ಒತ್ತುವರಿ ರಸ್ತೆ ಜಾಗ ತೆರವಿಗೆ ಆಗ್ರಹಿಸಿ ಗ್ರಾಮಸ್ಥರ ಪ್ರತಿಭಟನೆ
ಕನ್ನಡಪ್ರಭ ವಾರ್ತೆ, ಹಾಸನ. ಜು 22
ಅಕ್ರಮವಾಗಿ ಒತ್ತುವರಿ ಮಾಡಿರುವ ಸರ್ಕಾರಿ ರಸ್ತೆಯ ಜಾಗವನ್ನು ತೆರವುಗೊಳಿಸುವಂತೆ ಆಗ್ರಹಿಸಿ ಎಂ.ಕೊಪ್ಪಲು ಗ್ರಾಮಸ್ಥರು ಮಂಗಳವಾರ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಜಿಲ್ಲೆಯ ಅರಸೀಕೆರೆ ತಾಲೂಕಿನ ಜಾವಗಲ್ ಹೋಬಳಿಯ ಎಂ.ಕೊಪ್ಪಲು ಗ್ರಾಮದ ನಾಯ್ಕನಕೆರೆ ಕಾವಲುನಲ್ಲಿ ಖಾಸಗಿಯವರು ಜಮೀನು ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಜನರಿಗೆ ಬೆದರಿಕೆ: ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿರುವ ಜಾಗದಿಂದ ಎಂ.ಕೊಪ್ಪಲು ಗ್ರಾಮದಿಂದ ಚಿಕ್ಕಲಿಂಗನಹಳ್ಳಿ ಗ್ರಾಮದವರೆಗೂ ಹೋಗಲು ರಸ್ತೆ ಇದೆ. ಗ್ರಾಮಸ್ಥರು ಈ ಮಾರ್ಗವಾಗಿ ಓಡಾಡುತ್ತಿದ್ದರು. ಆದರೇ ಜಮೂನು ಒತ್ತುವರಿ ಮಾಡಿರುವ ಸಿದ್ದೇಗೌಡ ಮತ್ತು ಅವನ ಮಕ್ಕಳು ಈ ಭಾಗದಲ್ಲಿ ತಿರುಗಾಡುವ ಜನರಿಗೆ ಅಡ್ಡಿ ಪಡಿಸಿ ಬೆದರಿಕೆ ಹಾಕುತ್ತಿದ್ದಾರೆ ಎಂದು ಆರೋಪಿಸಿದರು.
ದನ ಕರುಗಳು ಸಹ ಓಡಾಡಲು ಸಿದ್ದೇಗೌಡ ಅವಕಾಶ ನೀಡುತ್ತಿಲ್ಲ. ಇದರಿಂದ ಸಾರ್ವಜನಿಕರಿಗೆ, ದನಕರುಗಳಿಗೆ ತಿರುಗಾಡಲು ಬಹಳ ತೊಂದರೆ ಉಂಟಾಗುತ್ತಿದೆ ಎಂದು ಅವಲತ್ತುಕೊಂಡರು.
ಕ್ರಮಕ್ಕೆ ಆಗ್ರಹ: ಕೂಡಲೇ ಅಕ್ರಮವಾಗಿ ಒತ್ತುವರಿ ಮಾಡಿರುವ ಜಾಗವನ್ನು ತೆರವು ಮಾಡಬೇಕು. ಇಲ್ಲವಾದರೇ ಹೋರಾಟ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಗ್ರಾಮಸ್ಥರಾದ ಕುಮಾರ್, ಬಸವರಾಜ್, ಲೋಕೇಶ್ ಗೌಡ, ಸಂಬೇಗೌಡ, ಆನಂದ್, ರಾಜೇಗೌಡ, ರಂಗೇಗೌಡ, ಪುಟ್ಟರಾಜ್, ನಾಗರಾಜ್, ಮಂಜುನಾಥ್, ಮೋಹನ್, ಗಂಗಾಧರ್ ಹಾಗೂ ಇತರರು ಇದ್ದರು.