ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಜನಸಂಖ್ಯಾ ಸ್ಫೋಟದಿಂದ ಸಮಸ್ಯೆಗಳು

Mainashree
Updated On : 23 Jul 2014, 11:59 am

 ಆಲೂರು,: ಜನಸಂಖ್ಯೆಯು ಮಿತಿಮೀರಿ ಏರಿಕೆಯಾದರೆ ದೇಶದಲ್ಲಿ ವಸತಿ, ಆಹಾರ, ನೀರು ಉದ್ಯೋಗ, ಆರೋಗ್ಯ , ಶಿಕ್ಷಣ ಇನ್ನು ಮುಂತಾದ ಗಂಭೀರ ಸಮಸ್ಯೆಗಳು ಎದುರಾಗುತ್ತವೆ ಎಂದು ಜಿಲ್ಲಾ ಪಂಚಾಯ್ತಿ ಸದಸ್ಯ  ಪುರುಷೋತ್ತಮ್ ತಿಳಿಸಿದರು.
ಪಟ್ಟಣದ ಸವಿತಾ ಸಮಾಜದ ಸಮುದಾಯ ಭವನದಲ್ಲಿ ಇತ್ತೀಚೆಗೆ ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ ಹಾಗೂ ಪೂರ್ಣ ಪ್ರೌಢಶಾಲೆಯ ಆಶ್ರಯದಲ್ಲಿ ಏರ್ಪಡಿಸಿದ್ದ ವಿಶ್ವ ಜನಸಂಖ್ಯಾ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿ, ಜನಸಂಖ್ಯಾ ಸ್ಪೋಟದಿಂದ ಸಮಾಜದಲ್ಲಿ ಮತ್ತು ದೇಶದಲ್ಲಿ ಎದುರಾಗುವ ಹಲವಾರು ಸಮಸ್ಯೆಗಳ ಬಗ್ಗೆ ಮಾತನಾಡಿದರು.
ಜನಸಂಖ್ಯೆ ದೇಶದ ಅಭಿವೃದ್ಧಿಗೆ ಮಾರಕ. ಅದಕ್ಕೆ ನಮ್ಮ ದೇಶ ಇನ್ನೂ ಮುಂದುವರಿಯುತ್ತಿರುವ ದೇಶವಾಗಿದೆಯೇ ವಿನ-  ಮುಂದುವರಿದ ದೇಶವಾಗಲು ಸಾಧ್ಯವಾಗಿಲ್ಲವೆಂದು ತಿಳಿಸಿದರು.
ತಾಲೂಕು ಆರೋಗ್ಯಾಧಿಕಾರಿ ಡಾ. ಎಚ್.ಆರ್. ತಿಮ್ಮಯ್ಯ ಮಾತನಾಡಿ, ಜನಸಂಖ್ಯಾ ಸ್ಪೋಟದ ಕುರಿತು ಆನೇಕ ಅಂಕಿ ಆಂಶಗಳನ್ನು ನೀಡಿದರು.
ಸಮಸ್ಯೆಗಳು: ವಿಶ್ವದ ಜನಸಂಖ್ಯೆಯು 1987ರ ಜುಲೈ 11ರಂದು 500 ಕೋಟಿಯನ್ನು ತಲುಪಿದ ಸಂದರ್ಭವನ್ನು ಪರಿಗಣಿಸಿ, ವಿಶ್ವ ಆರೋಗ್ಯ ಸಂಸ್ಥೆಯು ಜನಸಂಖ್ಯಾ ಸ್ಪೋಟದಿಂದ ಉಂಟಾಗುವ ಹಲವಾರು ಸಮಸ್ಯೆಗಳ ಬಗ್ಗೆ ಹೆಚ್ಚಿನ ಅರಿವು ಮೂಡಿಸುವ ಉದ್ದೇಶದಿಂದ ಪ್ರತಿ ವರ್ಷ ಜುಲೈ 11ರಂದು ವಿಶ್ವ ಜನಸಂಖ್ಯಾ ದಿನಚಾರಣೆಯನ್ನು ಆಚರಿಸಲಾಗುತ್ತದೆ ಎಂದು ತಿಳಿಸಿದರು. ವಿಶ್ವದ  ಜನಸಂಖ್ಯೆ 1999ರಲ್ಲಿ 600ಕೋಟಿಗೆ ತಲುಪಿದ್ದು, 2013ರ ಜೂನ್ ವೇಳೆಗೆ ವಿಶ್ವದ ಜನಸಂಖ್ಯೆ 715 ಕೋಟಿಯಾಗಿದೆ ಎಂದು ತಿಳಿಸಿದರು.
ಏರುಗತಿ: ಭಾರತದ ಜನಸಂಖ್ಯೆ ವಿಶ್ವದಲ್ಲೇ 2 ನೇ ಸ್ಥಾನದಲ್ಲಿದ್ದು, ಇದೇ ರೀತಿ ಮುಂದುವರೆದರೆ ಮೊದಲನೇ ಸ್ಥಾನಕ್ಕೆ ತಲುಪುತ್ತದೆ ಎಂದರು. 2011ರ ಜನಗಣತಿ ಪ್ರಕಾರ ಭಾರತದ ಜನಸಂಖ್ಯೆಯು  121ಕೋಟಿಗಳಾಗಿದ್ದು, ಇನ್ನೂ 40 ವರ್ಷಗಳಲ್ಲಿ ಇದು 240 ಕೋಟಿ ಆಗುವ ಸಾಧ್ಯತೆ ಇದೆ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಆಲೂರು ಪಟ್ಟಣ ಪಂಚಾಯ್ತಿ ಅಧ್ಯಕ್ಷೆ ನಿಲೂಫರ್ ಮಾತನಾಡಿ, ಜನಸಂಖ್ಯೆ ದಿನಚಾರಣೆ ಮಹತ್ವದ ಬಗ್ಗೆ ಮಾತನಾಡಿ, ಗಂಡು ಹೆಣ್ಣಿನ ಮದುವೆ ವಯಸ್ಸಿನ ಬಗ್ಗೆ ಯುವಜನರು ಗಮನಹರಿಸಬೇಕೆಂದರು.  
 ಕಾರ್ಯಕ್ರಮದಲ್ಲಿ ಪೂರ್ಣ ಪ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿ ಜಯಂತಿ ಇದ್ದರು. ಹಿರಿಯ ಆರೋಗ್ಯ ನೀರಿಕ್ಷಕ  ಎ.ವೈ. ರಾಜೇಗೌಡ ಸ್ವಾಗತಿಸಿ, ನಿರೂಪಿಸಿದರು. ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಜಿ.ಎಸ್. ಸತೀಶ್ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement