ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಅವೈಜ್ಞಾನಿಕ ಬೈಪಾಸ್ ರಸ್ತೆ ಬದಲಿಗೆ ಪ್ರತಿಭಟನೆ ಇಂದು

Vishwanath S
Updated On : 18 Jul 2014, 12:24 pm

ಹಾಸನ: ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ ಯೋಜನೆಯಡಿ ಸಕಲೇಶಪುರ ತಾಲೂಕು ಬಾಳ್ಳುಪೇಟೆಯ ಬಳಿ ನಿರ್ಮಿಸುತ್ತಿರುವ ಅವೈಜ್ಞಾನಿಕ ಬೈಪಾಸ್ ರಸ್ತೆ ಕೂಡಲೇ ಬದಲಿಸುವಂತೆ ಆಗ್ರಹಿಸಿ ಶುಕ್ರವಾರ ರಾಷ್ಟ್ರೀಯ ಹೆದ್ದಾರಿಗಳ ಪ್ರಾಧಿಕಾರ ವಿಶೇಷ ಭೂ ಸ್ವಾಧೀನಾಧಿಕಾರಿ ಕಚೇರಿ ಎದುರು ಸಾಂಕೇತಿಕ ಪ್ರತಿಭಟನೆ ಮಾಡುವುದಾಗಿ ಬಾಳ್ಳುಪೇಟೆ ನಾಗರಿಕ ಹೋರಾಟ ಸಮಿತಿ ಅಧ್ಯಕ್ಷ ಬಾಳ್ಳು ಗೋಪಾಲ್ ತಿಳಿಸಿದ್ದಾರೆ.
ಬಾಳ್ಳುಪೇಟೆ ಬಳಿ ಬೈಪಾಸ್ ರಸ್ತೆ ನಿರ್ಮಿಸಲು ಇಲ್ಲಿನ ಜನರ ಜೊತೆ ಚರ್ಚೆ ಮಾಡದೆ ಅಧಿಕಾರಿಗಳು ನಾಲ್ಕು ಗೋಡೆಗಳ ಮಧ್ಯೆ ಚರ್ಚೆ ಮಾಡಿ ತೀರ್ಮಾನಿಸಲಾಗಿದೆ. ರಾಜಕೀಯದ ಒತ್ತಡ ಹಾಗೂ ಕೆಲ ಶ್ರೀಮಂತರನ್ನು ಉಳಿಸಲು ಇಂತಹ ಬೇಡವಾದ ಕೆಲಸಕ್ಕೆ ಕೈ ಹಾಕಲಾಗಿದೆ ಎಂದು ಗುರುವಾರ ಸುದ್ದಿಗಾರರೊಂದಿಗೆ ಆಕ್ರೋಶ ವ್ಯಕ್ತಪಡಿಸಿದರು.
ಈಗಾಗಲೇ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ಮಾಡಲಾಗಿದೆ. ಅಂದಿನ ಕೇಂದ್ರ ಸರ್ಕಾರದ ರಸ್ತೆ ಸಾರಿಗೆ ಸಚಿವ ಆಸ್ಕರ್ ಫೆರ್ನಾಂಡಿಸ್ ಭೇಟಿ ಮಾಡಿ ಮನವಿ ಮಾಡಲಾಗಿತ್ತು. ಇಡಿ ಯೋಜನೆಯ ಅಲೈನ್‌ಮೆಂಟನ್ನು  ಫೀಡ್‌ಬ್ಯಾಕ್ ಇನ್‌ಫ್ರಾ ಎಂಬ ಖಾಸಗಿ ಕಂಪೆನಿ ತಯಾರಿಸಿದ್ದು, ಸ್ಥಳೀಯರನ್ನು ವಿಶ್ವಾಸಕ್ಕೆ ಪಡೆಯದೆ ಅಲೈನ್ ಮೆಂಟ್ ರೂಪಿಸಲಾಗಿದೆ. ಬಾಳ್ಳುಪೇಟೆಗೆ ಬೈಪಾಸ್ ನಿರ್ಮಿಸಲು 5 ಪರ್ಯಾಯ ಪರಿಶೀಲಿಸಿರುವುದಾಗಿ ಎನ್‌ಎಚ್‌ಎಐ, ಆರ್‌ಟಿಐ ಅರ್ಜಿಗೆ ಉತ್ತರ ನೀಡಿದೆ.
ಪರ್ಯಾಯ ಒಂದನ್ನೇ ಫೀಡ್ ಬ್ಯಾಕ್ ಇನ್ ಫ್ರಾ ಕಂಪೆನಿ ಆಯ್ಕೆಗೆ ಶಿಫಾರಸ್ಸು ಮಾಡಿದ್ದು, ಅದನ್ನೆ ಎನ್‌ಎಚ್‌ಎಐ ಒಪ್ಪಿಕೊಂಡಿದೆ. ಆದರೆ ಗ್ರಾಮದ ನಡುವಿನಿಂದ ನಿರ್ಮಾಣವಾಗುವ ಏಕೈಕ ಬೈಪಾಸ್ ಬಾಳ್ಳುಪೇಟೆಯಲ್ಲಿಯೆ ನಿರ್ಮಾಣವಾಗಲಿದೆ ಎಂದರು.
ಈ ಅಲೈನ್ ಮೆಂಟ್ ಬದಲಿಸಿ ಸಂಪೂರ್ಣವಾಗಿ ಗ್ರಾಮದ ಹೊರ ಭಾಗದಿಂದ ಬೈಪಾಸ್ ನಿರ್ಮಿಸಬೇಕು ಇಲ್ಲವೇ, ಈಗಿರುವ ರಸ್ತೆಯನ್ನೇ ಅಗಲೀಕರಣ ಮಾಡಬೇಕು. ಇಲ್ಲದಿದ್ದರೆ ಗ್ರಾಮಸ್ಥರು ಎಲ್ಲಾ ರೀತಿಯ ಹೋರಾಟಕ್ಕೂ ಮುಂದಾಗಬೇಕಾಗುತ್ತದೆ. ಮುಂದಾಗುವ ಕಾನೂನು-ಸುವ್ಯವಸ್ಥೆ ಸಮಸ್ಯೆಗೆ ಎನ್‌ಎಚ್‌ಎಐ ಅಧಿಕಾರಿಗಳೆ ಹೊಣೆಗಾರರಾಗಬೇಕಾಗುತ್ತದೆ ಎಂದು ಎಚ್ಚರಿಸಿದರು. ಗೋಷ್ಠಿಯಲ್ಲಿ ಕೆ.ಎಲ್.ದೇವರಾಜ್, ಎಚ್.ಕೆ. ಲೋಕೇಶ್, ಬಿ.ಎಸ್. ಹಾಲಪ್ಪ, ಎ.ಆರ್. ಕೃಷ್ಣಮೂರ್ತಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement