ಹಾಸನ

ಶೋಷಣೆಯ ಸಾಧನದತ್ತ ವಿಜ್ಞಾನ

ಕನ್ನಡಪ್ರಭ ವಾರ್ತೆ  ಹಾಸನ  ಜು. 14
ವಿಜ್ಞಾನದ ಸಂಶೋಧನೆ ಮತ್ತು ಆವಿಷ್ಕಾರಗಳು ಜನಸಾಮಾನ್ಯರನ್ನು ತಲುಪುತ್ತಿಲ್ಲ. ವಿಜ್ಞಾನ ಮತ್ತು ತಂತ್ರ ಜ್ಞಾನಗಳು ಕೆಲವೇ ಕೆಲವರ ಕೈವಶವಾಗುತ್ತಿದೆ. ಅವುಗಳನ್ನು ಜನಸಮುದಾಯದ ಒಳಿತಿಗಾಗಿ ಬಳಸದೆ, ತಮ್ಮ ವೈಯಕ್ತಿಕ ಹೆಚ್ಚು ಹೆಚ್ಚು ಲಾಭ ಗಳಿಸಲು ಉಪಯೋಗಿಸಲಾಗುತ್ತಿದೆ. ಸಾವಿರಾರು ವರ್ಷಗಳಿಂದ ಶೋಷಿಸಲ್ಪಟ್ಟ ಜನ ಸಮುದಾಯ ಈಗ ವಿಜ್ಞಾನಗಳ ಆವಿಷ್ಕಾರಗಳಿಂದ ಶೋಷಿಸಲ್ಪಡುತ್ತಿದ್ದಾರೆ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಸಂಚಾಲಕ ನವೀನ್ ಕುಮಾರ್ ವಿಷಾದಿಸಿದರು.
 ಭಾರತ ಜ್ಞಾನ ವಿಜ್ಞಾನ ಸಮಿತಿ ಮತ್ತು ಬೆಂಗಳೂರಿನ ಫ್ರೀ ಸಾಫ್ಟ್‌ವೇರ್ ಮೂವ್‌ಮೆಂಟ್ ಆಫ್ ಕರ್ನಾಟಕ ಆಶ್ರಯದಲ್ಲಿ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ನಡೆದ ಫ್ರೀ ಸಾಫ್ಟ್‌ವೇರ್ ಮೂವ್‌ಮೆಂಟ್ ಕಾರ್ಯಾಗಾರದಲ್ಲಿ  ಮಾತನಾಡಿ, ಭಾರತಕ್ಕೆ ವ್ಯಾಪಾರದ ದೃಷ್ಟಿಯಿಂದ ಬಂದ ಈಸ್ಟ್ ಇಂಡಿಯ ಕಂಪನಿ 200 ವರ್ಷ ನಮ್ಮನ್ನು ಗುಲಾಮರನ್ನಾಗಿಸಿತ್ತು. ಇಂದು ಅನೇಕ ಷರತ್ತುಗಳನ್ನೊಳಗೊಂಡ, ಸಾಫ್ಟ್‌ವೇರ್‌ಗಳು ನಮ್ಮನ್ನು ಶೋಷಿಸುತ್ತಿವೆ. ಸಾಫ್ಟ್‌ವೇರ್ ಕಂಪನಿಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಎಂಜಿನಿಯರ್‌ಗಳು ಯಂತ್ರಗಳಂತೆ ಕೆಲಸ ನಿರ್ವಹಿಸುತ್ತಿದ್ದು, ಮಾನವೀಯತೆಯನ್ನು ಕಳೆದುಕೊಳ್ಳುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.
ಎಫ್‌ಎಸ್‌ಎಂಕೆಯ ಚೈತ್ರಾ ಕುಲಕರ್ಣಿ ಉಚಿತ ಸಾಫ್ಟ್‌ವೇರ್‌ಗಳ ಬಗ್ಗೆ ಉಪನ್ಯಾಸ ನೀಡುತ್ತಾ, ಕೊಂಡುಕೊಂಡ ವಸ್ತುವಿನ ಮೇಲೆ ಗ್ರಾಹಕನಿಗೆ ಅಧಿಕಾರ ಮತ್ತು ಸ್ವತಂತ್ರ ಇರಬೇಕು. ಆದರೆ ಮಾಲಿಕತ್ವದ ಸಾಫ್ಟ್‌ವೇರ್‌ಗಳಲ್ಲಿ ಇದು ಇಲ್ಲವಾಗಿದೆ. ಅವುಗಳಿಂದ ಹೊರ ಬಂದು, ಉಚಿತ ಸಾಫ್ಟ್‌ವೇರ್ ಬಳಸುವಂತೆ ಕಿವಿಮಾತು ಹೇಳಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ, ಸಾಫ್ಟೆಕ್ ಕಂಪ್ಯೂಟರ್ ಅಕಾಡೆಮಿಯ ವ್ಯವಸ್ಥಾಪಕ ನಿರ್ದೇಶಕ ಬಿ.ಜಿ. ಗೋಪಾಲಕೃಷ್ಣ, ರಾಜ್ಯ  ಸರ್ಕಾರವೂ ಉಚಿತ ಸಾಫ್ಟ್‌ವೇರ್‌ಗಳನ್ನು ಜನಪ್ರಿಯಗೊಳಿಸಿ, ಬಳಕೆಗೆ ತರಬೇಕು ಎಂದು ತಿಳಿಸಿದರು. ಬಿಜಿವಿಎಸ್‌ನ ರಾಜ್ಯ ಜಂಟಿ ಕಾರ್ಯದರ್ಶಿ ಎಚ್.ಎ. ಅಹಮದ್, ಮಾನವನ ಇತಿಹಾಸದಲ್ಲಿ ವಿಜ್ಞಾನದ ಬೆಳವಣಿಗೆ ಇತಿಹಾಸ ಕುರಿತು ವಿವರಿಸಿದರು.
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಒಕ್ಕೂಟದ ಜಿಲ್ಲಾ ಕಾರ್ಯದರ್ಶಿ ಡಿ.ಟಿ. ಶಿವಣ್ಣ ಉಪಸ್ಥಿತರಿದ್ದರು. ಬಿಜಿವಿಎಸ್ ತಾಲೂಕು ಕಾರ್ಯದರ್ಶಿ ಜಯಪ್ರಕಾಶ ಸ್ವಾಗತಿಸಿದರು, ಸಾಫ್ಟೆಕ್‌ನ ಪ್ರಸಾದ್ ವಂದಿಸಿದರು.

