ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಕೃಷಿಯಲ್ಲಿ ತಂತ್ರಜ್ಞಾನ ಬಳಸಿ ಲಾಭ ಗಳಿಸಿ

Vishwanath S
Updated On : 22 Jul 2014, 12:46 pm

ಕ.ಪ್ರ.ವಾರ್ತೆ ,  ಹಾಸನ ,  ಜು.21
ಭಾರತ ಕೃಷಿ ಪ್ರಧಾನ ರಾಷ್ಟ್ರವಾಗಿದ್ದು ಕೃಷಿ ಕ್ಷೆತ್ರದಲ್ಲಿ ರೈತರು ಸುಧಾರಿತ ಬೆಳೆಗಳನ್ನು ವೈಜ್ಞಾನಿಕವಾಗಿ ಬೆಳೆದಾಗ ಮಾತ್ರ ಆರ್ಥಿಕವಾಗಿ ಸದೃಢರಾಗಿ ತಲೆದೋರುತ್ತಿರುವ ಅಹಾರ ಸಮಸ್ಯೆಯನ್ನು ನೀಗಿಸಲು ಸಾಧ್ಯವಾಗುತ್ತದೆ ಆಗ ಮಾತ್ರ ರೈತರ ಬದುಕು ಹಸನಗೊಳ್ಳುತ್ತದೆ ಎಂದು ಜಿಲ್ಲಾ ಯೋಜನಾ ನಿರ್ದೇಶಕಿ ದಯಶೀಲಾ  ಹೇಳಿದರು.
ತಾಲೂಕಿನ ಸಂಕೇನಹಳ್ಳಿಯ ಕೃಷಿಕ ಗಣೇಶಗೌಡರ ಜಮಿನಿನಲ್ಲಿ ಶ್ರೀ ಕ್ಷೆತ್ರ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆ ವತಿಯಿಂದ ಹಮ್ಮಿಕೊಂಡಿದ್ದ ಬತ್ತದ ಬೇಸಾಯದಲ್ಲಿ ಶ್ರೀ ಪದ್ಧತಿಯ ಅಳವಡಿಕೆ ಕುರಿತ ಪ್ರಾತ್ಯಕ್ಷಿಕೆಯಲ್ಲಿ ಮಾತನಾಡಿ, ರೈತರು ಯಾವುದೆ ಒಂದು ಬೆಳೆಯನ್ನು ಅವಲಂಭಿಸದೆ ಹೈನುಗಾರಿಕೆಯಂತ ಉಪಕಸಬುಗಳನ್ನು ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕೃಷಿ ಪದ್ಧತಿ: ಕೃಷಿ ಯೋಜನಾಧಿಕಾರಿ ಮಧು ಕುಮಾರ್ ಜೈನ್ ಮಾತನಾಡಿ, ರೈತರಿಗೆ ಬೆಳೆಯನ್ನು ಬೆಳೆಯುವ ರೀತಿ ಹಾಗೂ ಕೃಷಿಯಲ್ಲಿ ವೆಚ್ಚವನ್ನು ತಗ್ಗಿಸುವುದು, ಭೂಮಿಯನ್ನು ಫಲವತ್ತತೆಯಲ್ಲಿರಿಸಿಕೊಂಡು ಅಧಿಕ ಇಳುವರಿ ಪಡೆಯುವಂತ ಮಾರ್ಗೋಪಾಯಗಳನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ಪ್ರಯತ್ನಿಸಬೇಕಿದೆ ಎಂದರು.
ಕಾರ್ಯಕ್ರಮದಲ್ಲಿ ತಾಲೂಕು ಯೋಜನಾಧಿಕಾರಿ ಲೀಲಾವತಿ, ಗ್ರಾಮದ ಅಧ್ಯಕ್ಷರಾದ ದೇವರಾಜು, ಗಣೇಶ್‌ಗೌಡ, ತಾಲೂಕಿನ ಯೋಜನೆ ಸೇವಾ ಪ್ರತಿನಿಧಿಗಳು, ಮೆಲ್ವಿಚಾರಕರು, ತಾಂತ್ರಿಕ ಸಿಬ್ಬಂದಿ, ಮತ್ತಿರರು ಹಾಜರಿದ್ದರು. ಸೇವಾ ಪ್ರತಿನಿಧಿಗಳಾದ ಡಿ.ಎಸ್.ವಿಜಯಲಕ್ಷ್ಮಿ, ಕಮಲಾಕ್ಷಿ, ಮಾನಸ, ಮಮತ ರೈತಗಿತೆಯನ್ನು ಹಾಡಿದರು.  ಕೃಷಿ ಅಧಿಕಾರಿ ಸತೀಶ್.ಡಿ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement