ಸಾವಯವ ಗೊಬ್ಬರ ಬಳಸಿ; ಶಾಸಕ
ಜಾವಗಲ್: ಸಾವಯವ ಗೊಬ್ಬರವನ್ನು ಹೆಚ್ಚಾಗಿ ಬಳಸಿ ಭೂಮಿಯ ಫಲವತ್ತತೆ ಕಾಪಡಿಕೊಳ್ಳುವಂತೆ ಶಾಸಕ ವೈ.ಎನ್. ರುದ್ರೇಶ್ಗೌಡ ಸಾವಯವ ಕೃಷಿಕರಿಗೆ ಸಲಹೆ ನೀಡಿದರು.
ಜಾವಗಲ್ ಹೋಬಳಿ ತಿಮ್ಮನಹಳ್ಳಿಯಲ್ಲಿ ಸಾವಯವ ಕೃಷಿಕರ ಘಟಕದ ವತಿಯಿಂದ ಎರೆಹುಳು ಹಾಗೂ ಹಸಿರೆಲೆ ಗೊಬ್ಬರ ವಿತರಿಸಿ, ರಾಸಾಯನಿಕ ಗೊಬ್ಬರ ಕೀಟನಾಶಕಗಳ ಬಳಕೆಯಿಂದ ಭೂಮಿಯ ಫಲವತ್ತತೆ ಕ್ಷೀಣವಾಗುತ್ತಿದ್ದು ಇಳುವರಿ ಕಡಿಮೆ ಆಗುತ್ತಿದೆ ಎಂದರು.
ಸಾವಯವ ಕೃಷಿ ಸಮಿತಿ ಅಧ್ಯಕ್ಷ ಟಿ.ಎಮ್. ವಿಜಯಕುಮಾರ್ ಮಾತನಾಡಿ, ಹೋಬಳಿಯಲ್ಲಿ ತಿಮ್ಮನಹಳ್ಳಿಯನ್ನು ಸಾವಯವ ಭಾಗ್ಯಯೋಜನೆ ಗೆ ಆಯ್ಕೆಮಾಡಿದ್ದು, ಬಸವೇಶ್ವರ ಸಾವಯವ ಕೃಷಿಕರ ಸಮಿತಿ ರಚಿಸಲಾಗಿದೆ ಎಂದರು. ಕ್ಷೇತ್ರಾಧಿಕಾರಿ ಶ್ವೇತ ಮಾತನಾಡಿ, ಸಾವಯವ ಭಾಗ್ಯಯೋಜನೆಯಡಿ ಸಾವಯವ ಗೊಬ್ಬರ ಹಸಿರೆಲೆ ಗೊಬ್ಬರ, ಜಪಾನ್ ಮಾದರಿಯಲ್ಲಿ ಕಾಂಪೋಸ್ಟ್ ತಯಾರಿಕೆ, ಬಯೋಡೈಜೆಸ್ಟ್, ಎರೆಹುಳು ಜೈವಿಕ ಗೊಬ್ಬರ ತಯಾರಿಸಿ ರೈತರಿಗೆ ಬೀಜ ಸಸಿಗಳನ್ನು ರೈತರಿಗೆನೀಡಲಾಗುತ್ತದೆ ಎಂದರು. ನೇರ್ಲಿಗೆ ಗ್ರಾಪಂ ಅಧ್ಯಕ್ಷ ಜಗದೀಶ್, ಮಾಜಿ ಅಧ್ಯಕ್ಷ ಬಸವರಾಜು, ನರಸಿಂಹಸ್ವಾಮಿ ಕೇತ್ರ ಸಹಾಯಕಿ ಶಿಲ್ಪ, ಹಾಗೂ ಜನಸ್ಪಂದನ ಸೇವಾಸಂಸ್ಥೆಯ ಮಹೇಶ್ ಇದ್ದರು.