ಹೆತ್ತೂರಿನಲ್ಲಿ ಒಂದೇ ದಿನ 104.4 ಮಿ.ಮೀ. ಮಳೆ
ಹಾಸನ: ಜಿಲ್ಲೆಯಲ್ಲಿ ಮಳೆ ಮುಂದುವರಿದಿದ್ದು, ಹೇಮಾವತಿ ಜಲಾಶಯಕ್ಕೆ ಹೆಚ್ಚಿನ ನೀರು ಹರಿದು ಬರುತ್ತಿದೆ. ಗುರುವಾರ ಜಲಾಶಯಕ್ಕೆ 14 ಸಾವಿರ ಕ್ಯುಸೆಕ್ ನೀರು ಹರಿದು ಬರುತ್ತಿತ್ತು. ಜಲಾಶಯದಿಂದ 2864 ಕ್ಯುಸೆಕ್ ನೀರು ಬಿಡಲಾಗುತ್ತಿದೆ. ಇಂದಿನ ಮಟ್ಟ 2886, 30 ಅಡಿಗಳು. ಜಲಾಶಯದ ಗರಿಷ್ಠ ಮಟ್ಟ 2922. ಅಡಿಗಳು, ಸಕಲೇಶಪುರ ತಾಲೂಕು ಹೆತ್ತೂರು ಹೋಬಳಿಯಲ್ಲಿ ಗುರುವಾರ 104, 04 ಮೀಟರ್ ಮಳೆಯಾಗಿದೆ.
ವಾಟೆಹೊಳೆ ಜಲಾಶಯದ ನೀರಿನ ಮಟ್ಟ
ವಾಟೆಹೊಳೆ ಜಲಾಶಯದ ಇಂದಿನ ಮಟ್ಟ 3136.81 ಅಡಿ. ಒಳ ಹರಿವು 288 ಕ್ಯುಸೆಕ್, ಹೊರ ಹರಿವು ಇಲ್ಲ.
ಯಗಚಿ ಜಲಾಶಯದ ನೀರಿನ ಮಟ್ಟ
ಯಗಚಿ ಜಲಾಶಯದ ನೀರಿನ ಮಟ್ಟ 3150.552 ಅಡಿ. ಒಳ ಹರಿವು 400 ಕ್ಯುಸೆಕ್, ಹೊರ ಹರಿವು ನಾಲೆಗೆ 50 ಕ್ಯುಸೆಕ್.
ಜಿಲ್ಲೆಯ ಮಳೆ ವಿವರ (ಮಿಮೀ.ಗಳಲ್ಲಿ)
ಜಿಲ್ಲೆಯಲ್ಲಿ ಜುಲೈ 17ರಂದು ಬಿದ್ದ ಮಳೆಯ ವಿವರ ಇಂತಿದೆ.
ಆಲೂರು-19.32 ಮಿ.ಮೀ. ಕೆಂಚಮ್ಮನ ಹೊಸಕೋಟೆ-15.7, ಕುಂದೂರು-12.6., ಪಾಳ್ಯ-36.4, ಅರಕಲಗೂಡು-8.1, ಮಲ್ಲಿಪಟ್ಟಣ-23, ರಾಮನಾಥಪುರ-2.4, ಕೊಣನೂರು-6.8, ದೊಡ್ಡಮಗ್ಗೆ-2.2, ದೊಡ್ಡಬೆಮ್ಮತ್ತಿ-3.2, ಗಂಡಸಿ-2.8, ಯಳವಾರೆ 1.4, ಬೇಲೂರು-28.2, ಅರೇಹಳ್ಳಿ-43.4, ಬಿಕ್ಕೋಡು- 31.4, ಹಳೇಬೀಡು-10, ಹಗರೆ-12.6, ಗೆಂಡೆಹಳ್ಳಿ-47.1, ಚನ್ನರಾಯಪಟ್ಟಣ-1.2, ಉದಯಪುರ-1.6, ಬಾಗೂರು-2.2, ಶ್ರವಣಬೆಳಗೊಳ-0.8, ಹಾಸನ-9.2, ಕಟ್ಟಾಯ-6.1, ಶಾಂತಿಗ್ರಾಮ-15, ದುದ್ದ-6.2, ಗೊರೂರು 6, ಹೊಳೆನರಸೀಪುರ-0.3, ಹಳ್ಳಿಮೈಸೂರು 0.4, ಹಳೇಕೋಟೆ-3.5, ಸಕಲೇಶಪುರ-52.2, ಮಾರನಹಳ್ಳಿ-102.2, ಬಾಳ್ಳುಪೇಟೆ 30, ಯಸಳೂರು-96, ಶುಕ್ರವಾರಸಂತೆ-54.6, ಹೊಸೂರು 24.4, ಬೆಳಗೋಡು-62.2, ಹಾನಬಾಳು 76.2 ಮತ್ತು ಹೆತ್ತೂರು 103.4ಮಿಮೀ. ಮಳೆಯಾಗಿದೆ.