ಸಾವಯವ ಕೃಷಿ ಮಾರ್ಗದರ್ಶನ ಅಗತ್ಯ
ಅರಸೀಕೆರೆ:  ತ್ತಮ ಉತ್ತಮ ತಳಿ ಬೀಜಗಳನ್ನು ಉಪಯೋಗಿಸಿ ಇಲಾಖೆಯ ಮಾರ್ಗದರ್ಶನದಲ್ಲಿ ವ್ಯವಸಾಯ ಮಾಡಿದಲ್ಲಿ ಅನಾವಶ್ಯಕವಾದ ಹಣದ ದುರುಪಯೋಗ ತಡೆಯುವುದು ಮಾತ್ರಲ್ಲದೆ ಉತ್ತಮ ಇಳುವರಿಯ ಮೂಲಕ ಹೆಚ್ಚಿನ ಆದಾಯಗಳಿಸಬಹುದು ಎಂದು ಅರಸೀಕೆರೆ  ತೋಟಗಾರಿಕಾ ಸಂಶೋಧನಾ ಕೇಂದ್ರದ ಕೃಷಿ ತಜ್ಞ ಡಾ. ಪ್ರಶಾಂತ್ ಅಭಿಪ್ರಾಯಪಟ್ಟರು. ಇತ್ತೀಚೆಗೆ ಅರಸೀಕೆರೆ ಚರ್ಚ ಸಮುದಾಯ ಭವನದಲ್ಲಿ ಕೇಂದ್ರ ಸರಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಹಕಾರದಲ್ಲಿ ಹಾಸನದ ಚಿಕ್ಕಮಗಳೂರು ಮಲ್ಟಿಪರ್ಪಸ್ ಸೋಷಿಯಲ್ ಸರ್ವಿಸ್ ಸೊಸೈಟಿ ಸಂಸೆ ಏರ್ಪಡಿಸಿದ್ದ ಸಾವಯವ ಕೃಷಿ ಮತ್ತು ಮಹಿಳಾ ಸಹಕಾರಿ ಸಂಘಗಳ ಮಾಹಿತಿ ಹಾಗೂ ರಚನೆ ಕಾರ್ಯಕ್ರಮ ವನ್ನು ಉದ್ದೇಶಿಸಿ  ಮಾತನಾಡುತ್ತಿದ್ದರು.
ಸಿಎಂಎಸ್‌ಎಸ್‌ಎಸ್ ಸಂಸ್ಥೆಯ ಸಂಯೋಜಕ ವಿನ್ಸಿ ಸಿಕ್ವೇರಾ ಮಾತನಾಡಿ, ದೇಶದಲ್ಲಿ ಜನಸಂಖ್ಯೆ ಹೆಚ್ಚಾಗುತ್ತಿದೆ. ದಿನದಿಂದ ದಿನಕ್ಕೆ ಆಹಾರದ ಬೇಡಿಕೆ ಹೆಚ್ಚಾಗಿ ಪೂರೈಕೆ ಕಡಿಮೆಯಾಗುತ್ತಿದೆ. ಅದರಲ್ಲಿಯೂ ಗುಣಮಟ್ಟದ ಆಹಾರ ಉತ್ಪನ್ನ ಗಳ ಕೊರತೆ ಸಾಕಷ್ಟಿದೆ. ಕೃಷಿಕರು ಆಧುನಿಕ ತಂತ್ರಜ್ಞಾನ ಬಳಸಿ ಹೆಚ್ಚು ಇಳುವರಿಯನ್ನು ಪಡೆಯುವ ಜೊತೆಗೆ ಸಾವಯವದಂತಹ ಸಾಂಪ್ರದಾಯಿಕ ಪದ್ಧತಿಯನ್ನು ಅಳವಡಿಸಿಕೊಳ್ಳಬೇಕೆಂದರು.  ಗುಣಮಟ್ಟ ಉತ್ಪನ್ನ ಬೆಳೆಸಿ ಪ್ರಸ್ತುತ ಹೆಚ್ಚಿನ ದರಕ್ಕೆ ಮಾರಾಟ ಮಾಡಬೇಕು ಎಂದರು. ಸಂಸ್ಥೆ ಸಂಯೋಜಕಿ ಮತ್ತು ಪುರಸಭೆ ಸದಸ್ಯೆ ಅನ್ನಪೂರ್ಣ ಸ್ವಾಗತಿಸಿ, ನಿರೂಪಿಸಿದರು. ಆಶಾ ವಂದಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಾಳೆ CJPಯ ತಿರಂಗಾ ಮೆರವಣಿಗೆ ನಡೆಯಬೇಕಿದ್ದ ದೆಹಲಿಯ ಸೆಂಟ್ರಲ್ ಪಾರ್ಕ್ ಅನ್ನು 2 ದಿನ ಮುಚ್ಚಿದ NDMC!

