ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಎಲ್ಲರಿಗೂ ಕಾನೂನು ಅರಿವು ಅಗತ್ಯ: ನ್ಯಾ. ಚಂದ್ರಕಲಾ

Mainashree
Updated On : 24 Jul 2014, 10:11 am

ಅರಸೀಕೆರೆ: ಮನುಷ್ಯನ ಬದುಕಿಗೆ ಪೂರಕವಾದ ಜನನ ಮತ್ತು ಮರಣದ ಪತ್ರದಿಂದ ಪ್ರಾರಂಭವಾಗಿ ಆತನ ಜೀವಿತ ಅವಧಿಯ ಅನೇಕ ದಾಖಲೆಗಳ ದೋಷದಿಂದ ಸಹಸ್ರಾರು ಪ್ರಕರಣಗಳನ್ನು ನ್ಯಾಯಾಲಯದ ಮುಂದೆ ಬರುತ್ತಿದ್ದು, ಇಂತಹ ಸಮಸ್ಯೆಗಳ ಪರಿಹಾರಕ್ಕಾಗಿ ಜನರಲ್ಲಿ ಕಾನೂನುಗಳ ಬಗ್ಗೆ ಹೆಚ್ಚಿನ ಅರಿವು ಉಂಟು ಮಾಡಬೇಕಾಗಿದೆ ಎಂದು ಪಟ್ಟಣದ ಜೆಎಂಎಫ್‌ಸಿ ಹಿರಿಯ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶೆ  ಈ. ಚಂದ್ರಕಲಾ ತಿಳಿಸಿದರು.  
 ತಾಲೂಕು ಕಾನೂನು ಸೇವಾ ಸಮಿತಿ ಮತ್ತು ತಾಲೂಕು ಕಂದಾಯ ಇಲಾಖೆ ಹಾಗೂ ವಕೀಲರ ಸಂಘ ಇವರ ಸಂಯುಕ್ತ ಆಶ್ರಯದಲ್ಲಿ ಪಟ್ಟಣದ ತಾಲೂಕು ಕಚೇರಿಯಲ್ಲಿ ಬುಧವಾರ ಏರ್ಪಡಿಸಿದ್ದ ಕಾನೂನು ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ದೃಢೀಕರಣ ಪತ್ರ:  ನ್ಯಾಯಾಲಯದ ಮುಂದೆ ಬರುತ್ತಿರುವ ಪ್ರಕರಣಗಳ ಸಂಖ್ಯೆ ಪೈಕಿ ಕಂದಾಯ ಇಲಾಖೆಗೆ ಸಂಬಂಧಿಸಿದ ಪ್ರಕರಣಗಳ ಸಂಖ್ಯೆಯ ಪ್ರಮಾಣವು ಹೆಚ್ಚಾಗಿ ಕಂಡು ಬರುತ್ತಿದೆ. ವ್ಯಕ್ಯಿಯ ಜನನ ದೃಢೀಕರಣ ಪತ್ರದಿಂದ ಪ್ರಾರಂಭವಾಗಿ ಆಸ್ತಿಪಾಸ್ತಿಯ ದಾಖಲೆಗಳು ಮತ್ತು ಜೀವಿತ
ಅವಧಿಯ ಎಲ್ಲ ದಾಖಲೆಗಳ ಹಾಗೂ ಕಡೆಯದಾಗಿ ತಮ್ಮ ಮರಣದ ದೃಢೀಕರಣದ ಪತ್ರಗಳನ್ನು ಪಡೆಯಲು ತಾಲೂಕಿನ ಕಂದಾಯ ಇಲಾಖೆಯನ್ನೇ ಎಲ್ಲರೂ ಆವಲಂಭಿಸಬೇಕಾಗಿದೆ ಎಂದರು.
 ಹಿರಿಯ ಪ್ರಧಾನ ಸಿವಿಲ್ ನ್ಯಾಯಾಧೀಶ ದೇವಾನಂದ್ ಮಾತನಾಡಿ,  ದೇಶದ ಸರ್ವೋಚ್ಚ ನ್ಯಾಯಾಲಯವು ಕೂಡ ಗ್ರಾಮದ ಗ್ರಾಮಲೆಕ್ಕಿಗ ಬರೆಯುವ ದಾಖಲೆಗಳನ್ನೇ ಆಧಾರಿಸಿ ಇಂದು ತೀರ್ಪುಗಳನ್ನು ನೀಡುತ್ತಿವೆ. ದರಿಂದಾಗಿ ರೈತನ ಹಣೆಬರಹವು ಗ್ರಾಮ ಲೆಕ್ಕಿಗರ ಕೈಯಲ್ಲಿದೆ. ಆದ್ದರಿಂದ ಜನರಿಗೆ ಸಾಮಾನ್ಯ ಅಧಿಕಾರಿಗಳು ನೀಡುವ ನೋಟಿಸ್‌ಗೆ ಮಾನ್ಯತೆ ನೀಡಿ ತಕ್ಷಣವೇ ಸಮಸ್ಯೆಗಳನ್ನು ಸ್ಥಳದಲ್ಲಿಯೇ ಪರಿಹರಿಸಿಕೊಳ್ಳಲು ಪ್ರಯತ್ನಿಸಲು ಸಲಹೆ ನೀಡಿದರು.
ಪಿಟಿಸಿಎಲ್ ಕಾಯ್ದೆ:  ಅಧ್ಯಕ್ಷತೆ ವಹಿಸಿದ್ದ ತಹಸೀಲ್ದಾರ್ ನಟರಾಜ್ ಮಾತನಾಡಿ ಪರಿಶಿಷ್ಟ  ಜಾತಿ ಮತ್ತು ಪಂಗಡಕ್ಕೆ ಸರ್ಕಾರ 1978 ರಲ್ಲಿ ಜಾರಿಗೆ ತಂದ ಪಿಟಿಸಿಎಲ್ ಕಾಯ್ದೆ ಕುರಿತು ಮಾಹಿತಿ ನೀಡಿದರು.
 ವಕೀಲರ ಸಂಘದ ಅಧ್ಯಕ್ಷ ಎಚ್.ಆರ್.ಪ್ರಸನ್ನ ಮಾತನಾಡಿ ಪ್ರತಿಯೊಬ್ಬ ವ್ಯಕ್ತಿಯೂ ದೇಶದ ಸಾಮಾನ್ಯ ಕಾನೂನುಗಳ ಬಗ್ಗೆ ಹೆಚ್ಚಿನ ತಿಳುವಳಿಕೆ ಹೊಂದಿದ್ದರೇ ಆತ ತನ್ನ ಜೀವನದಲ್ಲಿ ಸುಖ, ಶಾಂತಿ, ನೆಮ್ಮದಿಯ ಬದುಕು ಸಾಧಿಸಲು ಸಾಧ್ಯವೆಂದರು.
 ವಕೀಲರ ಸಂಘದ ಅಧ್ಯಕ್ಷ ಎಚ್.ಆರ್. ಪ್ರಸನ್ನ ಮಾತನಾಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement