ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ನೀರು ಕಾಮಗಾರಿ ವಿಳಂಬಕ್ಕೆ ಆಕ್ರೋಶ

Mainashree
Updated On : 19 Jul 2014, 10:10 am

ಜಾವಗಲ್: ಹೋಬಳಿಯ ನೇರ್ಲಿಗೆಯಲ್ಲಿ ಕರಗಡ ಕುಡಿಯುವ ನೀರಿನ ಕಾಮಗಾರಿ ವಿಳಂಬ ವಿರೋಧಿಸಿ  ಕರೆ ನೀಡಿದ್ದ  ನೇರ್ಲಿಗೆ ಸ್ವಯಂಪ್ರೇರಿತ ಬಂದ್ ಯಶಸ್ವಿಯಾಯಿತು.
 ಬಂದ್ ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ಕೋಳಗುಂದ ಕೇದಿಗೆ ಮಠದ ಜಯಚಂದ್ರಶೇಖರ ಸ್ವಾಮೀಜಿ ಮಾತನಾಡಿ, ಕುಡಿಯುವ ನೀರಿಗಾಗಿ  ಹೋಬಳಿಯ ಎಲ್ಲಾ ಕೆರೆಕಟ್ಟೆಗಳಿಗೂ ನೀರು ತುಂಬಿಸುವ ಅನಿವಾರ್ಯತೆಯಿದೆ ಎಂದು ಪ್ರತಿಪಾದಿಸಿದರು.
ನೇರ್ಲಿಗೆಯಲ್ಲಿ ಕರಗಡ ಕುಡಿಯುವ ನೀರಿನ ಕಾಮಗಾರಿ ವಿಳಂಬವಾಗುತ್ತಿರುವುದನ್ನು ವಿರೋಧಿಸಿ ನೇರ್ಲಿಗೆ ಸ್ವಯಂಪ್ರೇರಿತ ಬಂದ್ ಕಾರ್ಯಕ್ರಮದ ಸಾನಿಧ್ಯವಹಿಸಿ ಮಾತನಾಡಿ, 10-15 ವರ್ಷಗಳಿಂದ ಹೋಬಳಿಯಲ್ಲಿ ಮಳೆಯ ಅಭಾವ ಉಂಟಾಗಿ ಜನಜಾನುವಾರುಗಳ ಪರಿಸ್ಥಿತಿ ಡೋಲಾಯಮಾನವಾಗಿದ್ದು ಜನ ಗುಳೆ ಹೋಗುವ ಪರಿಸ್ಥಿತಿ ತಲೆದೋರಿದೆ ಎಂದರು.
ಜಿಲ್ಲೆಯಲ್ಲಿ 3 ಜಲಾಶಯಗಳಿದ್ದು ಬೇಲೂರು, ಅರಸೀಕೆರೆ ತಾಲೂಕಿನ ಜನತೆ ಕುಡಿಯುವ ನೀರು ಮತ್ತು ನೀರಾವರಿ ಸೌಲಭ್ಯದಿಂದ ವಂಚಿತರಾಗಿದ್ದಾರೆ. ಹೆಚ್.ಡಿ. ದೇವೇಗೌಡ ನೀರಾವರಿ ಸಚಿವರಾಗಿ, ಮುಖ್ಯಮಂತ್ರಿಯಾಗಿ, ಲೋಕಸಭಾ ಸದಸ್ಯರಾಗಿ, ಪ್ರಧಾನ ಮಂತ್ರಿಗಳಾಗಿ ಅಧಿಕಾರ ಅನುಭವಿಸಿದ್ದರೂ ಜಾವಗಲ್ ಹೋಬಳಿಗೆ ಏನು ಮಾಡಿದ್ದಾರೆಂದು ಪ್ರಶ್ನಿಸಿದರು. ಜಾವಗಲ್ ಹೋಬಳಿಯ ಜನತೆ ಏನು ಪಾಪ ವಾಡಿದ್ದೀವಿ  ಎಂದರು.
 ಶಾಸಕ ವೈ.ಎನ್. ರುದ್ರೇಶಗೌಡ ಕೋಳಗುಂದಕ್ಕೆ 8-10 ತಿಂಗಳ ಹಿಂದೆ ಜಾನುವಾರುಗಳಿಗೆ ಮೇವು ನೀಡಲು ಬಂದವರು ಇದುವರೆಗೂ ಪುನಃ ಬಂದಿಲ್ಲ.  ಆಡಳಿತ ಪಕ್ಷದ ಶಾಸಕರಾಗಿ ಹೋಬಳಿಯ ಕುಡಿಯುವ ನೀರಿನ ಸಮಸ್ಯೆ, ನೀರಾವರಿ ಸೌಲಭ್ಯದ ಬಗ್ಗೆ ಸರ್ಕಾರದ ಮಟ್ಟದಲ್ಲಿ ಕೆಲಸ ಮಾಡಿಸಲು ವಿಫಲರಾಗಿದ್ದಾರೆಂದರು. ಜಾವಗಲ್ ಜಿಲ್ಲಾ ಪಂಚಾಯಿತಿ ಸದಸ್ಯ ಲಕ್ಷ್ಮಣ್ 5-6 ತಿಂಗಳಿಂದ ಕ್ಷೇತ್ರಕ್ಕೆ ಬರದೆ ಕಾಣೆಯಾಗಿದ್ದಾರೆಂದರು.
ಮಾರಗೋಡನಹಳ್ಳಿ ಮಠದ ಬಸವಾನಂದ ಸ್ವಾಮೀಜಿ ಮಾತನಾಡಿ,  ತೆಂಗಿನ ಅಡಿಕೆ ತೋಟಗಳು ಒಣಗಿ ಹೋಗಿದ್ದು ಕೆರೆ ಕಟ್ಟೆಗಳು ಬತ್ತಿ ಹೋಗಿ ಅಂತರ್ಜಲ ಕುಸಿದಿದೆ ಆದದ್ದರಿಂದ ಹೋಬಳಿಯ ರೈತರು ಸಂಘಟಿತರಾಗಿ ಹೋರಾಟ ಮಾಡಿ ನೀರಾವರಿ ಸೌಲಭ್ಯ ಪಡೆದುಕೊಳ್ಳುವ ಅನಿವಾರ್ಯ ವಿದೆ ಎಂದರು.
ಕರಗಡ ಯೋಜನೆ ಹೋರಾಟ ಸಮಿತಿ ರೈತಮುಖಂಡರಾದ ಗುರುಶಾಂತಪ್ಪ, ರವೀಶ್ ರೆಣುಕಾರಾಧ್ಯ, ಅಮ್‌ಜದ್ ಹಳೇಬೀಡು ಶಿವಪ್ಪ ಗ್ರಾ ಪಂ ಅಧ್ಯಕ್ಷ ಜಗದೀಶ್, ಮಾಜಿ ತಾ.ಪಂ ಸದಸ್ಯೆ ಸೋಮಶೇಖರ್, ಧನಂಜಯ , ಎನ್. ಎಮ್ಮುಲ್ಲೇಗೌಡ,  ಎನ್.ಆರ್. ಧನಂಜಯ, ಕರವೇ ದಯಾನಂದ, ರೇಣುಕಾ ಪ್ರಸಾದ್, ರೈತ ಮುಖಂಡ ಮಂಜುನಾಥ್, ಶ್ರೀಕಂಠಪ್ಪ, ರವಿ ಮಾತನಾಡಿರು. ಶಾಲೆಗಳು ಅಂಗಡಿಗಳು ಮುಚ್ಚಿ ಬಂಗೆ ಬೆಂಬಲ ನೀಡಿದವು. ಗ್ರಾಪಂ ವ್ಯಾಪ್ತಿಯ ಎಲ್ಲಾ ಹಳ್ಳಿಗಳ ಗ್ರಾಮಸ್ಥರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement