ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಬಿಜೆಪಿ ಯುವ ಮೋರ್ಚಾ ಸಭೆ

Rashmi Kasaragodu
Updated On : 12 Jul 2014, 12:43 pm

ನುಗ್ಗೇಹಳ್ಳಿ (ಚನ್ನರಾಯಪಟ್ಟಣ ತಾ.): ತಾಲೂಕು ಬಿಜೆಪಿ ಯುವ ಮೋರ್ಚಾ ಕಾರ್ಯಕಾರಿಣಿ ನುಗ್ಗೇಹಳ್ಳಿಯ ಲಕ್ಷ್ಮಿನರಸಿಂಹ ಸ್ವಾಮಿ ಕಲ್ಯಾಣ ಮಂಟಪದಲ್ಲಿ ತಾಲೂಕಾಧ್ಯಕ್ಷ ಮುಳಕೆರೆ ಪ್ರಕಾಶ್ ಅಧ್ಯಕ್ಷತೆಯಲ್ಲಿ ಜರುಗಿತು. ಇದೇ ಸಂದರ್ಭದಲ್ಲಿ ತಾಲೂಕು ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿಯಾಗಿ ನುಗ್ಗೇಹಳ್ಳಿ ಪ್ರಶಾಂತ್, ಬಾಗೂರು ಹೋಬಳಿ ಅಧ್ಯಕ್ಷರಾಗಿ ಮಂಜುನಾಥ್ ಅವರನ್ನು ಆಯ್ಕೆ ಮಾಡಲಾಯಿತು. ಯುವಮೋರ್ಚಾ ಸಂಘಟನೆ ಬಗ್ಗೆ ಚರ್ಚಿಸಲಾಯಿತು. ನುಗ್ಗೇಹಳ್ಳಿ ಹೋಬಳಿಯ ಶಕ್ತಿ ಕೇಂದ್ರದ ಸಭೆ ಸಹ ನಡೆಯಿತು. ರಾಜ್ಯ ಕಾರ್ಯಕಾರಿಣಿ ಸಮಿತಿ ಸದಸ್ಯ ಪ್ರಕಾಶ್, ರಾಜ್ಯ ಪರಿಷತ್ ಸದಸ್ಯ ಮಾಸ್ತೀಗೌಡ, ತಾಲೂಕಾಧ್ಯಕ್ಷ ಓಬಳಾಪುರರಂಗೇಗೌಡ, ಕಾರ್ಯದರ್ಶಿ ಪರಮಗಂಗಾಧರ್, ಜಿಲ್ಲಾ ಎಸ್ಸಿ, ಎಸ್ಟಿ ಮೋರ್ಚಾ ಅಧ್ಯಕ್ಷ ರಾಮು ಇತರರು ಇದ್ದರು.
ವ್ಯಕ್ತಿ ನಾಪತ್ತೆ
ಹಾಸನ: ಅರಸೀಕೆರೆ ಬಸ್ನಿಲ್ದಾಣದಲ್ಲಿ ರಾತ್ರಿ ಮಲಗಿದ್ದ ಸೋಮಾನಾಯ್ಕ (45)ಕಾಣೆಯಾಗಿರುವ ಘಟನೆ ಇತ್ತೀಚೆಗೆ ನಡೆದಿದೆ. ಸೋಮನಾಯ್ಕ ಅವರು 5.5 ಅಡಿ ಎತ್ತರ, ಕಪ್ಪು ಕೂದಲು, ಗೋಧಿ ಬಣ್ಣ, ಕೋಲು ಮುಖ, ಬಿಳಿ ತುಂಬು ತೋಳಿನ ಶರ್ಟ್, ಚೌಕಳಿ ಲುಂಗಿ ಪಂಚೆ ಧರಿಸಿದ್ದು, ಕನ್ನಡ ಮತ್ತು ಹಿಂದಿ ಭಾಷೆ ಮಾತನಾಡುತ್ತಾರೆ. ಈ ವ್ಯಕ್ತಿಯ ಬಗ್ಗೆ ಮಾಹಿತಿ ದೊರೆತಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ-08172-268410, ಅರಸೀಕೆರೆ ಡಿವೈಎಸ್ಪಿ ಅವರ ದೂರವಾಣಿ 08174-232422 ಅಥವಾ ಆರಕ್ಷಕ ನಿರೀಕ್ಷಕರು 08174-232233 ಅವರಿಗೆ ತಿಳಿಸುವಂತೆ ಕೋರಿದೆ.
