ಆಹಾರ ವ್ಯಾಪಾರಿಗಳ ನೋಂದಣಿ ಪರವಾನಗಿ ಕಡ್ಡಾಯ
ಹಾಸನ: ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ 2006 ನಿಯಮ ಮತ್ತು ನಿಬಂಧನೆ 2011 ದೇಶದಾದ್ಯಂತ 5ನೇ ಆಗಸ್ಟ್ 2011ರಿಂದ ಜಾರಿಗೆ ಬಂದಿದೆ. ಆಹಾರ ವ್ಯಾಪಾರಿಗಳನ್ನು ನೋಂದಣಿ ಮಾಡಿಸುವುದು ಹಾಗೂ ಪರವಾನಗಿ ಮಾಡಿಸುವುದು ಕಡ್ಡಾಯವಾಗಿದೆ.
ಆಹಾರ ವಸ್ತುಗಳ ತಯಾರಕರು, ವಿತರಕರು, ಸಗಟುದಾರರು, ಯಾಕರ್ಗಳು, ಸಂಗ್ರಹಕಾರರು, ಚಿಲ್ಲರೆ ಮಾರಾಟಗಾರರು, ಡಾಬಾ, ಸ್ವೀಟ್ಸ್ಟಾಲ್, ಮೆಸ್, ಕ್ಯಾಂಟೀನ್, ಮಾಂಸ ಮಾರಾಟಗಾರರು, ಹಣ್ಣು- ತರಕಾರಿ, ರಸ್ತೆ ಬದಿ ವ್ಯಾಪಾರಿಗಳು, ಹಾಲಿನ ವ್ಯಾಪಾರಿಗಳು, ಸಾಗಾಣಿಕೆದಾರರು, ಕ್ಯಾಟರಿಂಗ್, ಸಮುದಾಯ ಭವನ, ಕಲ್ಯಾಣ ಮಂಟಪದವರು, ಪ್ಯಾಕೇಜ್ಡ್ ಕು ಡಿಯುವ ನೀರಿನ ಘಟಕ, ಪೇಯಿಂಗ್ ಗೆಸ್ಟ್ ಹಾಗೂ ಇತರ ಎಲ್ಲಾ ಆಹಾರ ಪದಾರ್ಥಗಳ ವ್ಯಾಪಾರಿಗಳು 4ನೇ ಆಗಸ್ಟ್ 2014ರ ಒಳಗಾಗಿ ನೋಂದಣಿ, ಪರವಾನಗಿಯನ್ನು ಕಡ್ಡಾಯವಾಗಿ ಪಡೆಯತಕ್ಕದ್ದು. ಒಂದು ಪಾಸ್ಪೋರ್ಟ್ ಅಳತೆಯ ಫೋಟೋ, ಗುರುತಿನ ಚೀಟಿ, ವೈದ್ಯಕೀಯ ಪ್ರಮಾಣ ಪತ್ರ, ವಾರ್ಷಿಕ ವಹಿವಾಟಿನ ಮಾಹಿತಿಗಳೊಂದಿಗೆ ಢಿಢಿಢಿ.ಜಿಡಡಛ್ಝ.್ಜ್ಟಢ.್ಝಟಿ ನಲ್ಲಿ ಲಾಗಿನ್ ಆಗಿ ಆನ್ ಲೈನ್ ನೋಂದಣಿ ಪರವಾನಗಿಯನ್ನು ತಾವೇ ಸ್ವತಃ ಸಲ್ಲಿಸಬಹುದು.
ಮಾಹಿತಿಗಾಗಿ ಡಾ. ರವಿಕುಮಾರ್ ಎನ್.ಎಸ್ (ಮೊ. 94487424 08), ಅಂಕಿತ ಅಧಿಕಾರಿಗಳು, ಹಾಸನ, ಹೆಚ್.ಎಂ.ಹಡಬಸವೇಗೌಡ (ಮೊ. 7259793549), ಆಹಾರ ಸುರಕ್ಷತಾಧಿಕಾರಿಗಳು, ಹಾಸನ, ಚನ್ನರಾಯಪಟ್ಟಣ, ಆಲೂರು, ಮರುಳಯ್ಯ(ಮೊ. 9986364422), ಆಹಾರ ಸುರಕ್ಷತಾಧಿಕಾರಿಗಳು, ಅರಸೀಕೆರೆ, ಸಕಲೇಶಪರ, ಬೇಲೂರು, ಕೃಷ್ಣ(ಮೊ. 9945075532), ಆಹಾರ ಸುರಕ್ಷತಾಧಿಕಾರಿಗಳು, ಹೊಳೆನರಸೀಪುರ, ಅರಕಲಗೂಡು ತಾಲೂಕು ಇವರನ್ನು ಸಂಪರ್ಕಿಬಹುದು. ಈಗಾಗಲೇ ಆಹಾರ ನೋಂದಣಿ, ಪರವಾನಗಿ ಪಡೆದವರು ನವೀಕರಿಸಿಕೊಳ್ಳಬಹುದು. ನೋಂದಣಿ, ಪರವಾನಗೆ ಇಲ್ಲದೆ ವಹಿವಾಟು ನಡೆಸಿದಲ್ಲಿ 6 ತಿಂಗಳ ಶಿಕ್ಷೆ, 5 ಲಕ್ಷದವರೆಗೆ ದಂಡ ತೆರಬೇಕಾಗುತ್ತದೆ ಎಂದು ಅಂಕಿತ ಅಧಿಕಾರಿ, ಜಿಲ್ಲಾ ಆರೋಗ್ಯ , ಕುಟುಂಬ ಕಲ್ಯಾಣಾಧಿಕಾರಿ ತಿಳಿಸಿದ್ದಾರೆ.