ಅಕ್ರಮ ಮದ್ಯ ಸಾಗಣೆ:ಇಬ್ಬರ ಬಂಧನ
ಹೊಳೆನರಸೀಪುರ: ಎರಡು ಪ್ರಕರಣದಲ್ಲಿ ತಾಲೂಕಿನ ಹಳ್ಳಿಮೈಸೂರು ಹಾಗೂ ಚಿಕ್ಕಬ್ಯಾಗತಹಳ್ಳಿ ಗ್ರಾಮಗಳ ಬಳಿಯಲ್ಲಿ ಆಕ್ರಮವಾಗಿ ಮದ್ಯವನ್ನು ಸಾಗಣೆ ಮಾಡುತ್ತಿದ್ದ ಆರೋಪದ ಮೇರೆಗೆ ಇಬ್ಬರನ್ನು ಬಂಧಿಸಿರುವ ಇಲ್ಲಿನ ಗ್ರಾಮಾಂತರ ಠಾಣೆ ಎಸ್ಸೈ ಲೋಕೇಶ್, 13 ಸಾವಿರ ಮೌಲ್ಯದ ಮದ್ಯವನ್ನು ವಶಕ್ಕೆ ತೆಗೆದುಕೊಂಡಿರುವ ಪ್ರಕರಣ ವರದಿಯಾಗಿದೆ. ತಾಲೂಕಿನ ಹಳ್ಳಿಮೈಸೂರಿನಿಂದ ಗುಡ್ಡೇನಹಳ್ಳಿ ಕಡೆಗೆ ಟಿವಿಎಸ್ ಎಕ್ಸೆಲ್ ಸ್ಕೂಟರ್ನಲ್ಲಿ 5ಬಾಕ್ಸ್ಗಳಲ್ಲಿ ಆಕ್ರಮವಾಗಿ ಮದ್ಯವನ್ನು ಸಾಗಿಸುತ್ತಿದ್ದ ಹಳ್ಳಿಮೈಸೂರಿನ ಮನು ಎಂಬಾತನನ್ನು ತಡೆದು ಪರಿಶೀಲಿಸಲಾಯುತು. ಅಕ್ರಮವಾಗಿ ಮಾರಾಟ ಮಾಡಲು ಕೊಂಡೊಯ್ಯುತ್ತಿದ್ದ ರು. 11.600ಮೌಲ್ಯದ ಮದ್ಯವನ್ನು ್ಚಲೀಸರು ವಶಕ್ಕೆ ತೆಗೆದುಕೊಂಡು, ಆರೋಪಿಯನ್ನ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಇನ್ನೊಂದು ಪ್ರಕರಣದಲ್ಲಿ ತಾಲೂಕಿನ ಚಿಕ್ಕಬ್ಯಾಗತಹಳ್ಳಿ ಗ್ರಾಮದ ಬಳಿಯಲ್ಲಿ ಅಂಗಡಿಯಲ್ಲಿ ಆಕ್ರಮವಾಗಿ ಮಾರಲು ಕೊಂಡೊಯ್ಯಲಾಗುತ್ತಿದ್ದ 1500 ಮೌಲ್ಯದ ಮದ್ಯವನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ಆರೋಪಿ ನಂಜೇಗೌಡ ಎಂಬಾತನನ್ನು ಬಂಧಿಸಿದ್ದಾರೆ.