ರೀಡಾಂಗಣವು ಯಾವುದೇ ರಕ್ಷಣೆಯಿಲ್ಲದ ಕಾರಣದಿಂದಾಗಿ ಇಂದು ಕುಡುಕರ ಅಡ್ಡೆಯಾಗಿ, ನಿಸರ್ಗದತ್ತ ಬಯಲು ಬಾರ್ ಆಗಿ ಪರಿವರ್ತನೆಗೊಂಡಿದೆ.
 ಈ ಹಿಂದೆ ಪೊಲೀಸರ ದಾಳಿಯಿಂದಾಗಿ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದ ಅನೈತಿಕ ಚಟುವಟಿಕೆಗಳು ಹಾಗೂ ಕುಡುಕರ ಅಡ್ಡೆಗಳು ಮಾಯವಾಗಿದ್ದವು. ಅಲ್ಲದೇ ಪಟ್ಟಣದಲ್ಲಿ ತ್ರಿಬ್ಬಲ್ ರೈಡಿಂಗ್, ಮಹಿಳೆಯರು, ಹೆಣ್ಣುಮಕ್ಕಳ ಚುಡಾಯಿಸುವಿಕೆ ಹಾಗೂ ಪುಂಡ ಯುವಕರ ಗುಂಪುಗಾರಿಕೆಗೆ ಕಡಿವಾಣ ಬಿದ್ದಿತ್ತು.
ಪೊಲೀಸರು ಮೌನ: ಆದರೆ ಈಗ ಅದೇಕೋ ಪೊಲೀಸರು ಇತ್ತ ಗಮನ ನೀಡುತ್ತಿಲ್ಲ. ಇದರಿಂದಾಗಿ ಪಟ್ಟಣದಲ್ಲಿ ಮತ್ತೆ ಹಳೇ ಚಾಳಿಗಳು  ಮರುಕಳಿಸಲಾರಂಭಿಸಿವೆ.
 ಹೇಮಾವತಿ ಕ್ರೀಡಾಂಗಣವು ಬೆಳಗಿನ ವೇಳೆಯಲ್ಲಿ ಹಲವಾರು ಜನರಿಗೆ ವಾಕಿಂಗ್ ಮಾಡುವ ಅತ್ಯುತ್ತಮ ತಾಣವಾಗಿತ್ತು. ಆದರೆ ಕೆಲವು ದಿನಗಳಿಂದೀಚೆಗೆ ಕುಡುಕರ ಹಾವಳಿ ಹೆಚ್ಚಾಗತೊಡಗಿದ್ದು, ಇಲ್ಲಿ ವಾಕಿಂಗ್ ಮಾಡುವ ಜಾಗದಲ್ಲೆಲ್ಲಾ ಹೆಜ್ಜೆ ಹೆಜ್ಜೆಗೂ ಮದ್ಯದ ಬಾಟಲಿಗಳ ದರ್ಶನವಾಗತೊಡಗಿದೆ.
ಎಸ್ಐ ನೇಮಿಸಲು ಆಗ್ರಹ: ಸರ್ಕಾರ ಇಲ್ಲಿನ ನಗರ ಠಾಣೆಗೆ ಒಬ್ಬ ದಕ್ಷ ಸಬ್ ಇನ್ಸ್ಪೆಕ್ಟರನ್ನು ನಿಯೋಜಿಸಲು ಇನ್ನೂ ಮೀನಮೇಷ ಎಣಿಸುತ್ತಿದೆ. ಇದರಿಂದಾಗಿ ಪಟ್ಟಣದಲ್ಲಿ ಕಾನೂನು ಸುವ್ಯವಸ್ಥೆ ಇಲ್ಲದಂತಹ ಪರಿಸ್ಥಿತಿ ಇದೆ ಎಂದು ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement