ಬೇಲೂರು ಆಸ್ಪತ್ರೆ ಕಟ್ಟಡ ಕಾಮಗಾರಿ ಶೀಘ್ರ ಆರಂಭ
ಕನ್ನಡಪ್ರಭ ವಾರ್ತೆ, ಬೇಲೂರು, ಜು. 21
ಪಟ್ಟಣದ ಮಂಜಮ್ಮ ನಂಜೇಗೌಡ ಸರ್ಕಾರಿ ಆಸ್ಪತ್ರೆ ಮೇಲ್ದರ್ಜೆಗೇರಿದ್ದು, 100 ಹಾಸಿಗೆಗಳಿಗೆ ಅನುಗುಣವಾಗಿ ನಿರ್ಮಾಣವಾಗುತ್ತಿರುವ ಕಟ್ಟಡದ 2 ನೇ ಹಂತದ ನಿರ್ಮಾಣ ಕಾಮಗಾರಿ ಶೀಘ್ರವೇ ಆರಂಭವಾಗಲಿದೆ ಎಂದು ಶಾಸಕ ವೈ.ಎನ್. ರುದ್ರೇಶಗೌಡ ಹೇಳಿದರು.
ಇತ್ತೀಚೆಗೆ ನಡೆದ ಆರೋಗ್ಯ ರಕ್ಷಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕಟ್ಟಡದ 1 ನೇ ಹಂತದ ಕಾಮಗಾರಿ ಪೂರ್ಣಗೊಂಡಿದ್ದು, ಇದಕ್ಕೆ ಸಂಬಂಧಿಸಿದ ಕಾಮಗಾರಿ ಬಾಕಿ ಹಣ 60 ಲಕ್ಷ ರೂ. ಕೊಡಬೇಕಿದೆ. ಇದನ್ನು ಕೊಡದ ಹೊರತು 2 ನೇ ಹಂತದ ಕಾಮಗಾರಿ ಮಾಡುವುದಿಲ್ಲ ಎಂದು ಗುತ್ತಿಗೆದಾರರು ಕೆಲಸ ನಿಲ್ಲಿಸಿದ್ದಾರೆ. ಆದರೆ ಇದೀಗ ಗುತ್ತಿಗೆದಾರರ ಬಳಿ ಚರ್ಚಿಸಿದ್ದು, ಶೀಘ್ರದಲ್ಲಿ ಕೆಲಸ ಆರಂಭಿಸುವ ಭರವಸೆ ದೊರೆತಿದೆ ಎಂದು ತಿಳಿಸಿದರು.
ನಗುಮೊಗು ಆಂಬುಲೆನ್ಸ್: ನಗುಮೊಗು ಆಂಬುಲೆನ್ಸ್ ಸೇವೆ ಶೀಘ್ರ ಬರಲಿದ್ದು, ಇದರಲ್ಲಿ ಹೆರಿಗೆ ನಂತರ ಮನೆಗೆ ಬಾಣಂತಿ ಮಗುವನ್ನು ಮಾತ್ರ ಕರೆದುಕೊಂಡು ಹೋಗುವ ವ್ಯವಸ್ಥೆಯಿದೆ. ಬೇಲೂರು ಆಸ್ಪತ್ರೆಗೆ ತರಿಸಲಾಗಿದ್ದ ಆಂಬುಲೆನ್ಸ್ ಕೆಟ್ಟು ಹೋಗಿದ್ದು, ಚನ್ನರಾಯಪಟ್ಟಣದಿಂದ ಆಂಬ್ಯುಲೆನ್ಸ್ ತರಿಸಲಾಗಿದೆ. ಇಲ್ಲಿನ ಆಂಬ್ಯುಲೆನ್ಸ್ಗೆ ಖಾಯಂ ಚಾಲಕರು ಇಲ್ಲವಾಗಿದೆ. ಶೀಘ್ರ ನೇಮಕ ಮಾಡಿ ಸುವುದಾಗಿ ಶಾಸಕರು ತಿಳಿಸಿದರು.
ತಾಲೂಕು ವೈದ್ಯಾಧಿಕಾರಿ ಸಂಧ್ಯಾ ಮಾತನಾಡಿ, ತಾಲ್ಲೂಕಿನ ಹಲವು ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರ ಕೊರತೆಯಿದೆ. ವೈದ್ಯರು ಇಲ್ಲದ ಕಡೆಗೆ ಯರವಲು ಆಧಾರದ ಮೇಲೆ ವಾರಕ್ಕೆ 3 ದಿನ ಕಳುಹಿಸಿಕೊಡಲಾಗುತ್ತಿದೆ ಎಂದು ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯ ಬಿ.ಡಿ.ಚಂದ್ರೇಗೌಡ, ಜಿ.ಟಿ. ಇಂದಿರಾ ಧರ್ಮಪ್ಪ, ಹೇಮಾವತಿ ಮಂಜುನಾಥ್, ತಾಲೂಕು ಪಂಚಾ ಯಿತಿ ಅಧ್ಯಕ್ಷ ಪರ್ವತಯ್ಯ, ಆಡಳಿತ ವೈದ್ಯಾಧಿಕಾರಿ ನಾಗೇಂದ್ರ, ಡಾ. ನರಸೇಗೌಡ, ಸಮಿತಿಯ ಲೀಲಾ ವೆಂಕಟೇಶ್, ಹುನುಗನಹಳ್ಳಿ ಪ್ರಸನ್ನ ಗೌಡ, ಅಲೀಂ, ಪದ್ಮೇಗೌಡ ಇದ್ದರು.