ಧಾರ್ಮಿಕ ಕಾರ್ಯದಿಂದ ಧರ್ಮ ಉಳಿಯುತ್ತದೆ: ರೇವಣ್ಣ
ಕನ್ನಡಪ್ರಭ ವಾರ್ತೆ, ಬೇಲೂರು, ಜು. 21
ರಾಮಾನುಜಾಚಾರ್ಯರು, ಮಧ್ವಾಚಾರ್ಯರು ಹಾಗೂ ಶಂಕರಾಚಾರ್ಯರು ಸಮಾಜದ ಪರಿವರ್ತತನೆಗೆ ಶ್ರಮಿಸಿದ ಮಹಾನ್ ವ್ಯಕ್ತಿಗಳಾಗಿದ್ದಾರೆ ಎಂದು ಶಾಸಕ ಹೆಚ್.ಡಿ.ರೇವಣ್ಣ ಹೇಳಿದರು.
ಇಲ್ಲಿನ ಚನ್ನಕೇಶವ ದೇವಾಲಯದ ಸಮಿಪ ನೆಡೆಯುತ್ತಿರುವ ರಾಮನುಜಾರ್ಯರ ಸಹಸ್ರ ಸಂಭ್ರಮ ಮತ್ತು ವಿಷ್ಟು ಸಹಸ್ರ ನಾಮ ಹಾಗು ಧಾರ್ಮಿಕ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಧಾರ್ಮಿಕ ಕಾರ್ಯ: ದೇವರ ಅನುಗ್ರಹ ಇಲ್ಲದ ಕಾರಣ ದೇಶದಲ್ಲಿ ಬರಗಾಲ ಪರಿಸ್ಥತಿ ನೆಲಸಿದೆ ಜನರಲ್ಲಿ ದೈವ ಭಕ್ತಿ ಕಡಿಮೆಯಗುತ್ತಿದೆ ಪ್ರಸ್ತುತ ಧಾರ್ಮಿಕ ಕಾರ್ಯಕ್ರಮಗಳು ಹೆಚ್ಚು ನೆಡೆದಾಗ ಮಾತ್ರ ಧರ್ಮ ಉಳಿಯಲು ಸಾಧ್ಯ ಎಂದರು.
ಇಂದನ ಇಲಾಖೆಯಲ್ಲಿ ಅವ್ಯಹಾರಗಳು ನಡೆದಿದ್ದು, ಸರ್ಕಾರ ತನಿಖೆಗೆ ಮುಂದಾಗಬೇಕು. ಸರ್ಕಾರ ಅನವಶ್ಯಕ ಕೆಲಸಗಳಿಗೆ ಹೆಚ್ಚಿನ ಆದ್ಯತೆನೀಡುತ್ತಿದೆ. ಶಿಕ್ಷಣ ಇಲಾಖೆಗೆ 5 ಸಾವಿರ ಕೋಟಿ ರು. ಅನುದಾನ ಮೀಸಲಿಟ್ಟು ಶಿಕ್ಷಣ ಇಲಾಖೆಯ ಪ್ರಗತಿಗೆ ನೆರವಾಗಬೇಕು ಎಂದು ಒತ್ತಾಯಿಸಿದರು. ಸಭೆಯಲ್ಲಿ ಬೇಲಿಮಠದ ಶಿವರುದ್ರಸ್ವಾಮಿ, ಬೆಂಗಳೂರಿನ ತಿರುಸ್ವಾಮಿ, ಅರಳುಮಲ್ಲಿಗೆ ಪಾರ್ಥಸಾರಥಿ. ಬಿ.ಎಸ್.ಕೇಶವನ್, ಕೆ.ಕೆ.ಸ್ವಾಮಿ, ಜಿಲ್ಲಾ ಪಂಚಾಯ್ತಿ ಸದಸ್ಯ ಬಿ.ಡಿ.ಚಂದ್ರೇಗೌಡ, ಜೆಡಿಎಸ್ ತಾಲೂಕು ಅಧ್ಯಕ್ಷ ತೊ.ಚ.ಅನಂತಸುಬ್ಬರಾಯ, ಬಿ.ಸಿ.ಮಂಜುನಾಥ್, ಕೆ.ಎಸ್.ಲಿಂಗೇಶ್, ಬಿ.ಕೆ.ಭಗವಾನ್ ಇದ್ದರು.