ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಶೀಘ್ರದಲ್ಲೇ ಸಮ್ಮತಿ
ಕ.ಪ್ರ.ವಾರ್ತೆ ್ಣ ಜಾವಗಲ್ ್ಣ ಜು. 24
ಜನ ಜಾನುವಾರುಗಳಿಗೆ ಕುಡಿಯುವ ನೀರಿಗಾಗಿ ಹೋಬಳಿಯ ಕೆರೆಗಳಿಗೆ ನೀರು ತುಂಬಿಸುವ 79 ಕೋಟಿ ರು ವೆಚ್ಚದ ಯೋಜನೆಯನ್ನು ಶೀಘ್ರವಾಗಿ ಮಂಜೂರು ಮಾಡಿಸಿಕೊಡುವುದಾಗಿ ಶಾಸಕ ವೈಎನ್.ರುದ್ರೇಶಗೌಡ ಭರವಸೆ ನೀಡಿದರು.
ಹೋಬಳಿಯ ಉಂಡಿಗನಾಳು ಗ್ರಾಮದಲ್ಲಿ ಸುವರ್ಣ ಗ್ರಾಮಯೋಜನೆ ಅಡಿ 43 ಲಕ್ಷ ರು. ವೆಚ್ಚದ ಕಾಂಕ್ರೀಟ್ ರಸ್ತೆ, ಅಂಗನವಾಡಿ ಕಟ್ಟಡ ಉದ್ಘಾಟಿಸಿ ಮಾತನಾಡಿ, ಜಾವಗಲ್ ಹೋಬಳಿಯು ತೀವ್ರ ಬರಗಾಲಕ್ಕೆ ತುತ್ತಾಗಿದೆ. ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಸರ್ಕಾರದಿಂದ ಸಕಾರಾತ್ಮಕ ಪ್ರತಿಕ್ರಿಯೆ ಬಂದಿದ್ದು 3-4 ತಿಂಗಳಲ್ಲಿ ಯೋಜನೆ ಮಂಜೂರುಮಾಡಿಸುವುದಾಗಿ ತಿಳಿಸಿದರು.
ರಸ್ತೆ ಕಾಮಗಾರಿ: ಉಂಡಿಗನಾಳು-ಅಪ್ಪಿಹಳ್ಳಿವರೆಗಿನ 6.5 ಕಿ.ಮಿ. ರಸ್ತೆಗೆ ಪ್ರಧಾನಮಂತ್ರಿ ಸಡಕ್ ಯೋಜನೆ ಅಡಿ 4.5 ಕೋಟಿ ರು. ಮಂಜೂರಾಗಿದ್ದು ಕಾಮಗಾರಿ ಪ್ರಾರಂಭಿಸಲಾಗುವುದು ಎಂದರು.
ಉಂಡಿಗನಾಳು- ಜಾವಗಲ್ ರಸ್ತೆ ಅಭಿವೃದ್ಧಿ1.5ಕೋಟಿ ರು.,ನರಸಿಂಹಸ್ವಾಮಿ ದೇವಾಲಯದ ಸುತ್ತ ಕಾಂಕ್ರೀಟ್ ರಸ್ತೆ ಅಭಿವೃದ್ದಿಗೆ1.5ಕೋಟಿ ರು. ಮಂಜೂರು ಮಾಡಿಸಿರುವುದಾಗಿ ತಿಳಿಸಿದರು.
ಮಾಜಿ ಪ್ರಧಾನ್ ಎನ್.ಪಿ.ಮಲ್ಲೇಶಪ್ಪ ಮಾತನಾಡಿ, ನೇರ್ಲಿಗೆ, ಮೊಸಳೆ, ಹಂದ್ರಾಳುಹೊನ್ನೇಕೆರೆ, ಹೊಸಳ್ಳಿ ಕೆರೆಗಳ ಹೆಸರು ಪಟ್ಟಿಯಲ್ಲಿ ಕೈಬಿಟ್ಟಿದ್ದು, ಅವುಗಳನ್ನು ಸೇರಿಸಿ ಯೋಜನೆಯನ್ನು ತ್ವರಿತವಾಗಿ ಮಂಜೂರುಮಾಡಿಸಿ ಜನ-ಜಾನುವಾರುಗಳಿಗೆ ಅನುಕೂಲಮಾಡಿಕೊಡುವಂತೆ ಮನವಿ ಮಾಡಿದರು.
ನೀರಿಗೆ ಆದ್ಯತೆ ನೀಡಿ: ಗ್ರಾಪಂ ಮಾಜಿ ಅಧ್ಯಕ್ಷ ಶಾಂತಕುಮಾರ್, ಉಪಾಧ್ಯಕ್ಷ ಪರಮೇಶ್, ನೀಲಕಂಠಪ್ಪ, ಹಂದ್ರಾಳು ಪಹಣಿ ಬಸವರಾಜು, ಮಹಂತೇಶ, ಕರಗುಂದ ಬಸವರಾಜು, ಮತ್ತಿತರರು ಮಾತನಾಡಿ ಎಲ್ಲ ಅಭಿವೃದ್ಧಿ ಕೆಲಸಗಳಿಗಿಂತಲೂ, ಮೊದಲು ನೀರಿನ ಬವಣೆ ನೀಗಿಸುವ ಯೋಜನೆಗೆ ಆದ್ಯತೆ ನೀಡುವಂತೆ ಮನವಿ ಮಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಪಂ ಅಧ್ಯಕ್ಷೆ ಗೀತಾ ವಹಿಸಿದ್ದರು. ಗ್ರಾಪಂ ಸದಸ್ಯರಾದ ಕುಮಾರಸ್ವಾಮಿ, ವಿಭೂಷಣ, ಶೀಲಾ ಸೋಮಶೇಖರ್, ಲೋಕೇಶ್ ಇತರರು ಇದ್ದರು.