ಬೋಚೇನಹಳ್ಳಿ ಕಾವಲು ಗ್ರಾಮದ ಮಹಿಳೆ ನಾಪತ್ತೆ
ಹಾಸನ: ಚಿಕ್ಕಮಗಳೂರು ಜಿಲ್ಲೆಯ ಲಕ್ಯಾ ಹೋಬಳಿ ಬೋಚೇನಹಳ್ಳಿ ಕಾವಲು ಗ್ರಾಮದ ವಾಸಿ ನಾಗರಾಜು ಅವರು ಪತ್ನಿ ಗೀತಾ ಮತ್ತು ಮಕ್ಕಳೊಂದಿಗೆ ಇತ್ತೀಚೆಗೆ ಹಾಸನ ತಾಲೂಕು ಸಾಲಗಾಮೆ ಹೋಬಳಿ ಗುಂಡಶೆಟ್ಟಿಹಳ್ಳಿ ಗ್ರಾಮಕ್ಕೆ ಬಂದು ಶಾಲೆಯಲ್ಲಿ ವಾಸ್ತವ್ಯ ಮಾಡಿದ್ದರು. ಅದೇ ಗ್ರಾಮದ ರಾಜೇಶ ಅವರ ಶುಂಠಿ ಜಮೀನಿನಲ್ಲಿ ಕೆಲಸ ಮಾಡಿಕೊಂಡಿದ್ದು, ಜುಲೈ 9ರಂದು ನಾಗರಾಜು ಅವರು ಶುಂಠಿ ಕೆಲಸಕ್ಕೆ ಹೋಗಿದ್ದು, ವಾಪಸ್ ಸ್ಕೂಲ್ ಹತ್ತಿರ ಬಂದು ನೋಡಲಾಗಿ ಗೀತಾ(25) ನಾಪತ್ತೆಯಾಗಿದ್ದಾರೆ. 5 ಅಡಿ ಎತ್ತರ, ಕೋಲುಮುಖ, ಎಣ್ಣೆಗೆಂಪು ಬಣ್ಣ, ಸಾಧಾರಣ ಮೈಕಟ್ಟು, ಕನ್ನಡ ಭಾಷೆ ಮಾತನಾಡುತ್ತಾರೆ. ಮನೆಯಿಂದ ಹೋಗುವಾಗ ಕೆಂಪು ಬಣ್ಣದ ಹೂವಿರುವ ಸೀರೆ ಮತ್ತು ಕೆಂಪು ರವಿಕೆ ಧರಿಸಿದ್ದರು ಎಂದು ನಾಗರಾಜ ಅವರು ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.