ಕನ್ನಡಿಗರು ಕೊಟ್ಟ ದುಡ್ಡಲ್ಲೇ AR Rahman ತಮ್ಮ ಮೊದಲ ಸ್ಟುಡಿಯೋ ಕಟ್ಟಿದ್ದು: ನಟ ಯಶ್

ದೇಶಕ್ಕೆ ಹೇಗೆ ಬೆಂಕಿ ಹಚ್ಚಬೇಕು ಎಂಬುದನ್ನು ಬಾಂಗ್ಲಾದೇಶ ನಮಗೆ ತೋರಿಸಿಕೊಟ್ಟಿದೆ: ನೇಹಾ ಬೋರಾ ಹೇಳಿಕೆಗೆ ಬಿಜೆಪಿ ಆಕ್ರೋಶ!

Ramayana: 'ರಾಮಾಯಣ'ದ ರನ್ ಟೈಮ್ ಮೂರು ಗಂಟೆಗೂ ಹೆಚ್ಚು; ಅಮೆರಿಕದಲ್ಲಿ 'PG-13' ರೇಟಿಂಗ್!

ದೆಹಲಿಯ ರಾಮಲೀಲಾದಲ್ಲಿ ಈ ಬಾರಿ ರಾವಣನ ಜೊತೆಗೆ 30 ಅಡಿ ಎತ್ತರದ ಕಾಕ್ರೋಚ್ ಪ್ರತಿಕೃತಿ ದಹನ!