ವಸತಿಗೃಹ ನಿರ್ಮಾಣಕ್ಕೆ ಅಸ್ತು
ಬೇಲೂರು: ಪಟ್ಟಣದ ಹೊಳೆಬೀದಿಯ ಒಳಚರಂಡಿ ಬಸೀಕರಣ ಹೊಂಡದ (ಯುಜಿಡಿ ಫಿಲ್ಟರ್ ಪ್ಲಾಂಟ್) ಆವರಣದೊಳಗೆ 10 ಲಕ್ಷ ವೆಚ್ಚದಲ್ಲಿ ಕಾವಲುಗಾರರಿಗೆ ವಸತಿಗೃಹ ನಿರ್ಮಿಸಿಕೊಡಲಾಗುವುದು ಎಂದು ಪುರಸಭೆ ಮುಖ್ಯಾಧಿಕಾರಿ ಬಸವರಾಜು ತಿಳಿಸಿದರು. ಬಸೀಕರಣ ಹೊಂಡದ ಆವರಣದಲ್ಲಿ ಅರಣ್ಯ ಇಲಾಖೆಯಿಂದ ಗಿಡ ನಡೆಸುವ ಸಂಬಂಧ ವಲಯ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ ಸಂದರ್ಭ ಮಾತನಾಡಿ, 3 ಎಕರೆ ವ್ಯಾಪ್ತಿಯ ಬಸೀಕರಣ ಹೊಂಡದ ಆವರಣದ ನಿರ್ವಹಣೆಗಾಗಿ ಕಾವಲುಗಾರರನ್ನು ನೇಮಿಸಲಾಗಿದೆ. ಇವರಿಗಾಗಿ ವಸತಿಗೃಹ ನಿರ್ಮಿಸಿದರೆ ಇದರ ನಿರ್ವಹಣೆ ಉತ್ತಮವಾಗಲಿದೆ ಎಂದರು. ವಲಯ ಅರಣ್ಯಾಧಿಕಾರಿ ರಾಜಪ್ಪ, ಫಾರೆಸ್ಟರ್ ಮೋಹನಕುಮಾರ್, ವೆಂಕಟೇಶ್, ನಾಗರಾಜು ಇದ್ದರು.