ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಹೆದ್ದಾರಿಗೆ ಖಾಸಗಿ ಭೂಮಿ: ಹೆಚ್ಚಿನ ಪರಿಹಾರ ಬೇಕಿದ್ದರೆ ಪ್ರತಿಭಟನೆ ಮೂಲಕ ಪಡೆಯಿರಿ

Rashmi Kasaragodu
Updated On : 12 Jul 2014, 12:46 pm

ಬೇಲೂರು: ಬಾಣಾವರ ಬೇಲೂರು ರಾಷ್ಟ್ರಿಯ ಹೆದ್ದಾರಿ ಕಾಮಗಾರಿ ಪ್ರಗತಿಯಲ್ಲಿ ಇದ್ದು, ಕೆಲವು ಖಾಸಗಿ ಭೂಮಿ ವಶ ಮಾಡಿಕೊಳ್ಳಬೇಕಾಗಿದೆ. ಈ ದಿಸೆಯಲ್ಲಿ ಖಾಸಗಿ ಭೂಮಿಗೆ ಪರಿಹಾರ ನೀಡಲಾಗುತ್ತದೆ. ರೈತರಿಗೆ ಇನ್ನೂ ಹೆಚ್ಚಿನ ಪರಿಹಾರ ಬೇಕಾದರೆ ಎರಡನೇ ಬಾರಿ ಪ್ರತಿಭಟನೆ ಮಾಡುವ ಮೂಲಕ ಪರಿಹಾರ ಪಡೆಯಬಹುದು ಎಂದು ಸಕ್ಷಮ ಪ್ರಾಧಿಕಾರಿ ಹಾಗೂ ವಿಶೇಷ ಭೂಸ್ವಾಧೀನಾಧಿಕಾರಿ ಜಿ.ರಶ್ಮಿ ತಿಳಿಸಿದರು. ಪಟ್ಟಣದ ಪ್ರವಾಸಿ ಮಂದಿರಲ್ಲಿ ಬಾಣಾವರ ಬೇಲೂರು ಹೆದ್ದಾರಿಯಲ್ಲಿ ಭೂಮಿ ಕಳೆದುಕೊಂಡ ರೈತರಿಗೆ ಪರಿಹಾರ ಅರ್ಜಿ ಪಡೆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಬಾಣಾವರ ಮತ್ತು ಬೇಲೂರು ತನಕ ರಾಷ್ಟ್ರೀಯ ಹೆದ್ದಾರಿ 234 ಹಾಸನ ಜಿಲ್ಲೆಯ ಬೇಲೂರಿನಿಂದ ಚಿಕ್ಕಬ್ಯಾಡಿಗೆರೆ, ಎಂ.ಹುಣಸೇಕೆರೆ, ಹೆಬ್ಬಾಳು, ಕಲ್ಲಹಳ್ಳಿ, ಕಲ್ಲಹಳ್ಳಿ ಕಾವಲ್, ಚೀಲನಾಯಕನಹಳ್ಳಿ, ತಿಪ್ಪನಹಳ್ಳಿ, ಹಳೇಬೀಡು ತಾಲೂಕಿನ ವ್ಯಾಪ್ತಿಗೆ ಒಳಪಟ್ಟಿದೆ. ಈ ಗ್ರಾಮದ ಹೆದ್ದಾರಿ ಹೊಗುವ ಮಾರ್ಗದಲ್ಲಿ ಖಾಸಗಿ ಭೂಮಿ ಅಡ್ಡ ಬಂದ ಕಾರಣ ಅವರಿಗೆ ಸೂಕ್ತ ಪರಿಹಾರ ನೀಡುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಈ ದಿಸೆಯಲ್ಲಿ ಶುಕ್ರವಾರ ರೈತರಿಂದ ಪರಿಹಾರ ಅರ್ಜಿ ಸ್ವೀಕರಿಸಲಾಗಿದೆ. ರೈತರ ಜಮೀನು ಯಾರ ಹೆಸರಿನಲ್ಲಿ ಇದೆ ಸೇರಿದಂತೆ ಹಲವು ದಾಖಲೆಗಳನ್ನು ಪರಿಶೀಲನೆ ನಡೆಸಿ ಮೂರು ತಿಂಗಳ ಒಳಗೆ ಪರಿಹಾರ ನೀಡಲಾಗುತ್ತದೆ. ರೈತರ ಭೂಮಿಗೆ ಪರಿಹಾರ ನೀಡುವ ವೇಳೆ ಸ್ಥಳೀಯ ನೋಂದಣಿ ಅಧಿಕಾರಿಗಳಲ್ಲಿ ಚರ್ಚೆ ಮಾಡಲಾಗುತ್ತದೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement