ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ರಸ್ತೆ ಅಭಿವೃದ್ಧಿಗೆ ಕೇಂದ್ರಕ್ಕೆ ಪ್ರಸ್ತಾವನೆ

Vishwanath S
Updated On : 16 Jul 2014, 12:54 pm

ಅರಸೀಕೆರೆ: ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ಕಸಬಾ ಹೋಬಳಿ ವ್ಯಾಪ್ತಿಯ 8.96 ಕಿ.ಮೀ ರಸ್ತೆ ಅಭಿವೃದ್ಧಿಗೆ ಕೇಂದ್ರಕ್ಕೆ ಪ್ರಸ್ತಾವನೆ ಕಳುಹಿಸಿಕೊಡಲಾಗಿದೆ ಎಂದು ಶಾಸಕ ಕೆ.ಎಂ ಶಿವಲಿಂಗೇಗೌಡ ತಿಳಿಸಿದರು.
ವಿವಿಧ ರಸ್ತೆ ಅಭಿವೃದ್ಧಿ ಕಾಮಗಾರಿಗಳ ಅನುಷ್ಠಾನ ಕುರಿತಂತೆ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿ, ತಮ್ಮ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 470 ಕಿ.ಮೀ ರಸ್ತೆಯನ್ನು ಜಿಲ್ಲಾ ಪಂಚಾಯ್ತಿಯಿಂದ  ಪಿಡಬ್ಲ್ಯೂಡಿಗೆ ಸೇರಿಸಿ, ಮೇಲ್ದರ್ಜೆಗೇರಿಸಲಾಗಿದೆ. ಕೆಲವಡೆ ಕಾಮಗಾರಿಯನ್ನು ಈಗಾಗಲೇ ಕೈಗೆತ್ತಿಕೊಳ್ಳಲಾಗಿದೆ ಎಂದು ಹೇಳಿದರು.
ವಿವಿಧೆಡೆಗೆ ರಸ್ತೆ: ಕಸಬಾ ಹೋಬಳಿ ವ್ಯಾಪ್ತಿಯ ಪುಣ್ಯ ಕ್ಷೇತ್ರ ಯಾದಾಪುರ ಜೇನುಕಲ್ ಸಿದ್ದೇಶ್ವರ ಸ್ವಾಮಿ ಕ್ಷೇತ್ರದ ಅಭಿವೃದ್ಧಿಯನ್ನು ಗಮನದಲ್ಲಿಟ್ಟು ಸಂಕೋಡನಹಳ್ಳಿ, ಯಾದಾಪುರ, ಅಣ್ಣಾಯ್ಕನಹಳ್ಳಿ ಮೇಗಳಹಟ್ಟಿ, ಎಂ ಹೊಸಹಟ್ಟಿ, ಮಣ್ಣುಮಾಕನಹಳ್ಳಿ ನಡುವೆ 8.96 ಕಿ.ಮೀ ರಸ್ತೆ ಅಭಿವೃದ್ಧಿಪಡಿಸುವಂತೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಈಗಾಗಲೇ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಿಕೊಟ್ಟಿದ್ದಾರೆ. ಕಾಮಗಾರಿಗೆ ಅನುಮೋದನೆ ದೊರೆತ ಕೂಡಲೇ ಸಂಕೋಡನಹಳ್ಳಿ ಗ್ರಾಮದಲ್ಲಿಯೇ ಭೂಮಿ ಪೂಜೆ ನೆರವೇರಿಸಲಾಗುವುದು ಎಂದು ಮಾಹಿತಿ ನೀಡಿದರು.
ಜಪಾನ್ ಇಂಟರ್‌ನ್ಯಾಷನಲ್ ಕೋ ಆಪರೇಟಿವ್ ಏಜೆನ್ಸಿ (ಜೈಕಾ) ಕಂಪನಿ ಪಿ.ಎಂ.ಜಿ.ಎಸ್.ವೈ ರಸ್ತೆಗಳಿಗೆ ಸಂಬಂಧಿಸಿದಂತೆ ರಾಜ್ಯದಲ್ಲಿ ಕಾಮಗಾರಿ ಹೊಣೆ ಹೊತ್ತಿದೆ. ಇದೇ ಕಂಪನಿಗೆ ರಸ್ತೆ ಅಭಿವೃದ್ಧಿ ಜವಾಬ್ದಾರಿ ದೊರೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಶ್ರೀ ಕ್ಷೇತ್ರದ ಅಭಿವೃದ್ಧಿಯ ವಿಷಯದಲ್ಲಿ ರಾಜಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.
ವೋಲ್ಟೇಜ್ ಸಮಸ್ಯೆ: ಗ್ರಾಮಸ್ಥರ ಪ್ರತಿಭಟನೆ
ಚೆಸ್ಕಾಂ ಕಚೇರಿ ಅಧಿಕಾರಿಗಳಿಗೆ ಸಮಸ್ಯೆ ತಿಳಿಸಿದ ರೈತ ಮುಖಂಡರು
ಹಾರನಹಳ್ಳಿ (ಅರಸೀಕೆರೆ ತಾ.): ಇಲ್ಲಿನ ಚೆಸ್ಕಾಂ ಕಚೇರಿ ವ್ಯಾಪ್ತಿಯಲ್ಲಿ ಕಳೆದ ವಾರದಿಂದ ರಾತ್ರಿ 6ರಿಂದ 10 ಘಂಟೆ ಸಮಯದಲ್ಲಿ ಒಪನ್ ಡೇಲ್ಟಾ ಸರ್ವೀಸ್ ವಿದ್ಯುತ್ ನೀಡುತ್ತಿದ್ದು, ಇದರಿಂದ ಗ್ರಾಮಗಳಲ್ಲಿ ವೋಲ್ಟೇಜ್ ಸಮಸ್ಯೆ ಯಾಗುತ್ತಿದೆ. ಬೀದಿ ದೀಪಗಳು ಕಾರ್ಯನಿರ್ವಹಿಸುತ್ತಿಲ್ಲವೆಂದು ಬಿಜೆಪಿ ಮುಖಂಡ ಧನಂಜಯ ಹಾಗೂ ರೈತ ಸಂಘದ ಜಿಲ್ಲಾ ಸಂಚಾಲಕ ಕನಕಂಚೇನಹಳ್ಳಿ ಪ್ರಸನ್ನಕುಮಾರ್ ಹಾಗೂ ಗ್ರಾಮಸ್ಥರು ಹಾರನಹಳ್ಳಿ ಚೆಸ್ಕಾಂ ಕಚೇರಿ ಮಂದೆ ಜಮಾಯಿಸಿ ಪ್ರತಿಭಟನೆಗೆ ಮುಂದಾದರು.
ಬಿಜೆಪಿ ಮುಖಂಡ ಧನಂಜಯ ಮಾತನಾಡಿ, ಸಂಜೆ ಸಮಯದಲ್ಲಿ ಕಂಡೆನ್ಸಸರ್ ಹಾಕಿ ಕುಡಿಯುವ ನೀರು ಕೊಡಲಾಗುತ್ತಿತ್ತು. ಬರಕಾಲದಲ್ಲಿ ಒಪನ್ ಡೇಲ್ಟಾ ವಿದ್ಯುತ್ ನೀಡದೆ ಸಿಂಗಲ್ ಫೇಸ್ ವಿದ್ಯುತ್ ಕೋಡಬೇಕೇಂದು ಒತ್ತಾಯಿಸಿದರು.
ರೈತ ಸಂಘದ ಜಿಲ್ಲಾ ಸಂಚಾಲಕ ಕನಕಂಚೇನಹಳ್ಳಿ ಪ್ರಸನ್ನಕುಮಾರ್ ಮಾತನಾಡಿ, ಸಂಜೆ 6ರಿಂದ 10 ಗಂಟೆಯವರೆಗೆ 2 ಫೇಸ್ ವಿದ್ಯುತ್ ನೀಡಬೇಕಾದ ನಿಗಮದ ಅಧಿಕಾರಿಗಳು ಜ್ಯೂಸ್ ಲೈನ್(ಓಪನ್ ಡೆಲ್ಟಾ) ನೀಡಿ ಅವ್ಯವಸ್ಥೆ ಸೃಷ್ಟಿಸುತ್ತಿದ್ದಾರೆ. ಅಗತ್ಯವಿರುವ ಸಂದರ್ಭದಲ್ಲಿ ಗುಣಮಟ್ಟದ ವಿದ್ಯುತ್ ದೊರೆಯುದಿರುವುದರಿಂದ ಹಿಟ್ಟಿನ ಗಿರಣಿಗಳು, ಕುಡಿಯುವ ನೀರಿನ ಕೊಳವೆಬಾವಿಗಳು ಸಮರ್ಪಕ ರೀತಿಯಲ್ಲಿ ಕಾರ್ಯ ನಿರ್ವಹಿಸಲು ತೊಂದರೆಯಾಗುತ್ತಿದೆ ಎಂದರು. ಅರಸೀಕೆರೆ ಚೆಸ್ಕಾಂ ಅಧಿಕಾರಿ ದೇವರಾಜ್ ದೂರವಾಣಿಯಲ್ಲಿ ಪ್ರತಿಭಟನಾಕಾರರೊಂದಿಗೆ ಮಾತನಾಡಿ, ಸರ್ಕಾರ ಆದೇಶದಂತೆ  ಕಾರ್ಯ ನಿರ್ವಹಿಸುತ್ತಿದ್ದು, ಕೆಲವು ಟಿ.ಸಿಗಳಲ್ಲಿ ಲೈನ್ ಬದಲಾವಣೆ ಮಾಡಿಸಲಾಗುತ್ತದೆ. ಹೈವೋಲ್ಟೇಜ್ ಹಾಗೂ ಸಂಜೆ ವಿದ್ಯುತ್ ಕಡಿತವನ್ನು ನಿಲ್ಲಿಸಲಾಗುತ್ತದೆ ಎಂದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement