ಪತ್ರಕರ್ತೆ ಮೊಬೈಲ್ ಕದ್ದವನ ಬಂಧನ
ಸಕಲೇಶಪುರ: ಪತ್ರಕರ್ತರೊಬ್ಬರ ಮೊಬೈಲ್ ಮತ್ತು ಹಣ ದೋಚಿದ ವ್ಯಕ್ತಿಯನ್ನು ಗ್ರಾಮಾಂತರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಮೇ 21ರಂದು ಬೆಂಗಳೂರಿನ ಪತ್ರಕರ್ತೆ ಸುಮಲತಾ ಅವರು ಸ್ನೇಹಿತರೊಂದಿಗೆ ತಾಲೂಕಿನ ಭೀಮೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಲು ಆಗಮಿಸಿದ್ದರು. ದೇವಾಲಯ ಸಮೀಪದ ನದಿ ತೀರದಲ್ಲಿ ಬ್ಯಾಗುಗಳನ್ನು ಇಟ್ಟು ಸ್ನಾನಕ್ಕೆ ಇಳಿದ ವೇಳೆ ಸಮೀಪ ಜಂಬರಡಿ ಗ್ರಾಮದ ಅನುಕುಮಾರ್ ಹಣ, ಮೊಬೈಲ್ ಸಮೇತ ಬ್ಯಾಗ್ ಕಳ್ಳತನ ಮಾಡಿ ಪರಾರಿಯಾಗಿದ್ದ. ಪ್ರಕರಣ ದಾಖಲಿಸಿಕೊಂಡಿದ್ದ ಗ್ರಾಮಾಂತರ ಪೊಲೀಸರು ತನಿಖೆ ನಡೆಸಿ ಆರೋಪಿಯನ್ನು ಬಂಧಿಸಿ ಎರಡು ಮೊಬೈಲ್, 10000 ನಗದು ವಶಪಡಿಸಿಕೊಂಡಿದ್ದಾರೆ. ಇದಕ್ಕೆ ಸಹಕರಿಸಿದ ಅನುಕುಮಾರ್ ಗೆಳೆಯರನ್ನೂ ಬಂಧಿಸಲಾಗಿದೆ.
ತಾಯಿ, ಮಗು ನಾಪತ್ತೆ
ಸಕಲೇಶಪುರ: ತಾಲೂಕಿನ ಕಜಾಡುಮನೆ ಟೀ ಎಸ್ಟೇಟ್ನ ಕೂಲಿ ಕಾರ್ಮಿಕ ಸಂತೋಷ್ ಎಂಬವರ ಪತ್ನಿ ಜಯಂತಿ (21) ಜು.8 ರಂದು ಒಂದೂವರೆ ವರ್ಷದ ಮಗು ಭರತ್ನ್ನು ಕರೆದುಕೊಂಡು ಕಾಡುಮನೆಯಲ್ಲಿರುವ ಆಸ್ಪತ್ರೆಗೆ ಹೋಗಿ ಬರುವುದಾಗಿ ಹೇಳಿ ಹೋದವರು ವಾಪಸ್ ಬಂದಿಲ್ಲ. ಮನೆಯಿಂದ ಹೋಗುವ ವೇಳೆ ಮಹಿಳೆ ನೀಲಿ ಬಣ್ಣದ ಚೂಡಿದಾರ್ ಧರಿಸಿದ್ದರು. ಇವರ ಕುರಿತು ಮಾಹಿತಿ ಸಿಕ್ಕರೆ ಮೊ.9480804761 ಅಥವಾ ಹತ್ತಿರದ ಪೊಲೀಸ್ ಠಾಣೆಗೆ ತಿಳಿಸುವಂತೆ ಸಕಲೇಶಪುರ ಗ್ರಾಮಾಂತರ ಠಾಣಾ ಪಿಎಸೈ ಕೋರಿದ್ದಾರೆ.