ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಆಲೂರು ಸಂತೆ ವಾಟೇಹೊಳೆ ಕವರ್ ಡಕ್‌ಗೆ ಸ್ಥಳಾಂತರ

Vishwanath S
Updated On : 23 Jul 2014, 1:04 am

ಕನ್ನಡಪ್ರಭ ವಾರ್ತೆ ,  ಆಲೂರು ,  ಜು.22
ಪಟ್ಟಣದ ಮುಖ್ಯ ರಸ್ತೆಯ ಇಕ್ಕೆಲಗಳಲ್ಲಿ ನಡೆಯುತ್ತಿರುವ ಸಂತೆಯನ್ನು ವಾಟೇಹೊಳೆ ಇಲಾಖೆಯ ಕವರ್ ಡಕ್ ಬಳಿ ಸ್ಥಳಾಂತರಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದೆಂದು ಅಧ್ಯಕ್ಷೆ ನೀಲೂಫರ್ ತಿಳಿಸಿದರು.
ಪಟ್ಟಣ ಪಂಚಾಯ್ತಿ ಸಭಾಂಗಣದಲ್ಲಿ ಮಂಗಳವಾರ ನಡೆದ ಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪಪಂ ವ್ಯಾಪ್ತಿಯ 11 ವಾರ್ಡ್‌ಗಳಲ್ಲಿ ಮಳೆಗಾಲವಾದ್ದರಿಂದ ಸಾಂಕ್ರಾಮಿಕ ರೋಗಗಳು ಹರಡುವ ಹಿನ್ನೆಲೆಯಲ್ಲಿ ಸ್ವಚ್ಛತೆಗೆ ಹೆಚ್ಚಿನ ಒತ್ತು ನೀಡಲಾಗುವುದೆಂದ ಅವರು ಗಣಪತಿ ಬಾವಿಯ ಬಳಿ ಪಾರ್ಕ್ ನಿರ್ಮಾಣಕ್ಕೆ 20 ಲಕ್ಷ ರು. ಮೀಸಲಿಟ್ಟಿರುವುದಗಿ ತಿಳಿಸಿದರು.
ಸಚಿವರ ಬಳಿ ನಿಯೋಗ: ಪಟ್ಟಣ ಪಂಚಾಯ್ತಿ ಸದಸ್ಯ ಶಿವಣ್ಣ ಮಾತನಾಡಿ, ಪಟ್ಟಣದಲ್ಲಿ ಸರ್ಕಾರದ ಅನುದಾನದಲ್ಲಿ ರಸ್ತೆ ಚರಂಡಿಗಳನ್ನು ನಿರ್ಮಾಣ ಮಾಡುತ್ತಿದ್ದು ಯುಜಿಡಿ ನಿರ್ಮಾಣವಾಗದ ಹೊರತು ಇವುಗಳಿಂದ ಯಾವುದೇ ಪ್ರಯೋಜನ ವಾಗುವುದಿಲ್ಲ ಅದಕ್ಕಾಗಿ ಸಂಬಂಧ ಪಟ್ಟ ಉಸ್ತುವಾರಿ ಸಚಿವರ ಬಳಿಗೆ ಒಂದು ನಿಯೂಗ ಕಳುಹಿಸಿ ಶೀಘ್ರ ಮಂಜೂರಾತಿ ಮಾಡಿಸುವಂತೆ ಒತ್ತಾಯಿಸಿದರು.
ಸದಸ್ಯ ಜಯಣ್ಣ ಮಾತನಾಡಿ, ಮುಖ್ಯ ರಸ್ತೆಯ ಕಾಮಗಾರಿಗೆ ಮರ ಹಾಗೂ ಕಂಬ ತೆರವುಗೊಳಿಸಲು ಅರಣ್ಯ ಇಲಾಖೆ ಮತ್ತು ಕೆಇಬಿ ಯವರು ಸತಾಯಿಸುತ್ತಿದ್ದು ಈ ಸಂಬಂಧವಾಗಿ ಜಿಲ್ಲಾಧಿಕಾರಿಗಳ ಗಮನಕ್ಕೆ ತರಬೇಕೆಂದು ಒತ್ತಾಯಿಸಿದರು.
ಗಡಿ ವಿಸ್ತರಣೆ: ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ವಾಸುದೇವ್ ಮಾತನಾಡಿ, ಪಟ್ಟಣ ಪಂಚಾಯ್ತಿ 48 ಮಳಿಗೆಗಳಿಂದ 5 ಲಕ್ಷದ 66 ಸಾವಿರ ರು. ಬಾಡಿಗೆ ವಸೂಲಾಗುತ್ತಿದೆ. ಖಾಲಿ ಇರುವ ಮಳಿಗೆಗಳಿಗೆ ಸ್ಥಳೀಯ ಮೌಲ್ಯದಂತೆ ಬಾಡಿಗೆ ಗೊತ್ತುಮಾಡಿ ಮೇಲಧಿಕಾರಿಗಳ ಮಂಜೂರಾತಿಗೆ ಬರೆಯಲಾಗುವುದು. ಅಲ್ಲದೆ ಪಂಚಾಯ್ತಿ ವ್ಯಾಪ್ತಿಯಲ್ಲಿರುವ ಕೆಲವು ಬಡಾವಣೆಗಳ ಗಡಿ ವಿಸ್ತರಣೆಗಾಗಿ ಶಿಘ್ರ ಕ್ರಮ ಕೈಗೊಳ್ಳಲಲಾಗುವುದೆಂದರು. ಉಪಾಧ್ಯಕ್ಷೆ ಜಯಮ್ಮ,ಸದಸ್ಯ ಜಾಫರ್, ಮಂಜುನಾಥ್, ನಾಗರತ್ನ, ಮಂಜುನಾಥ, ಗಂಗಾಧರ್, ಎಂಜಿನಿಯರ್ ಶ್ಯಾಮ್, ಮಂಜು, ವೆಂಕಟೇಗೌಡ ಹಾಗೂ ಇತರರು ಇದ್ದರು.
ಮಳಿಗೆ ಹರಾಜು ಮಾಡಿ
ಸದಸ್ಯ ನಂದೀಶ್ ಮಾತನಾಡಿ, ಪಟ್ಟಣ ಪಂಚಾಯ್ತಿಗೆ ಹೆಚ್ಚಿನ ಆದಾಯ ತರುವ ನಿಟ್ಟಿನಲ್ಲಿ ಖಾಲಿ ಇರುವ ಮಳಿಗೆಗಳ ಹರಾಜು ಪ್ರಕ್ರಿಯೆ ನಡೆಸಬೇಕು ಹಾಗೂ ಕಡ್ಡಾಯವಾಗಿ ಬಾಡಿಗೆ ವಸೂಲಿ ಮಾಡುವುದರ ಜೊತೆಗೆ ಅಂಗಡಿ ಮುಂಗಟ್ಟನವರು ಪರವಾನಗಿ ಪಡೆಯಬೇಕು. ಇದಕ್ಕೆ ತಪ್ಪಿದಲ್ಲಿ ಅಂತಹವರ ಪರವಾನಗಿ ರದ್ದು ಪಡಿಸಬೇಕೆಂದರು. ಸದಸ್ಯೆ ಆಶಾ ಮಲ್ಲಿಕಾರ್ಜುನ್ ಮಾತನಾಡಿ, ಪೌರ ಕಾರ್ಮಿಕರಿಗೆ ಗ್ಲೌಸ್ ಸೇರಿದಂತೆ ಅಗತ್ಯ ಸಲಕರಣೆಗಳನ್ನು ಒದಗಿಸಬೇಕು ಹಾಗು ಖಾಸಗಿ ನಿವೇಶನಗಳಲ್ಲಿ ಕಸ ಸುರಿಯುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement