ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಅರಣ್ಯ ರಸ್ತೆಗಳಲ್ಲಿ ವನ್ಯ ಪ್ರಾಣಿಗಳ ರಕ್ಷಣೆ

Rashmi Kasaragodu
Updated On : 12 Jul 2014, 12:44 pm

ಹಾಸನ: ರಕ್ಷಿತ ಅರಣ್ಯ ಪ್ರದೇಶಗಳಲ್ಲಿ ಹಾದು ಹೋಗುವ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ, ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶ, ಮೈಸೂರು-ಮಾನಂತವಾಡಿ ರಸ್ತೆ, ಹುಣಸೂರು ನಾಗರಹೊಳೆ-ಕುಟ್ಟಿ ರಸ್ತೆ, ಕಾವೇರಿ ವನ್ಯಧಾಮ, ಭೂವಳ್ಳಿ-ಮುತ್ತತ್ತಿ ತಾಳವಾಡಿ ರಸ್ತೆ ಮತ್ತು ಪಾಲರ್ ಹೊಗನೇಕಲ್ ಗೋಪಿನಾಥಂ ರಸ್ತೆಗಳನ್ನು ಅಪಘಾತ ವಲಯಗಳೆಂದು ಗುರುತಿಸಲಾಗಿದೆ. ಈ ಪ್ರದೇಶಗಳಲ್ಲಿ ಅಪಘಾತ ನಿಯಂತ್ರಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅರಣ್ಯ ಸಚಿವ ಬಿ. ರಮಾನಾಥ ರೈ ತಿಳಿಸಿದ್ದಾರೆ. ವಿಧಾನ ಪರಿಷತ್ ಸದಸ್ಯ ಪಟೇಲ್ ಶಿವರಾಂ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು ರಕ್ಷಿತಾರಣ್ಯಗಳಲ್ಲಿ ಹಾದು ಹೋಗುವ ರಸ್ತೆಗಳಲ್ಲಿ ಅಪಘಾತವಾಗುವ ಸಂಭವವಿರುತ್ತದೆ. ವನ್ಯಪ್ರಾಣಿಗಳು ಮತ್ತು ವಾಹನಗಳ ನಡುವೆ ಅಪಘಾತ ತಪ್ಪಿಸಲು ಅಗತ್ಯವಿರುವ ಕಡೆ ರಾತ್ರಿ ಸಂಚಾರ ನಿಷೇಧಿಸುವುದು, ರಸ್ತೆ ಉಬ್ಬುಗಳನ್ನು  ನಿರ್ಮಾಣ ಮಾಡುವುದು, ಸೂಚನಾ ಫಲಕಗಳನ್ನು ಅಳವಡಿಸುವಂತಹ ಮಾರ್ಗಸೂಚಿಗಳನ್ವಯ ಕ್ರಮ ಕ್ಯಗೊಳ್ಳಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement