ವಾಸವಿ ಕ್ಲಬ್ನಿಂದ ಗಿಡ ನೆಡುವ ಕಾರ್ಯಕ್ರಮ
ಹೊಳೆನರಸೀಪುರ: ಪಟ್ಟಣದ ವಾಸವಿ ಕ್ಲಬ್ನ ವತಿಯಿಂದ ಅಂತಾರಾಷ್ಟ್ರೀಯ ವಾಸವಿ ಕ್ಲಬ್ನ ಕಾರ್ಯಕ್ರಮವಾದ ಡಾನ್ ಟು ಡಸ್ಕ್ ಅಂಗವಾಗಿ ಗಿಡಗಳನ್ನು ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ಅಂಗವಾಗಿ ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ ಮತ್ತು ಅರಣ್ಯ ಇಲಾಖೆ ರ ಸಹಯೋಗದೊಂದಿಗೆ ಸರ್ಕಾರಿ ಬಾಲಕರ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ 50 ಗಿಡಗಳನ್ನು ನೆಡಲಾಯಿತು. ಇದರ ಉದ್ಘಾಟನೆಯನ್ನು ಹಿರಿಯ ಸಿವಿಲ್ ನ್ಯಾಯಾಧೀಶ ಜಿ.ಎಂ.ಶೀನಪ್ಪರವರು ಗಿಡ ನೆಡುವುದರ ಮೂಲಕ ನೆರವೇರಿಸಿದರು. ಕಿರಿಯ ಸಿವಿಲ್ ನ್ಯಾಯಾಧೀಶ ಚಂದ್ರಶೇಖರ ಪ್ರಭಪ್ಪ ದಿಡ್ಡಿ, ಅಧಿಕ ಸಿವಿಲ್ ನ್ಯಾಯಾಧೀಶ ವಿ.ಮಾದೇಶ್, ಸಹಾಯಕ ಸರ್ಕಾರಿ ಅಭಿಯೋಜಕ ಬಿ.ಇ.ಯೋಗೇಶ್ವರ ಮತ್ತು ಯಶೋಧ, ವಕೀಲರ ಸಂಘದ ಅಧ್ಯಕ್ಷ ಆರ್.ಡಿ.ರವೀಶ್, ಕಾರ್ಯದರ್ಶಿ ಸಿ.ಎನ್.ಲೋಕೇಶ್, ವಲಯ ಅರಣ್ಯಾಧಿಕಾರಿ ಪಿ.ಸಿ.ರವೀಂದ್ರ ಮತ್ತು ವಕೀಲರು ಹಾಗೂ ನ್ಯಾಯಾಲಯದ ಸಿಬ್ಬಂದಿ ಇದ್ದರು. ಎ.ಆರ್.ರವಿಕುಮಾರ್, ನಟರಾಜ್, ಎಸ್.ಗೋಕುಲ್, ಎಸ್.ಆರ್.ಮೂರ್ತಿ ಇದ್ದರು.