ಜನಸಂಖ್ಯೆ ನಿಯಂತ್ರಣ ಅಗತ್ಯ
ಬೇಲೂರು: ದೇಶದಲ್ಲಿ ಶಿಕ್ಷಣದ ಕೊರತೆಯಿಂದ ಜನಸಂಖ್ಯೆ ಹೆಚ್ಚುತ್ತಿದ್ದು, ದೇಶ ಪ್ರಗತಿ ಹೊಂದಲು ಜನ ಸಂಖ್ಯೆ ನಿಯಂತ್ರಣ ಅಗತ್ಯ ಎಂದು ಶಾಸಕ ವೈ.ಎನ್. ರುದ್ರೇಶಗೌಡ ಅಭಿಪ್ರಾಯಪಟ್ಟರು.
ತಾಲೂಕು ಆರೋಗ್ಯ ಕೇಂದ್ರ, ಹಾಗೂ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆಶ್ರಯದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ವಿಶ್ವ ಜನ ಸಂಖ್ಯಾ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.
ಜನಸಂಖ್ಯೆ ನಿಯಂತ್ರಿಸಿ: ದೇಶದಲ್ಲಿ ಭೂಮಿ ಕಡಿಮೆ ಇದೆ. ಅದರೆ ಜನ ಸಂಖ್ಯೆ ಹೆಚ್ಚಿದ್ದು ಇದೇ ರೀತಿ ಮುಂದುವರಿದರೆ ದೇಶದಲ್ಲಿ ಆಹಾರ, ನೀರು ಇನ್ನಿತರೆ ಅಗತ್ಯ ವಸ್ತುಗಳು ಸಿಗದೆ ಜನರು ತತ್ತರಿಸುವಂತಾಗುತ್ತದೆ. ಜನಸಂಖ್ಯಾ ನಿಯಂತ್ರಣಕ್ಕೆ ಶಿಕ್ಷಣವೇ ಸರಿಯಾದ ಮಾರ್ಗ ಎಂದರು.
ತಾಪಂ ಅಧ್ಯಕ್ಷ ಪರ್ವತಯ್ಯ ಮಾತನಾಡಿ ಸರ್ಕಾರ ಜನ ಸಂಖ್ಯಾ ನಿಯಂತ್ರಣಕ್ಕೆ ಹಲಾವರು ಯೋಜನೆಗಳನ್ನು ರೂಪಿಸಿದ್ದು, ಮಹಿಳೆಯರಿಗೆ ಮಾತ್ರ ಶಸ್ತ್ರಚಿಕಿತ್ಸೆ ಮಾಡಲಾಗುತ್ತಿದ್ದು ಅದರಂತೆ ಪುರಷರಿಗೂ ಕೂಡ ಶಸ್ತ್ರಚಿಕಿತ್ಸೆ ನಡೆಸುವುದು ಅಗತ್ಯವಾಗಿದೆ. ಸರ್ಕಾರ ಜನ ಸಂಖ್ಯಾ ನಿಯಂತ್ರಣಕ್ಕೆ ಶಾಲಾ-ಕಾಲೇಜುಗಳಲ್ಲಿ ಪಠ್ಯ ಮುಖೇನ ಅರಿವು ಮೂಡಿಸಲು ಮುಂದಾಗಬೇಕು ಎಂದರು.
ಚೀನಾ ಮಾದರಿ: ಜಿಪಂ್ತ ಸದಸ್ಯ ಬಿ.ಡಿ.ಚಂದ್ರೇಗೌಡ ಮಾತನಾಡಿ, ಪ್ರಸ್ತುತ ಜನಸಂಖ್ಯಾ ಸಮಸ್ಯೆಗಳು ಹುಟ್ಟಿಕೊಳ್ಳುತ್ತಿವೆ ಎಂದರು. ತಾಲೂಕು ವೈದ್ಯಾಧಿಕಾರಿ ಡಾ.ಸಂಧ್ಯಾ ಮಾತನಾಡಿ, ಜಮಸಂಖ್ಯಾ ಸಮಸ್ಯೆ ಕುರಿತು ಶಾಲಾ ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಂಡಿರುವುದಾಗಿ ತಿಳಿಸಿದರು. ಜಿಲ್ಲಾ ಪಂಚಾಯ್ತಿ ಸದಸ್ಯೆ ಹೇಮಾವತಿ, ಜಿ.ಟಿ.ಇಂದಿರಾ, ತಾಪಂ ಸದಸ್ಯರಾದ ಸುಭಾನ್, ಪದ್ಮಾಕ್ಷಿ, ಸುಮಿತ್ರ, ಪುರಸಭೆ ಸದಸ್ಯ ಮಂಜುನಾಥ್, ಆಡಳಿತ ವೈಧ್ಯಾಧಿಕಾರಿ ಡಾ. ನಾಗೇಂದ್ರ ಇದ್ದರು.