ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರ

Rashmi Kasaragodu
Updated On : 12 Jul 2014, 12:44 pm

ಹಾಸನ: ಹಾಸನದ ಕೃಷಿ ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿಗಳು ಅರಕಲಗೂಡು ತಾಲೂಕಿನ ಮರವಳಲು ಗ್ರಾಮದಲ್ಲಿ ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರ ಹಾಗೂ ಕೃಷಿ ಮಾಹಿತಿ ಕೇಂದ್ರದ ಉದ್ಘಾಟನಾ ಕಾರ್ಯಕ್ರಮ ಆಯೋಜಿಸಿದ್ದರು. ಕೃಷಿ ವಿಸ್ತರಣಾ ವಿಭಾಗದ ಡಾ. ನಾಗೇಶ್, ಡಾ. ವಿನಯ್ಕುಮಾರ್, ಸಸ್ಯರೋಗ ಶಾಸ್ತ್ರಜ್ಞ ಡಾ. ನಾಗರಾಜ್, ಶಿಬಿರದ ಮುಖ್ಯಸ್ಥೆ ರಮ್ಯ ಸಂತೋಷ್ ಹಾಗೂ ಗ್ರಾಪಂ ಅಧ್ಯಕ್ಷ ರಘು ಇದ್ದರು.ನಾನಾ ಇಲಾಖೆಗಳಿಂದ ಆಗಮಿಸಿದ್ದ ತಜ್ಞ ದಳವಾಯಿ, ತೋಟಗಾರಿಕೆ ಇಲಾಖೆಯ ನಾಗರಾಜು, ಕೃಷಿ ಇಲಾಖೆಯ ರುದ್ರಶೆಟ್ಟಿ ಶಿಬಿರದ ಉದ್ದೇಶ , ವಿಧಾನಗಳು, ವಾಸ್ತವ್ಯದ ನಂತರದ  ಕಾರ್ಯಕ್ರಮಗಳ ಬಗ್ಗೆ ತಿಳಿಸಿದರು.


ಉಚಿತ ತರಬೇತಿ
ಹಾಸನ: ಐಎಎಸ್, ಕೆಎಎಸ್, ಬ್ಯಾಂಕಿಂಗ್ ಪರೀಕ್ಷೆಗಳಿಗೆ ಅರ್ಜಿ ಸಲ್ಲಿಸಲು  ಬಯಸಿರುವ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ (ಪ್ರವರ್ಗ-1, ಪ್ರವರ್ಗ-2ಎ, ಪ್ರವರ್ಗ-3ಎ, ಪ್ರವರ್ಗ- 3ಬಿ) ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಶಿಷ್ಯ ವೇತನದೊಂದಿಗೆ ಉಚಿತ ತರಬೇತಿ ವ್ಯವಸ್ಥೆ ಕಲ್ಪಿಸಲಾಗಿದೆ. ಆಸಕ್ತರು ಜು.23ರೊಳಗೆ ಢಿಢಿಢಿ.ಛಿಛ್ಛ್ಞಢಿಛ್ಠಜ್ಛಟಛಡಜಡಡ.್ಞಛ್ಠ.ಟ್ಝ್ಛಿ.್ಝಟಿ ಮೂಲಕ ಅರ್ಜಿ ಸಲ್ಲಿಸಬಹುದು. ಪ್ರವೇಶ ಪರೀಕ್ಷೆ  ಶುಲ್ಕ 120 ಇಂಡಿಯನ್ ಪೋಸ್ಟಲ್ ಆರ್ಡರ್ ಮೂಲಕ ಆಯುಕ್ತರು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಬೆಂಗಳೂರು ಇವರಿಗೆ ಪಾವತಿಯಾಗುವಂತೆ  ಸಲ್ಲಿಸಬೇಕು. ವಿವರಗಳಿಗೆ ಹಾಸನದ ಕೃಷಿಕ್ ಸರ್ವೋದಯ ಫೌಂಡೇಷನ್ನ್ನು ಖುದ್ದಾಗಿ ಅಥವಾ  ಮೊ.984543336 ಸಂಪರ್ಕಿಸಬಹುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement