ಹೇಮಾವತಿ ಜಲಾಶಯಕ್ಕೆ 10 ಸಾವಿರ ಕ್ಯುಸೆಕ್ ನೀರು
ಹಾಸನ: ಜಿಲ್ಲೆಯಲ್ಲಿ ಕೊಂಚ ಇಳಿಮುಖಗೊಂಡಿದ್ದ ಮಳೆ ಬುಧವಾರ ಬಿರುಸುಗೊಂಡಿದೆ. ಪರಿಣಾಮ ಹೇಮಾವತಿ ಜಲಾಶಯಕ್ಕೆ ಹೆಚ್ಚಿನ ನೀರು ಹರಿದು ಬರುತ್ತಿದೆ. ಈಗ ಜಲಾಶಯಕ್ಕೆ 10 ಸಾವಿರ ಕ್ಯುಸೆಕ್ ಹರಿದು ಬರುತ್ತಿದೆ. ಮಲೆನಾಡು ಪ್ರದೇಶಗಳಾದ ಸಕಲೇಶಪುರ, ಬೇಲೂರು, ಆಲೂರು ಕಡೆ ಮಳೆ ಚುರುಕುಗೊಂಡಿದೆ. ಪಟ್ಟಣ ಪ್ರದೇಶಗಳಲ್ಲಿ ಸಂಚಾರ ಅಸ್ತವ್ಯಸ್ತಗೊಂಡಿದೆ. ಗ್ರಾಮೀಣ ಭಾಗದಲ್ಲಿ ಅನ್ನದಾತರು ಮಳೆಯಲ್ಲೇ ಕೃಷಿ ಕಾಯಕದಲ್ಲಿ ನಿರತರಾಗಿದ್ದಾರೆ.
ಜಲಾಶಯಗಳ ನೀರಿನ ಮಟ್ಟ ಇಂತಿದೆ.
ಹೇಮಾವತಿ ಜಲಾಶಯ: ಹೇಮಾವತಿ ಜಲಾಶಯದ ಗರಿಷ್ಠ ಮಟ್ಟ 2922 ಅಡಿಗಳು, ಇಂದಿನ ನೀರಿನ ಮಟ್ಟ 2883.70ಅಡಿ, ಒಳಹರಿವು 10000 ಕ್ಯುಸೆಕ್ ಹೊರಹರಿವು 600 ಕ್ಯೂಸೆಕ್.
ವಾಟೆಹೊಳೆ ಜಲಾಶಯ: ವಾಟೆಹೊಳೆ ಜಲಾಶಯದ ಇಂದಿನ ಮಟ್ಟ 3135.49 ಅಡಿ. ಒಳ ಹರಿವು 144 ಕ್ಯುಸೆಕ್, ಹೊರ ಹರಿವು ಇಲ್ಲ.
ಯಗಚಿ ಜಲಾಶಯ: ಯಗಚಿ ಜಲಾಶಯದ ನೀರಿನ ಮಟ್ಟ 3150.388 ಅಡಿ, ಒಳಹರಿವು 100 ಕ್ಯುಸೆಕ್, ಹೊರ ಹರಿವು ನಾಲೆಗೆ 50 ಕ್ಯುಸೆಕ್.
ಜಿಲ್ಲೆಯಲ್ಲಿ ಜು.16ರಂದು ಬಿದ್ದ ಮಳೆಯ ವಿವರ: ಆಲೂರು-9.1ಮಿ.ಮೀ. ಕೆಂಚಮ್ಮನಹೊಸಕೋಟೆ-35.6, ಕುಂದೂರು-14., ಪಾಳ್ಯ-26.2, ಅರಕಲಗೂಡು-9.2, ಮಲ್ಲಿಪಟ್ಟಣ-19, ರಾಮನಾಥಪುರ-6, ಬಸವಾಪಟ್ಟಣ-3.3, ಕೊಣನೂರು-4.5, ದೊಡ್ಡಮಗ್ಗೆ-6.2, ದೊಡ್ಡಬೆಮ್ಮತ್ತಿ-9.2, ಗಂಡಸಿ-8, ಯಳವಾರೆ 1.0, ಜಾವಗಲ್-2, ಬೇಲೂರು-26.2, ಅರೇಹಳ್ಳಿ-45, ಬಿಕ್ಕೋಡು- 29.1, ಹಳೇಬೀಡು-4.4, ಹಗರೆ-21.8, ಗೆಂಡೆಹಳ್ಳಿ-40.1, ಚನ್ನರಾಯಪಟ್ಟಣ-1, ಉದಯಪುರ-0.6, ಬಾಗೂರು-1.3, ಶ್ರವಣಬೆಳಗೊಳ-1.2, ಹಾಸನ-2.6, ಕಟ್ಟಾಯ-7, ಶಾಂತಿಗ್ರಾಮ-8.2, ದುದ್ದ4, ಗೊರೂರು 6, ಹೊಳೆನರಸೀಪುರ-3.2, ಹಳ್ಳಿಮೈಸೂರು 0.8, ಹಳೇಕೋಟೆ-3.4, ಸಕಲೇಶಪುರ-52.8, ಬಾಳ್ಳುಪೇಟೆ 36, ಯಸಳೂರು-78, ಶುಕ್ರವಾರಸಂತೆ-99.4, ಮಾರನಹಳ್ಳಿ-76, ಹೊಸೂರು 49.6, ಬೆಳಗೋಡು-24.8, ಹಾನಬಾಳು 59.6 ಮತ್ತು ಹೆತ್ತೂರು 104.8 ಮಿಮೀ. ಮಳೆಯಾಗಿದೆ.