ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಅರ್ಹತೆ ಇದ್ದಲ್ಲಿ ಅವಕಾಶಕ್ಕೆ ಕೊರತೆ ಇಲ್ಲ

Mainashree
Updated On : 19 Jul 2014, 10:09 am

ಹಾಸನ: ಸರ್ಕಾರಿ ಕೆಲಸಗಳಿಗೆ ಬರುವವರು ಜನರಿಗೆ ಸೇವೆ ಮಾಡುವ ಮನೋಭಾವ ಹೊಂದಿರಬೇಕು. ಸಂಬಳದ ಮೊತ್ತ ನೋಡಿಕೊಂಡು ಹುದ್ದೆ ಆಯ್ದುಕೊಳ್ಳಬಾರದು. ವೈಯಕ್ತಿಕತೆಗೆ ಮತ್ತು ಪ್ರತಿಭೆಗೆ ಎಲ್ಲಾ ಕಡೆಯೂ ಬೆಲೆ ಇದೆ. ಅರ್ಹತೆ ಇದ್ದವರಿಗೆ ಅವಕಾಶಗಳಿಗೆ ಕೊರತೆ ಇಲ್ಲ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ದ್ಯಾಮಪ್ಪ ಚನ್ನಣ್ಣನವರ ಹೇಳಿದ್ದಾರೆ.
 ನಗರದ ಬಿಜಿಎಸ್ ಸ್ಟಡಿ ಸೆಂಟರ್‌ನಲ್ಲಿ ನಡೆಯುತ್ತಿರುವ ಪೊಲೀಸ್ ಹುದ್ದೆ ಆಯ್ಕೆ ತರಬೇತಿ ಶಿಬಿರದಲ್ಲಿ ಮಾತನಾಡಿದ ಅವರು, ಶಿಕ್ಷಣದಿಂದ ಅರ್ಹತಾ ಪ್ರಮಾಣಪತ್ರ ದೊರೆಯುತ್ತದೆ. ಆದರೆ ನಿಜವಾದ ಯೋಗ್ಯತೆಗೆ ಯಾವುದೇ ಪ್ರಮಾಣಪತ್ರ ಇರುವುದಿಲ್ಲ. ಅದನ್ನು ಕಷ್ಟಪಟ್ಟು ಬೆಳೆಸಿಕೊಳ್ಳಬೇಕು. ಆತ್ಮವಿಶ್ವಾಸವೇ ಯಶಸ್ಸಿನ ರಹಸ್ಯ. ಆದ್ದರಿಂದ ಸದಾ ಸಕಾರಾತ್ಮಕ ವಿಚಾರಗಳನ್ನು ಮನಸ್ಸಿಗೆ ತುಂಬಬೇಕು ಎಂದರು.
ಮಾನವೀಯ ಮೌಲ್ಯ ಬೆಳೆಸಿಕೊಳ್ಳಿ: ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕಾಧಿಕಾರಿ ವಿನೋದ್‌ಚಂದ್ರ ಮಾತನಾಡಿ, ಯುವಜನರು ಸಮಾಜದ ಆಸ್ತಿಯಾಗಿ ಬೆಳೆಯಬೇಕೇ ಹೊರತು ಕಂಟಕರಾಗಬಾರದು. ಚಿಕ್ಕ ವಯಸ್ಸಿನಲ್ಲಿಯೇ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು ಎಂದರು.  ಶ್ರೀ ಆದಿಚುಂಚನಗಿರಿ ಶಿಕ್ಷಣ ಸಂಸ್ಥೆ ಶಿಕ್ಷಣಾಧಿಕಾರಿ ಎಚ್.ಬಿ. ಚಂದ್ರಶೇಖರ್, ಶ್ರೀ ಆದಿಚುಂಚನಗಿರಿ ಹಾಸನ ಶಾಖಾ ಮಠದ ವ್ಯವಸ್ಥಾಪಕ ಎಚ್.ಕೆ. ಚಂದ್ರಶೇಖರ್ ಉಪಸ್ಥಿತರಿದ್ದರು.  ಬಿಜಿಎಸ್ ಸ್ಟಡಿ ಸೆಂಟರ್ ನಿರ್ದೇಶಕ ಡಾ. ಎಚ್.ಕೆ. ಕುಶಾಲಪ್ಪ ಸ್ವಾಗತಿಸಿದರು. ವ್ಯವಸ್ಥಾಪಕ ಮಂಜೇಗೌಡ ವಂದಿಸಿದರು ಮತ್ತು ಶಿಕ್ಷಕ ಹರೀಶ್ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement