ಜೂಜಾಡುತ್ತಿದ್ದ 11 ಮಂದಿ ಬಂಧನ: 1850 ವಶ
ಹಾಸನ: ಜಿಲ್ಲೆಯ ನಾನಾ ಕಡೆ ಅಂದರ್ ಬಾಹರ್ ಜೂಜಾಡುತ್ತಿದ್ದ 11ಮಂದಿಯನ್ನು ಬಂಧಿಸಿರುವ ಪೊಲೀಸರು 1850 ನಗದನ್ನು ವಶಪಡಿಸಿಕೊಂಡಿರುವ ಘಟನೆ ಶುಕ್ರವಾರ ನಡೆದಿದೆ. ಹಾಸನದ ನಗರಸಭೆ ಹಿಂಭಾಗದ ಖಾಲಿ ಜಾಗದಲ್ಲಿ ಅಕ್ರಮವಾಗಿ ಅಂದರ್ ಬಾಹರ್ ಜೂಜಾಡುತ್ತಿದ್ದ ಹಳೇಪೋಸ್ಟ್ ಆಫೀಸ್ ರಸ್ತೆಯ ವಾಸಿ ಸುರೇಶ(54), ಬಿಟ್ಟಗೋಡನಹಳ್ಳಿಯ ರವಿ(24), ಹೇಮಾವತಿ ನಗರದ ಉಮೇಶ(40) ಎಂಬವನ್ನು ಪೊಲೀಸರು ಬಂಧಿಸಿದ್ದಾರೆ. ಜೂಜಾಟದಲ್ಲಿ ಪಣಕ್ಕಿಟ್ಟಿದ್ದ ರು. 800 ನಗದನ್ನು ವಶಪಡಿಸಿಕೊಳ್ಳಲಾಗಿದ್ದು, ಪ್ರಕರಣ ದಾಖಲಾಗಿದೆ. ಹೊಳೆನರಸೀಪುರ ತಾಲೂಕಿನ ಹಳ್ಳಿಮೈಸೂರು ಹೋಬಳಿ ನೇರಳೆ ಗ್ರಾಮದ ಸಮುದಾಯ ಭವನದ ಹಿಂಭಾಗದಲ್ಲಿ ಅಕ್ರಮವಾಗಿ ಅಂದರ್ ಬಾಹರ್ ಜೂಜಾಡುತ್ತಿದ್ದ ನೇರಳೆ ಗ್ರಾಮದ ಕಾಂತರಾಜ(58), ಚಂದ್ರ(42), ರವಿ(40), ಚಿಕ್ಕೇಗೌಡ(35), ಬೀರೇಗೌಡ(25), ಬೀರೇಗೌಡ(25), ಕೃಷ್ಣೇಗೌಡ(24), ಕುಮಾರ(38) ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ. ಜೂಜಾಟದಲ್ಲಿ ಪಣಕ್ಕಿಟ್ಟಿದ್ದ ರು. 1050 ನಗದನ್ನು ವಶಪಡಿಸಿಕೊಳ್ಳಲಾಗಿದೆ. ಹೊಳೆನರಸೀಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.