ಶೌರ್ಯ ಪ್ರಶಸ್ತಿಗೆ ಅರ್ಜಿ
ಹಾಸನ: ಇಂಡಿಯನ್ ಕೌನ್ಸಿಲ್ ಫಾರ್ ಚೈಲ್ಡ್ ವೆಲ್ಫೇರ್ (ಐಸಿಸಿಡಬ್ಲ್ಯೂ) ನವದೆಹಲಿ ಸಂಸ್ಥೆಯು 6ರಿಂದ 18 ವರ್ಷದೊಳಗಿನ ಮಕ್ಕಳು ತಮ್ಮ ಪ್ರಾಣದ ಹಂಗನ್ನು ತೊರೆದು ಇತರರ ಪ್ರಾಣ ರಕ್ಷಣೆಗಾಗಿ ಅಸಾಧಾರಣ ಧೈರ್ಯ, ಸಾಹಸ ಪ್ರದರ್ಶಿಸಿದ ಮಕ್ಕಳಿಗೆ ಶೌರ್ಯ ಪ್ರಶಸ್ತಿಗಾಗಿ ಅರ್ಜಿ ಆಹ್ವಾನಿಸಿದೆ. ಪ್ರಕರಣವು 2013ರ ಜುಲೈ 1ರಿಂದ 2014ರ ಜೂ.30ರೊಳಗೆ ನಡೆದಿರಬೇಕು. ಪ್ರಕರಣದ ಬಗ್ಗೆ ಎಫ್ಐಆರ್ ಆಗಿರಬೇಕು, ಸುದ್ದಿ ಪತ್ರಿಕೆಗಳಲ್ಲಿ ಪ್ರಕಟಗೊಂಡಿರಬೇಕು. ಅಂತಹ ಅರ್ಜಿಗಳನ್ನು 2014-15ನೇ ಸಾಲಿನ ಪ್ರಶಸ್ತಿಗಾಗಿ ನಿರ್ದಿಷ್ಟ ಪಡಿಸಿದ ಅರ್ಜಿ ನಮೂನೆಯಲ್ಲಿ ಭರ್ತಿ ಮಾಡಿ ಉಪ ನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಹಾಸನ ಇವರಿಂದ ಪಡೆದು ದ್ವಿಪ್ರತಿಯಲ್ಲಿ ಆ.30ರೊಳಗಾಗಿ ಸಲ್ಲಿಸಲು ಕೋರಿದ್ದಾರೆ.
ವಾರ್ಷಿಕ ಮಹಾಸಭೆ
ಹಾಸನ: ಸಹಕಾರ ಸಂಘಗಳ ಕಾಯಿದೆ 1959ರ ಕಲಂ 27(1)(ಎ) ರನ್ವಯ ಎಲ್ಲಾ ವಿಧವಾದ ಸಹಕಾರ ಸಂಘ, ಬ್ಯಾಂಕ್ಗಳು 2013-14ನೇ ಸಾಲಿನ ವಾರ್ಷಿಕ ಮಹಾ ಸಭೆಯನ್ನು ಸೆ.25ರೊಳಗೆ ಕಡ್ಡಾಯವಾಗಿ ನಡೆಸಬೇಕಾಗಿದೆ. ಆದ್ದರಿಂದ ಹಾಸನ ಉಪವಿಭಾಗದ ಎಲ್ಲಾ ಸಹಕಾರ ಸಂಘ, ಬ್ಯಾಂಕ್ಗಳು 2013-14ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾ ಸಭೆಯನ್ನು ಸೆ.25ರೊಳಗೆ ನಡೆಸುವಂತೆ ಹಾಸನ ಉಪವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕರು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement